Skip to main content
ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ ಮಾಸಿಕ 10000ಸಾವಿರ ವೇತನ ಕ್ಕಾಗಿ ಮನವಿ ಎನ್ ಎಸ್ ಬೋಸ್ ರಾಜು .

ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ ಮಾಸಿಕ 10000ಸಾವಿರ ವೇತನ ಕ್ಕಾಗಿ ಮನವಿ ಎನ್ ಎಸ್ ಬೋಸ್ ರಾಜು .

ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ ಮಾಸಿಕ 10000ಸಾವಿರ ವೇತನ ಕ್ಕಾಗಿ ಮನವಿ ಎನ್ ಎಸ್ ಬೋಸ್ ರಾಜು .

Raichur

ರಾಯಚೂರು :ಕೋವಿಡ್ 19 ನಿಂದಾಗಿ ಸಂಕಷ್ಟದಲ್ಲಿರುವ ಜನರ ಕಷ್ಟ ಗಳಿಗೆ ಸ್ಪಂದಿಸಲು ಮತ್ತು ಅಕಾಲಿಕ ಮಳೆಯಿಂದಾಗಿ ತೊಂದರೆಗೆ ಒಳಾಗಾದ ರೈತರ ಬೆಳೆ ವೀಕ್ಷಣೆಗೆ ಬಂದಿದ್ದ ,ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಲಕ್ಷ್ಮಣ್ ಸಂಗಪ್ಪ ಸವದಿ ಅವರು ಜಿಲ್ಲೆಗೆ ಬಂದಾಗ ಜಿಲ್ಲಾ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿ ರಾಯಚೂರು ವತಿಯಿಂದ,ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ನಿಂದಾಗಿ ಉಂಟಾಗಿರುವ ವಿವಿಧ ತೊಂದರೆಗಳ ಬಗ್ಗೆ ಉಪಮುಖ್ಯಮಂತ್ರಿಗಳಿಗೆ ವಿವರಿಸಿಲಾಯಿತು.ಇನ್ನೂ ಜಿಲ್ಲೆಯಲ್ಲಿ ಜಿಲ್ಲಾ ಆಡಳಿತ ,ಜನಪ್ರತಿನಿದಿನಗಳು,ಸಾರ್ವಜನಿಕರ ಸಹಾಕಾರದಿಂದಾಗಿ ಇದುವರೆಗೂ ಯಾವುದೇ ಪಾಸಿಟಿವ್ ಕೇಸ್ಗಳು ಪತ್ತೆಯಾಗದಿರುವುದು ಸಂತೋಷದ ವಿಷಯವಾಗಿದೆ ಎಂದರು.

ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತು ಮನವಿ.

ಇನ್ನೂ ಜಿಲ್ಲೆಯಲ್ಲಿ ಉಂಟಾಗಿರುವ ವಿವಿಧ ಹಲವಾರು ಸಮಸ್ಸೆಗಳ ಬಗ್ಗೆ ಮನವರಿಕೆ ಮಾಡುತ್ತ, ಅತೀ ಮುಖ್ಯವಾಗಿ ಜಿಲ್ಲಾ ಆಸ್ಪತ್ರೆಗಳಿಗೆ ಅವಶ್ಯಕ ವಸ್ತುಗಳಾದ ,ಸ್ಯಾನಿಟೇಸರ್,ಮಾಸ್ಕ್,ಟೆಸ್ಟಿಂಗ್ ಕಿಟ್, ವೈದ್ಯಕಿಯ ಮತ್ತು ಪ್ಯಾರ ಮೆಡಿಕಲ್ ಸಿಬ್ಬಂದಿಗಳ ಕೊರತೆ ಎಂದು ಕಾಣುತ್ತಿದೆ ಎಂದರು.ಆಂಧ್ರ ಮತ್ತು ತೆಲಾಂಗಣ ಗಡಿ ಭಾಗಕ್ಕೆ ಅಂಟ್ಟಿ ಕೊಂಡಿರುವ ನಮ್ಮ ಜಿಲ್ಲೆಗೆ ಕೊರೋನಾ ಟೆಸ್ಟಿಂಗ್ ಪ್ರಯೋಗಾಲಯ ಅವಶ್ಯಕತೆ ಇದ್ದು ಅತೀ ವೇಗವಾಗಿ ಈ ವೆವಸ್ಥೆ ಮಾಡಬೇಕಾಗಿ ಆಗ್ರಹಿಸಿದರು.ಇನ್ನೂ ಗಾಳಿ ಮತ್ತು ಮಳೆಯ ರಭಸಕ್ಕೆ ಹಾನಿಯಾಗಿರುವ ಭತ್ತಕ್ಕೆ ಪ್ರತಿ ಹೆಕರಿಗೆ ಇಪ್ಪತ್ತು ಸಾವಿರ ರೂಪಾಯಿ ಕೊಡಲು ಒತ್ತಾಯ ಮಾಡಲಾಯಿತು ,ಹಾಗೂ ಅಸಂಘಟಿತ ಕೂಲಿ ಕಾರ್ಮಿಕರಾದ ಮಡಿವಾಳ, ಸವಿತಾ ಸಮಾಜ, ಬಡಿಗ, ಕುಂಬಾರರು, ನೇಕಾರರು, ಅಕ್ಕಸಾಲಿಗರು ಹಾಗೂ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವಕೂಲಿ ಕಾರ್ಮಿಕರು ಟ್ಯಾಕ್ಸಿ ಡ್ರೈವರ್ಸ್, ಆಟೋರಿಕ್ಷಾ ಚಾಲಕರು, ಬೀದಿ ವ್ಯಾಪಾರಿಗಳು, ಹಮಾಲಿಗಳು ಸೇರಿದಂತೆ ಕಟ್ಟಡ ಕಾರ್ಮಿಕರಿಗೆ ಜೀವನ ನಿರ್ವಹಣೆಗಾಗಿ ಲಾಕ್ ಡೌನ್ ಅವಧಿಯಲ್ಲಿ ಪ್ರತಿ ತಿಂಗಳಿಗೆ ಹತ್ತುಸಾವಿರ ರೂಪಾಯಿ ಕೊಡಲು ಕಾಂಗ್ರೆಸ್ ಪಕ್ಷದಿಂದ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯ ಕಾರ್ಯಪಡೆ ಅಧ್ಯಕ್ಷರಾದ ಶ್ರೀ ಎನ್ ಎಸ್ ಬೋಸರಾಜು, ವಿಧಾನ ಪರಿಷತ್ತಿನ ಸದಸ್ಯರಾದ ಬಸವರಾಜ್ ಪಾಟೀಲ್ ಇಟಗಿ , ಶಾಸಕರಾದ ಬಸನಗೌಡ ದದ್ದಲ್ ಉಪಸ್ಥಿತರಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.