Skip to main content
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ "TT #50" ಆಗಸ್ಟ್ ನಲ್ಲಿ ತೆರೆಗೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ "TT #50" ಆಗಸ್ಟ್ ನಲ್ಲಿ ತೆರೆಗೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ "TT #50" ಆಗಸ್ಟ್ ನಲ್ಲಿ ತೆರೆಗೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ "TT #50" ಆಗಸ್ಟ್ ನಲ್ಲಿ ತೆರೆಗೆ.

ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಜನರ ಬೆಂಬಲ ಸಿಕ್ಕಿದ್ದು ಹೆಚ್ಚು. ಅದರಲ್ಲೂ ಇತ್ತೀಚಿಗೆ ಹೊಸ ತಂಡ ಕಟ್ಟಿಕೊಂಡು ವಿಭಿನ್ನ ಕಥಾಹಂದರದ ಚಿತ್ರಗಳನ್ನು ನಿರ್ಮಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ ಒಂದು ಉತ್ಸಾಹಿ ತಂಡದಿಂದ ವಿಭಿನ್ನ ಕಥೆಯ "TT # 50" ಚಿತ್ರ ಸಿದ್ದವಾಗಿ, ಇದೇ ಅಗಸ್ಟ್ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೂಲತಃ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಕೃಷ್ಣ. ಎಲ್ ರಂಗಭೂಮಿಯೊಂದಿಗೆ ಒಡನಾಟ ಹೊಂದಿರುವವರು. ಹಿರಿತೆರೆಯಲ್ಲಿ ಮೊದಲ ಬಾರಿಗೆ ತಾವೇ ಕಥೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ನಿರ್ಮಾಣ ಕೂಡ ಇವರದೆ. ಸಸ್ಪೆನ್ಸ್ ಕಥಾಹಂದರವುಳ್ಳ ಈ ಚಿತ್ರದ ಹೆಚ್ಚಿನ ಚಿತ್ರೀಕರಣ ಭದ್ರಾವತಿಯಲ್ಲಿ ನಡೆದಿದೆ ಹಾಗೂ ಆಗಸ್ಟ್ ಹದಿಮೂರು ಚಿತ್ರ ಬಿಡುಗಡೆಯಾಗುತ್ತಿದೆ. ದಯವಿಟ್ಟು ನಮ್ಮ ಚಿತ್ರಕ್ಕೆ ಎಲ್ಲರೂ ಪ್ರೋತ್ಸಾಹ ನೀಡಿ ಎಂದರು ಕೃಷ್ಣ ಎಲ್. ನಾನು ಹತ್ತು ವರ್ಷದ ಹಿಂದೆ ಫೆಬ್ರವರಿ ೧೪ ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ಕಾರಣಾಂತರದಿಂದ ಈ ಚಿತ್ರ ಬಿಡುಗಡೆಯಾಗಲಿಲ್ಲ. ಆ ನಂತರ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ನನ್ನ ಅಭಿನಯದ ಧಾರಾವಾಹಿ ನೋಡಿದ ನಿರ್ದೇಶಕರು ನನಗೆ ಈ ಚಿತ್ರದಲ್ಲಿ ನಾಯಕನ ಪಾತ್ರ ನೀಡಿದ್ದಾರೆ ಅವರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಾಯಕ ಕರ್ಣ ಎಸ್ ರಾಮಚಂದ್ರ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ "TT #50" ಆಗಸ್ಟ್ ನಲ್ಲಿ ತೆರೆಗೆ.

ಎರಡನೇ ನಾಯಕನಾಗಿ ನಟಿಸಿರುವ ಹೇಮಂತ್ ಕುಮಾರ್ ಅವರಿಗೂ ಇದು ಮೊದಲ ಚಿತ್ರವಂತೆ. ಒಂದು ಹಾಡಿರುವ ಚಿತ್ರಕ್ಕೆ ಮುರಳೀಧರನ್ ಸಂಗೀತ ನೀಡಿದ್ದಾರೆ. ದಿವ್ಯ ರಾಮಚಂದ್ರ ಹಾಡಿದ್ದಾರೆ. ಹಿನ್ನೆಲೆ ಸಂಗೀತ ಚಿತ್ರದಲ್ಲಿ ಪರಿಣಾಮಕಾರಿಯಾಗಿದ್ದು, ಮುರಳಿಧರನ್ ಅವರೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮುರಳೀಧರನ್ ಹಾಗೂ ಗಾಯಕಿ ದಿವ್ಯ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಕಣ್ಣು ಪತ್ರಿಕೆ ಸಂಪಾದಕರಾದ ಶಿವಕುಮಾರ್ ನಾಗನವಿಲು, ನಟ ಪ್ರಶಾಂತ್ ಸಿದ್ದಿ, ಉದ್ಯಮಿ ಪ್ರದೀಪ್ ಕುಮಾರ್, ಶ್ರೀಮಂತ್ ಮಂಜು ಹಾಗೂ ನಿರ್ಮಲ ಮುಂತಾದ ಗಣ್ಯರು ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಕೋರಿದರು.

ಈ ಚಿತ್ರದಲ್ಲಿ TT(ಟೆಂಪೊ ಟ್ರವಲರ್) ಸಹ ಮುಖ್ಯಪಾತ್ರವಹಿಸಿದೆಯಂತೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.