ವರಮಹಾಲಕ್ಷ್ಮೀ ಹಬ್ಬದಂದು 'ಕಾಲಚಕ್ರ' ದ ಅದ್ದೂರಿ ಹಾಡು ಬಿಡುಗಡೆ
ವರಮಹಾಲಕ್ಷ್ಮೀ ಹಬ್ಬದಂದು 'ಕಾಲಚಕ್ರ' ದ ಅದ್ದೂರಿ ಹಾಡು ಬಿಡುಗಡೆ.

ವಸಿಷ್ಠ ಎನ್ ಸಿಂಹ ನಾಯಕರಾಗಿ ನಟಿಸಿರುವ, ರಶ್ಮಿ ಫಿಲಂಸ್ ಮೂಲಕ ರಶ್ಮಿ ಕೆ ಅವರು ನಿರ್ಮಿಸಿರುವ 'ಕಾಲಚಕ್ರ' ಚಿತ್ರದ 'ತರಗೆಲೆ' ಹಾಡು ವರಮಹಾಲಕ್ಷ್ಮೀ ಹಬ್ಬದಂದು ಸಂಜೆ 6ಗಂಟೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಸಂತೋಷ್ ನಾಯಕ್ ರಚಿಸಿರುವ ಈ ಹಾಡನ್ನು ಹೆಸರಾಂತ ಗಾಯಕ ಕೈಲಾಷ್ ಕೇರ್ ಹಾಡಿದ್ದಾರೆ.

ಸುಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಈ ಸಂಗೀತ ನೀಡಿದ್ದಾರೆ. ಸುಮಂತ್ ಕ್ರಾಂತಿ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ತೆರೆಗೆ ಬರಲು ಸಿದ್ದವಾಗಿದೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಲಾಕ್ ಡೌನ್ ಗೂ ಮುನ್ನ ನಡೆದಿದ್ದ ಅದ್ದೂರಿ ಸಮಾರಂಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ 'ಕಾಲಚಕ್ರ' ಚಿತ್ರದ ಟೀಸರ್ ಬಿಡುಗಡೆ ಮಾಡಿ, ಮೆಚ್ಚುಗೆ ಸೂಚಿಸಿದ್ದರು. 'ಕಾಲಚಕ್ರ'ದ ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಗೊಂಡು ಸಿನಿರಸಿಕರ ಮನಗೆದ್ದಿದೆ. ಎಲ್ ಎಂ ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ವಸಿಷ್ಠ ಎನ್ ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Recent comments