Skip to main content
2019 ರ ವರ್ಷದ ಆರ್. ಜೆ. ಪ್ರಶಸ್ತಿ ಪಡೆದ ಆರ್.ಜೆ. ಶೃತಿ.

ವರ್ಷದ ಆರ್.ಜೆ ಪ್ರಶಸ್ತಿಗೆ ಪಾತ್ರರಾದ ಆರ್. ಜೆ. ಶೃತಿ.

2019ರ ಇಂಡಿಯಾ ರೇಡಿಯೋ ಫೋರಂ ನಲ್ಲಿ 92.7 ಬಿಗ್ ಎಫ್ಎಂನ ಆರ್ ಜೆ ಶೃತಿ 'ವರ್ಷದ ಆರ್ ಜೆ ' ಗೌರವಕ್ಕೆಪಾತ್ರರಾಗಿದ್ದಾರೆ ಬಿಗ್ ಎಫ್ಎಂನ ಶೃತಿ

ಆರ್ ಜೆ  ಶೃತಿ

ಕನ್ನಡ ವಿಭಾಗದಲ್ಲಿ 'ಬಿಗ್ ಕಾಫಿ' ಕಾರ್ಯಕ್ರಮಕ್ಕಾಗಿ 'ಆರ್ ಜೆ ಆಫ್ ದಿ ಇಯರ್' ಮತ್ತು 'ಅತ್ಯುತ್ತಮ ರೇಡಿಯೋ ಷೋ' ಪ್ರಶಸ್ತಿಯನ್ನು ಪಡೆದಿದ್ದಾರೆ ಬೆಂಗಳೂರು, 13th ಜೂನ್ 2019: ಇತ್ತೀಚೆಗೆ ನಡೆದ ಇಂಡಿಯಾ ರೇಡಿಯೊ ಫೋರಮ್ 2019 ರಲ್ಲಿ 14 ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಭಾರತದ ಅತಿದೊಡ್ಡ ರೇಡಿಯೋ ಜಾಲತಾಣಗಳಲ್ಲಿ ಒಂದಾದ92.7 ಬಿಗ್ ಎಫ್ಎಂಗೆ ಇದು ಪ್ರಶಂಸೆಯ ಗರಿಯನ್ನು ಮುಡಿಗೇರಿಸಿಕೊಳ್ಳುವಂತೆ ಮಾಡಿದೆ. ರೇಡಿಯೋ ಉದ್ಯಮದಲ್ಲಿ 'ಆರ್ ಜೆ ಆಫ್ ದಿ ಇಯರ್' ವಿಭಾಗದ ಪ್ರಶಸ್ತಿಗೆ ತನ್ನದೇ ಅದ ಗೌರವವಿದ್ದು ಇದುಅತ್ಯುತ್ತಮ ವಿಷಯ ಮತ್ತು ಸೃಜನಶೀಲತೆಯನ್ನು ಗುರುತಿಸುವ ಒಂದು ಪ್ರತಿಷ್ಠಿತ ಪ್ರಶಸ್ತಿ ವೇದಿಕೆಯಾಗಿದೆ.

ಹದಿನಾಲ್ಕು ಪ್ರಶಸ್ತಿಗಳ ಪೈಕಿ, ಬಿಗ್ ಎಫ್ಎಂನ ಆರ್.ಜೆ. ಶೃತಿ ಕನ್ನಡ ವಿಭಾಗದ 'ಆರ್ ಜೆ ಆಫ್ ದಇಯರ್' ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 92.7 ಬಿಗ್ ಎಫ್ ಎಂ ಬೆಂಗಳೂರಿನ ಜನಪ್ರಿಯ ‘ಬಿಗ್ ಕಾಫಿ’ ಪ್ರದರ್ಶನಕ್ಕೆ 'ಅತ್ಯುತ್ತಮ ರೇಡಿಯೋ ಷೋ-ಕನ್ನಡ'ದಡಿಯಲ್ಲಿ ಈ ಪ್ರಶಸ್ತಿ ಗೆದ್ದಿದ್ದಾರೆ. ಆರ್ ಜೆಶೃತಿ ಪ್ರಸ್ತುತ ಪ್ರತಿದಿನ ಬೆಳಿಗ್ಗೆ 7ರಿಂದ 11ರವರೆಗೆ ಬಿಗ್ ಕಾಫಿ- 'ಪಟಾಕಿ ಮಾರ್ನಿಂಗ್ಸ್' ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಬೆಂಗಳೂರು ರೇಡಿಯೊ ಸ್ಟೇಶನ್, ಡ್ರಿಂಕ್ ಮತ್ತು ಡ್ರೈವ್ ರೇಡಿಯೋ ಟೆಸ್ಟ್ ಪ್ರಚಾರಕ್ಕಾಗಿ 'ಬೆಸ್ಟ್ ರೇಡಿಯೋ ಪ್ರೋಮೋ' ವಿಭಾಗದಲ್ಲಿ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮರಾಠಿ ವಿಭಾಗಗಳಿಗೆ 'ವರ್ಷದ ಆರ್ ಜೆ’ ಪ್ರಶಸ್ತಿಯನ್ನು ಹೊರತುಪಡಿಸಿ, ಬಿಗ್ ಎಫ್ಎಂ ವಿವಿಧ ವಿಭಾಗಗಳು ಚಿನ್ನದ ಪದಕಗಳನ್ನು ಪಡೆದುಕೊಂಡವು, ಅವುಗಳಲ್ಲಿಅತ್ಯುತ್ತಮ ರೇಡಿಯೊ ಷೋ (ನಾನ್-ಬ್ರೇಕ್ಫಾಸ್ಟ್-ಹಿಂದಿ), ಅತ್ಯುತ್ತಮ ರೇಡಿಯೋ ಶೋ (ಕನ್ನಡ), ಅತ್ಯುತ್ತಮ ರೇಡಿಯೋ ಶೋ (ಮರಾಠಿ), ಅತ್ಯುತ್ತಮ ರೇಡಿಯೊ ಶೋ (ಹಿಂದಿ- ನಾನ್-ಮೆಟ್ರೋ ಸ್ಟೇಷನ್),ಅತ್ಯುತ್ತಮ ರೇಡಿಯೋ ಸ್ಪಾರ್ಕ್ಲರ್ (ಹಿಂದಿ) ಪ್ರಶಸ್ತಿಗಳೂ ಸೇರಿದ್ದವು. ಪ್ರಶಸ್ತಿಯನ್ನು ಗೆದ್ದ ಬಳಿಕ ಅನುಭವವನ್ನು ಹಂಚಿಕೊಂಡ ಆರ್.ಜೆ.ಶೃತಿ, "ಇದು ಹ್ಯಾಟ್ರಿಕ್. ಪ್ರತಿ ಬಾರಿ ನಾನು ಪ್ರಶಸ್ತಿ ಸ್ವೀಕರಿಸುವುದೂ ನನಗೆ ಮೊದಲ ಅನುಭವವವನ್ನೇ ನೀಡುತ್ತದೆ ಹಾಗೂ ನನ್ನ ಕನಸುನನಸಾದ ಸಂತಸವಾಗುತ್ತದೆ.

ಆರ್. ಜೆ. ಶೃತಿ

ನಾನು ಐಆರ್ ಎಫ್ ಅನ್ನು ರೇಡಿಯೋ ಆಸ್ಕರ್ ಎಂದು ಕರೆಯುತ್ತೇನೆ ಮತ್ತು ಅದು ಆಸ್ಕರ್ ಗೆದ್ದಂತ ಖುಷಿ ಕೊಡುತ್ತದೆ. ಈ ವರ್ಷ ಕೂಡಾ, ನಾನು ವೇದಿಕೆಯ ಮೇಲೆಹೋಗುತ್ತಿದ್ದೇನೆ ಮತ್ತು ಪ್ರಶಸ್ತಿಯನ್ನು ಸ್ವೀಕರಿಸಲಿದ್ದೇನೆ. ಫಲಿತಾಂಶಗಳನ್ನು ಪ್ರಕಟಿಸುವ ಮುಂಚೆಯೇ ನಾವೆಲ್ಲರೂ ಈ ಸಂತಸವನ್ನು ಅನುಭವಿಸಬಹುದು. ನಾನು ಎರಡು ಪ್ರಶಸ್ತಿಗಳನ್ನು ಗೆದ್ದಿದ್ದೇನೆ: 'ವರ್ಷದ ಆರ್ ಜೆ’ ಮತ್ತು ಕನ್ನಡ ವಿಭಾಗದಲ್ಲಿ 'ಬಿಗ್ ಕಾಫಿ'ಗಾಗಿ ಅತ್ಯುತ್ತಮ ರೇಡಿಯೊ ಶೋ. ನನ್ನ ಪ್ರಾರ್ಥನೆಗೆ ಮತ್ತೊಮ್ಮೆ ಫಲ ದೊರೆತಂತಾಗಿದೆ. ಇದರರ್ಥ ನಾನು ಮುಂದಿನ ವರ್ಷದಲ್ಲಿ ಪ್ರಶಸ್ತಿಗಳನ್ನುಪಡೆಯಲು ಇನ್ನಷ್ಟು ಶ್ರಮ ಹಾಕಬೇಕು ಹಾಗೂ ಇದಕ್ಕಾಗಿ ಈಗಾಗಲೇ ಹೋಮ್ ವರ್ಕ್ ಆರಂಭವಾಗಿದೆ.

ನನ್ನನ್ನು ನಂಬಿದ ಎಲ್ಲರಿಗೂ ಧನ್ಯವಾದ ಹೇಳಲು ನಾನು ಬಯಸುತ್ತೇನೆ. ಇದು ನಿಜಕ್ಕೂ ನನಗೆಬಹಳ ದೊಡ್ಡದು!” ಎಂದರು. ಅತ್ಯಂತ ಪ್ರಧಾನ ಮತ್ತು ಪ್ರಮುಖ ರೇಡಿಯೋ ಜಾಲಗಳಲ್ಲಿ ಒಂದಾದ ಬಿಗ್ ಎಫ್ಎಂ ಅದರ ಆರಂಭವಾದ ದಿನದಿಂದಲೇ ಹಲವಾರು ರಾಷ್ಟ್ರೀಯ ಮತ್ತು ನಗರ-ನಿರ್ದಿಷ್ಟ ಕಾರ್ಯಕ್ರಮಗಳಿಗೆ ಪ್ರಶಸ್ತಿಯನ್ನುಪಡೆದುಕೊಂಡಿದೆ.

ನಮ್ಮ ಪ್ರತಿಭಾವಂತ ಮತ್ತು ಜನಪ್ರಿಯ ಆರ್ ಜೆಗಳು ಕಾರ್ಯಕ್ರಮದ ಮೌಲ್ಯವನ್ನು ವರ್ಧಿಸಿದ್ದಾರೆ, ಅವರು ಮಾರುಕಟ್ಟೆಗಳಲ್ಲಿ ಕೇಳುಗರೊಂದಿಗೆ ಬಲವಾದ ಸಂಪರ್ಕವನ್ನುಹೊಂದಿದ್ದಾರೆ. ರೇಡಿಯೋ ಪ್ರಶಸ್ತಿಗಳನ್ನು ಇಂಡಿಯ ರೇಡಿಯೋ ಫಾರಂ (ಐಆರ್ ಎಫ್) ಎಕ್ಸಲೆನ್ಸ್ ಇನ್ ರೇಡಿಯೋ ಅವಾರ್ಡ್ಸ್ (ಇ.ಆರ್.ಎ) ಅತ್ಯುತ್ತಮ ರೇಡಿಯೋ ಕಾರ್ಯಕ್ರಮಗಳನ್ನು, ಮಾರ್ಕೆಟಿಂಗ್,ರೇಡಿಯೋ ವ್ಯಕ್ತಿತ್ವಗಳನ್ನು, ಪ್ರಚಾರಗಳನ್ನು ಮತ್ತು ಸೃಜನಾತ್ಮಕತೆಯನ್ನು ಗುರುತಿಸಿ ನೀಡುತ್ತದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.