Skip to main content
ಪ್ರತಿಯೊಬ್ಬರು ಮೆಚ್ಚಿ ಕೊಳ್ಳುವಂತಹ ರಾಷ್ಟ್ರ ಪ್ರಶಸ್ತಿ ಪಡೆದ “ಹೆಬ್ಬೆಟ್ ರಾಮಕ್ಕ”.

ಪ್ರತಿಯೊಬ್ಬರು ಮೆಚ್ಚಿ ಕೊಳ್ಳುವಂತಹ ರಾಷ್ಟ್ರ ಪ್ರಶಸ್ತಿ ಪಡೆದ “ಹೆಬ್ಬೆಟ್ ರಾಮಕ್ಕ”.

ಕನ್ನಡದಲ್ಲಿ ಅದೆಷ್ಟೋ ಸಿನಿಮಾಗಳು ಕಥೆ ಕಾದಂಬರಿ ಅಧಾರಿತ ಚಿತ್ರಗಳನ್ನು ನಿರ್ದೇಶನ ಮಾಡಿರುವುದ್ದನ್ನ ನೋಡಿದ್ದೆವೆ, ಅಲ್ಲದೆ ಅಂತಹ ಚಿತ್ರಗಳು ಸಿನಿಮಾ ವಿಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ.

 “ಹೆಬ್ಬೆಟ್ ರಾಮಕ್ಕ”.

ಅಂತಹದೇ ಸಾಲಿನಲ್ಲಿ ಕಳೆದವಾರ ತೆರೆ ಕಂಡ ಚಿತ್ರ  ರಾಷ್ಟ್ರ ಪ್ರಶಸ್ತಿ ಪಡೆದ “ಹೆಬ್ಬೆಟ್ ರಾಮಕ್ಕ” ಎನ್.ಆರ್.ನಂಜುಂಡೇಗೌಡ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಿದೆ. ಒಬ್ಬ ಅನಕ್ಷರಸ್ಥೆ ಯಾದ “ರಾಮಕ್ಕ” ಮದ್ಯಮ ವರ್ಗದ ಕುಟುಂಬದಲ್ಲಿ ಪತಿ ಕಲ್ಲೆಶಪ್ಪ ಇಬ್ಬರು ಮಕ್ಕಳ ಜೊತೆ ಹಳ್ಳಿಯೊಂದರಲ್ಲಿ ತಮ್ಮದೇ ಹೊಲದಲ್ಲಿ ಮತ್ತು ಮನೆಯ ಜವಬ್ದಾರಿಯ ಕೆಲಸದೊಂದಿಗೆ ಸ್ವಾಭಿಮಾನದ ಜೀವನ ಕಟ್ಟಿಕೊಂಡಿರುತ್ತಾಳೆ ರಾಮಕ್ಕ.

ಇನ್ನೂ ಪತಿಯು ಅಷ್ಟೋ ಇಷ್ಟೋ ವಿದ್ಯಾಭ್ಯಾಸ ಮಾಡಿ ಕಂಟ್ರಾಕ್ಟರ್ ವೃತ್ತಿಯಲ್ಲಿ ತೊಡಗಿರುತ್ತಾನೆ. ಆದರೆ ಹಿರಿಯ ಅಧಿಕಾರಿಗಳಿಂದ ಒಂದು ಕಂಟ್ರಾಕ್ಟರ್ ಬಿಲ್ ಪಾಸ್ ಮಾಡಿಕೊಳ್ಳುಲು ಎಷ್ಟೆಲ್ಲಾ ಕಷ್ಟಪಡಬೇಕು, ಜೊತೆಗೆ ಸಂಸಾರದ ಕುಟುಂಬವನ್ನು ನಿಭಾಯಿಸುವುದು ಅಷ್ಟೆ ಕಷ್ಟ ಕರವಾಗಿರುತ್ತದೆ. ಇನ್ನೂ ಹೇಳಿ ಕೇಳಿ ಕಲ್ಲೆಶಪ್ಪ ವೃತ್ತಿಯಲ್ಲಿ ಕಂಟ್ರಾಕ್ಟರ್ ಆದ ಕಾರಣ ಮಾತಿನಲ್ಲಿ ಚತುರ ಅಲ್ಲದೇ ಸಣ್ಣ ಪುಟ್ಟ ರಾಜಕಾರಣಿಗಳ ಪರಿಚಯ ಸಹಜವಾಗಿರುತ್ತದೆ.

 ತಮ್ಮ ಊರಿಗೆ ಚುನಾವಣೆಯ ಪ್ರಯುಕ್ತ “ಮಹಿಳಾ ಮೀಸಲಾತಿ” ಜಾರಿಯಾಗಿರುವ ವಿಷಯ ತಿಳಿದ ಕಲ್ಲೆಶಪ್ಪ ಹೇಗಾದ್ರೂ ಮಾಡಿ ಈ ಅವಾಕಾಶವನ್ನು ಪಡೆದು, ತನ್ನ ಪತ್ನಿ ರಾಮಕ್ಕಳನ್ನ ಚುನಾವಣೆಗೆ ನಿಲ್ಲಿಸಲು ರಾಜಕಾರಣಿಗಳ ಜೊತೆ ತನ್ನ ಜಾಣ್ಮೆಯ ಮಾತುಗಳಿಂದ ಹಿರಿಯ ನಾಯಕರು ಗಳನ್ನ ತನ್ನ ಬುಟ್ಟಿಗೆ ಹೇಗೆ ಹಾಕಿಕೊಳ್ಳುತ್ತಾನೆ. ? ಅಲ್ಲದೇ ಒಬ್ಬ ರಾಜಕಾರಣಿ ಪಕ್ಷದ ಟಿಕೇಟ್ ಗಿಟ್ಟಿಸಿ ಕೊಳ್ಳಲು ಏನೆಲ್ಲಾ ಪ್ಲಾನ್ ಮಾಡುತ್ತಾನೆ ಅನ್ನುವಂತಹದು ಕಥೆಯ ಒಂದು ಟ್ವಿಸ್ಟ್.

ಇನ್ನೂ ಪಕ್ಷದಿಂದ ಟಿಕೇಟ್ ಪಡೆದು ರಾಮಕ್ಕಳನ್ನ ಎಲೆಕ್ಷನಲ್ಲಿ ಗೆಲ್ಲಿಸಿ, ಒಂದೇ ಭಾರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗುವ ಅವಕಾಶ ರಾಮಕ್ಕಳಿಗೆ ದೊರೆಯುತ್ತದೆ. ಆದರೆ ತಾನು ಒಬ್ಬ ಜಿಲ್ಲಾ ಪಂಚಾಯಿತಿ ಅಧ್ಯಕ್ಷಳು ಅನ್ನುವ ಜ್ಞಾನ ಕೂಡ ಇರದ ರಾಮಕ್ಕ. ಜಿಲ್ಲಾ ಮಟ್ಟದ ಸಭೆ ಸಮಾರಂಭಗಳಲ್ಲಿ ಅವಮಾನಕ್ಕೆ ಒಳಗಾಗುತ್ತಿರುತ್ತಾಳೆ, ಅಲ್ಲದೇ ರಾಮಕ್ಕ ಕೇವಲ ಹೆಸರಿಗೆ ಮಾತ್ರ ಜಿಲ್ಲಾ ಪಂಚಾಯತ್ ಅಧ್ಯಕ್ಷಳಾಗಿರುತ್ತಾಳೆ.ಆದರೆ ಅಧಿಕಾರ ಮಾತ್ರ ತನ್ನ ಪತಿಯ ಕೈಯಲ್ಲಿ ಇರುತ್ತದೆ. ಒಬ್ಬ ಅನಕ್ಷರಸ್ಥೆಯಾದ ರಾಮಕ್ಕಳ ಅಧಿಕಾರ ಹೇಗೆಲ್ಲಾ ದುರುಪಯೋಗ ಮಾಡಿಕೋಳ್ಳುತ್ತಾರೆ ಅನ್ನುವಂತಹದು ಕಥೆಯ ಮತ್ತೊಂದು ಇಂಟ್ಟ್ರೆಸ್ಟಿಂಗ್ ವಿಷಯ.

 “ಹೆಬ್ಬೆಟ್ ರಾಮಕ್ಕ”.

ಕೊನೆಗೆ ಇವೆಲ್ಲವೂಗಳ ಸಮಸ್ಸೆಗಳನ್ನು ಒಂದ್ ದೊಂದಾಗಿ ಅರಿತು ಕೊಳ್ಳುತ್ತ ರಾಮಕ್ಕ ಕೊನೆಗೆ ಅಧಿಕಾರ ಶಿಕ್ಷಣ ಎಷ್ಟು ಪ್ರಮುಖವಾಗಿದೆ ಅಂತ ಹೇಳುತ್ತಾಳೆ. ಆದರೂ ಕೂಡ ಒಬ್ಬ ಅನಕ್ಷರತೆ ಮಹಿಳೆ ಛಲದಿಂದ ಏನೆಲ್ಲಾ ಭದಲಾವಣೆ ಮಾಡುತ್ತಾಳೆ. ಒಬ್ಬ ಮಾದರಿ ಮಹಿಳೆ ಯಾಗುತ್ತಾಳೆ ಅನ್ನುವಂತಹ ಕಥೆಯನ್ನ ಚಿತ್ರಮಂದಿರಗಳಲ್ಲಿ ನೊಡಬೇಕು .

 ಚಿತ್ರ : “ಹೆಬ್ಬೆಟ್ ರಾಮಕ್ಕ”.

ನಿರ್ದೇಶನ: ಎನ್.ಆರ್.ನಂಜುಂಡೇಗೌಡ

ನಿರ್ಮಾಣ: ಎಸ್.ಎ.ಪುಟ್ಟರಾಜು,ಕವಿತಾ ಪುಟ್ಟರಾಜ್

ಸಂಗೀತ ನಿರ್ದೇಶನ : ಪೂರ್ಣಚಂದ್ರ ತೇಜಸ್ವಿ.

ತಾರಗಣ: ತಾರಾ,ದೇವರಾಜ್ ಮತ್ತು ಇತರರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.