Skip to main content
" ಯೆಲ್ಲೋ ಗ್ಯಾಂಗ್ಸ್ "ನೂತನ ಚಿತ್ರ

" ಯೆಲ್ಲೋ ಗ್ಯಾಂಗ್ಸ್ "ನೂತನ ಚಿತ್ರ.

ಯೆಲ್ಲೋ ಗ್ಯಾಂಗ್ಸ್.

Kannada new film

‘ಯೆಲ್ಲೋ ಗ್ಯಾಂಗ್ಸ್’ ವಿಭಿನ್ನ ಸ್ಟುಡಿಯೊಸ್ ನಿರ್ಮಾಣದಲ್ಲಿ ರವೀಂದ್ರ ಪರಮೇಶ್ವರಪ್ಪ ಅವರ ರಚನೆ ಮತ್ತು ನಿರ್ದೇಶನವಿರುವ ಕ್ರೈಂ-ಥ್ರಿಲ್ಲರ್ ಕನ್ನಡ ಚಲನಚಿತ್ರ. ಎರಡು ಹಂತಗಳಲ್ಲಿ ಒಟ್ಟು ೩೫ ದಿನಗಳ ಕಾಲ ನಡೆದ ಚಿತ್ರೀಕರಣವು ಸಂಪೂರ್ಣವಾಗಿ ಬೆಂಗಳೂರಿನಲ್ಲಿ ನಡೆದಿದೆ. ಛಾಯಾಗ್ರಹಣವನ್ನು ಸುಜ್ಞಾನ್ ಅವರು ನಿರ್ವಹಿಸಿದ್ದಾರೆ. ಚಿತ್ರಕ್ಕೆ ರೋಹಿತ್ ಸೋವರ್ ಅವರ ಸಂಗೀತ, ಸುರೇಶ್ ಆರ್ಮುಗಂ ಅವರ ಸಂಕಲನ ಮತ್ತು ಪ್ರವೀಣ್ ಕುಮಾರ್ ಜಿ ಅವರ ಸಂಭಾಷಣೆ ಇದೆ. ಮನೋಜ್ ಪಿ, ಜಿ.ಎಂ.ಆರ್ ಕುಮಾರ್ (ಕೆವಿಜಿ) ಹಾಗೂ ಜೆ.ಎನ್.ವಿ, ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.

Kannada new film

ತಾರಾಗಣದಲ್ಲಿ ಬಲರಾಜ್ವಾಡಿ, ನಾಟ್ಯ ರಂಗ, ನವೀನ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ಉಮ್ಮತ್ತಾಲ್, ಪ್ರದೀಪ್ ಪೂಜಾರಿ, ವಿನೀತ್ ಕಟ್ಟಿ, ಮಲ್ಲಿಕಾರ್ಜುನ ದೇವರಮನೆ, ನಂದ ಗೋಪಾಲ್, ರವಿ ಗಜ ಜಿಗಣಿ, ನೀನಾಸಂ ದಯಾನಂದ್, ಸತ್ಯ ಬಿ.ಜಿ, ವಿಠ್ಠಲ್ ಪರೀಟ, ಅರುಣ್ ಕುಮಾರ್, ಶ್ರೀ ಹರ್ಷ, ಸಂಚಾರಿ ಮಧು, ಪ್ರವೀಣ್ ಕೆ.ಬಿ, ಪವನ್ ಕುಮಾರ್ ಕೆ ಮತ್ತು ಮುಂತಾದವರಿದ್ದಾರೆ. ವಿಭಿನ್ನ ಸ್ಟುಡಿಯೊಸ್ ಸಾಮಾಜಿಕ ಜಾಲತಾಣಗಳಲ್ಲಿ #thegangsarehere (ದಿ ಗ್ಯಾಂಗ್ಸ್ ಆರ್ ಹಿಯರ್) ಎಂದು ಶುರುವಾದ ಚಿತ್ರದ ಪ್ರಚಾರವು ತನ್ನ ವಿಭಿನ್ನ ಮಿನಿಮಲ್ ಪೋಸ್ರ‍್ರುಗಳಿಂದ ಸಾಕಷ್ಟು ಜನರ ಗಮನ ಸೆಳೆದಿತ್ತು. ಶ್ರೀ ಯೋಗರಾಜ್ ಭಟ್ ಅವರು ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿ ಇಡೀ ತಂಡವನ್ನು ಹಾರೈಸಿದ್ದಾರೆ. ಚಿತ್ರದ ಪೋಸ್ಟರ್‌ಗಳು ಮತ್ತು ಮೋಶನ್ ಪೋಸ್ಟರ್ ವಿಡಿಯೊಗಳಿಗೆ ಚಿತ್ರ ರಸಿಕರಿಂದ ಅತ್ಯುತ್ತಮ ಪ್ರತಿಕ್ರಿಯೆಗಳು ಸಿಗುತ್ತಿವೆ. ಪೋಸ್ಟ್ ಪ್ರೊಡಕ್ಷನ್ನಿನಲ್ಲಿರುವ ಚಲನಚಿತ್ರವು ಈಗ ಸೆನ್ಸಾರ್‌ಗೆ ಸಿದ್ಧವಾಗುತ್ತಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.