Skip to main content
ವೆಂಕಟ್ ಭಾರದ್ವಾಜ್ ನಿರ್ದೇಶನದ ಹೊಸ ಚಿತ್ರ "ನಗುವಿನ ಹೂಗಳ ಮೇಲೆ "

ವೆಂಕಟ್ ಭಾರದ್ವಾಜ್ ನಿರ್ದೇಶನದ ಹೊಸ ಚಿತ್ರ "ನಗುವಿನ ಹೂಗಳ ಮೇಲೆ "

ಅಗಸ್ಟ್ ೧೫ ರಂದು ವೆಂಕಟ್ ಭಾರದ್ವಾಜ್ ನಿರ್ದೇಶನದ ಹೊಸ ಚಿತ್ರ "ನಗುವಿನ ಹೂಗಳ ಮೇಲೆ " ಚಿತ್ರದ ಶೀರ್ಷಿಕೆ ಹಾಗೂ ಸ್ಕ್ರಿಪ್ಟ್ ಪೂಜೆ ಜಯನಗರದ ಅಭಯ ಗಣಪತಿ ಹಾಗೂ ನಿಮಿಷಾಂಬ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು,

ವೆಂಕಟ್ ಭಾರದ್ವಾಜ್ ನಿರ್ದೇಶನದ ಹೊಸ ಚಿತ್ರ "ನಗುವಿನ ಹೂಗಳ ಮೇಲೆ "

ಚಿತ್ರದ ಪೂಜಾ ಸಂದರ್ಭದಲ್ಲಿ ಚಲನ ಚಿತ್ರ ಪ್ರಚಾರ ಕರ್ತ ಸುಧೀಂದ್ರ ವೆಂಕಟೇಶ್ ರವರು ಹಾಜರಿದ್ದರು.

" ನಗುವಿನ ಹೂವುಗಳ ಮೇಲೆ" ಹೆಸರು ಹೇಳಿದಂತೆ ಇದು ಒಂದು ಪ್ರೇಮಕಥಾ ಹಂದರ ವಾಗಿದ್ದು ವೆಂಕಟ್ ಭಾರದ್ವಾಜ್ ರವರ 10ನೇ ಚಿತ್ರವಾಗಿದೆ. ಈ ಚಿತ್ರಕ್ಕೆ ತೆಲುಗು ಚಿತ್ರರಂಗದ ಹೆಸರಾಂತ ನಿರ್ಮಾಪಕರಾದ ಶ್ರೀ ಕೆಕೆ ರಾಧಾ ಮೋಹನ್ ನಿರ್ಮಾಣ ಮಾಡುತ್ತಿದ್ದಾರೆ. ರಾಧಾ ಮೋಹನ್ ಅವರು ತೆಲುಗು ಚಿತ್ರರಂಗದಲ್ಲಿ ಸುಮಾರು ಹತ್ತು ದೊಡ್ಡ ಚಿತ್ರಗಳನ್ನು ನಿರ್ಮಿಸಿದ್ದು ' ನಗುವಿನ ಹೂಗಳ' ಮೇಲೆ ಚಿತ್ರವೂ ಮೊದಲ ಕನ್ನಡ ಚಿತ್ರವಾಗಿದ್ದು ಬಹಳಷ್ಟು ನಿರೀಕ್ಷೆಯನ್ನು ಈ ಚಿತ್ರದ ಮೇಲೆ ಇಟ್ಟಿದ್ದಾರೆ. ಇತ್ತೀಚಿಗೆ ವೆಂಕಟ್ ಭಾರದ್ವಾಜ್ ರವರ ಆಮ್ಲೆಟ್ ಚಿತ್ರ ನೋಡಿ ಮೆಚ್ಚಿ e ಚಿತ್ರವನ್ನು ಮಾಡಲು ಮುಂದೆ ಬಂದಿದ್ದೇನೇ ಎಂದು ವಿವರಿಸಿದರು.

ಈ ಚಿತ್ರದಲ್ಲಿ ಹೊಸ ನಾಯಕಿ ಹಾಗೂ ನಾಯಕನನ್ನು ಪರಿಚಯಿಸಲು ವೆಂಕಟ್ ಭಾರದ್ವಾಜ್ ರವರು ಹುಡುಕಾಟದಲ್ಲಿದ್ದಿನಿ ,ಈ ವಾರ ನಾಯಕ ಮತ್ತು ನಾಯಕಿ ಗಾಗಿ ಆಡಿಶನ್ ಕೂಡ ಕರೆಯಲಾಗಿದೆ ಯಂದು ನಿರ್ದೇಶಕರು ತಿಳಿಸಿದರು. "ನಗುವಿನ ಹೂಗಳ ಮೇಲೆ" ಮೊಟ್ಟಮೊದಲ ಪ್ರೇಮಕಥ ವಸ್ತುವನ್ನು ವೆಂಕಟ್ ಭಾರದ್ವಾಜ್ ಅವರು ತೆರೆಯ ಮೇಲೆ ತರುವುದಕ್ಕೆ ಎಲ್ಲಾ ಪ್ರೆ ಪ್ರೊಡಕ್ಷನ್ ಕೆಲಸ ಮುಗಿಸಿದ್ದಾರೆ. ಚಿತ್ರವು ಒಂದೇ ಹಂತದಲ್ಲಿ ಚಿತ್ರೀಕರಣ ಮಾಡಲು ಸಜ್ಜಾಗುತ್ತಿದ್ದು ಬೆಂಗಳೂರು ಶಿವಮೊಗ್ಗ ತೀರ್ಥಹಳ್ಳಿ ಕುಂದಾಪುರ ಮತ್ತು ಮರವಂತೆ ಜಾಗದಲ್ಲಿ ಚಿತ್ರೀಕರಣ ಮಾಡಲು ತಂಡ ಸಜ್ಜಾಗಿದೆ. "ನಗುವಿನ ಹೂಗಳ ಮೇಲೆ" ಚಿತ್ರವು ಸಂಗೀತಮಯ ಮತ್ತು ಪ್ರಕೃತಿಯ ಮಡಿಲಲ್ಲಿ ನಡೆಯುವ ಕಥೆಯಾಗಿದ್ದು ಚಿತ್ರಕ್ಕೆ ಲವ್ ಪ್ರಾನ್ ಮೆಹತಾ ರವರು ಆರು ಹಾಡುಗಳನ್ನು ನಿರ್ದೇಶನ ಮಾಡಿದ್ದು ಇದಕ್ಕೆ ಚಿದಂಬರ ನರೇಂದ್ರ , ನರೇಂದ್ರಬಾಬು, ಮಹೇಶ್ ಮತ್ತು ಪ್ರಮೋದ್ ಮರವಂತೆ ಗೀತೆಗಳನ್ನು ರಚಿಸಿದ್ದಾರೆ. ಚಿತ್ರಕ್ಕೆ ಚಂದನ್ ಅವರ ಸಂಕಲನ, ಪ್ರಮೋದ್ ಭಾರತೀಯ ರವರ ಛಾಯಾಗ್ರಹಣ, ಲಾರೆನ್ಸ್ ಪ್ರೀತಮ್ ರವರ ಸಹನಿರ್ದೇಶನ ವಿದೆ. ಸೆಪ್ಟೆಂಬರ್ ಎರಡನೆಯ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂದು ಚಿತ್ರತಂಡ ನಮ್ಮೊಂದಿಗೆ ಹಂಚಿಕೊಂಡಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.