Skip to main content
​    ​ಗುಲ್ಬರ್ಗದ ನೈಜಘಟನೆಯಾದಾರಿತ "ವೀರಪುತ್ರ" ಚಿತ್ರದ ಪ್ರೊಮೋ ಬಿಡುಗಡೆ.

ಗುಲ್ಬರ್ಗದ ನೈಜಘಟನೆಯಾದಾರಿತ "ವೀರಪುತ್ರ" ಚಿತ್ರದ ಪ್ರೊಮೋ ಬಿಡುಗಡೆ.

ಗುಲ್ಬರ್ಗದ ನೈಜಘಟನೆಯಾದಾರಿತ "ವೀರಪುತ್ರ" ಚಿತ್ರದ ಪ್ರೊಮೋ ಬಿಡುಗಡೆ.

​    ​kannadafilm

ಆಯುರ್ವೇದಿಕ್ ಮತ್ತು ಅಲೋಪಥಿಕ್ ಔಷಧಗಳ ನಡುವಿನ ಸಂಘರ್ಷದ ಕಥೆ ಹೊಂದಿರುವ ಚಿತ್ರವೊಂದು ಇದೀಗ ನಿರ್ಮಾಣವಾಗುತ್ತಿದೆ. ವೀರಪುತ್ರ ಎಂಬ ಶೀರ್ಷಿಕೆಯಿರುವ ಈ ಚಿತ್ರದಲ್ಲಿ ವಿಜಯ್‍ಸೂರ್ಯ ನಾಯಕನಾಗಿ ನಟಿಸುತ್ತಿದ್ದಾರೆ. ಗುಲ್ಬರ್ಗದಲ್ಲಿ ನಡೆದ ನೈಜಘಟನೆ ಈ ಚಿತ್ರಕ್ಕೆ ಪ್ರೇರಣೆ. ಈಮೊದಲು ಸಪ್ಲಿಮೆಂಟರಿ ಚಿತ್ರ ನಿರ್ದೇಶಿಸಿದ್ದ ಡಾ.ದೇವರಾಜ್ ನಿರ್ದೇಶನದ ಎರಡನೇ ಚಿತ್ರ ಇದಾಗಿದೆ. ವಿಜಯ್‍ಸೂರ್ಯ ಅವರ ಜನ್ಮದಿನದ ಕೊಡುಗೆಯಾಗಿ ವೀರಪುತ್ರ ಚಿತ್ರದ ಕ್ಯಾರೆಕ್ಟರ್ ಪ್ರೊಮೋ ಬಿಡುಗಡೆ ಸಮಾರಂಭ ರೇಣುಕಾಂಬ ಥಿಯೇಟರಿನಲ್ಲಿ ನೆರವೇರಿತು.

ಗುರು ಬಂಡಿ ಈ ಚಿತ್ರದ ನಿರ್ಮಾಪಕರು. ಮಾತನಾಡಿದ ನಿರ್ದೇಶಕ ಡಾ.ದೇವರಾಜ್ ಮಾತನಾಡುತ್ತ ಬಹಳ ಹಿಂದೆ ಗುಲ್ಬರ್ಗದಲ್ಲಿ ನಡೆದ ಈ ಕಥೆಯನ್ನು ನಿರ್ಮಾಪಕರು ಹೇಳಿದಾಗ ಇಂಟರೆಸ್ಟಿಂಗ್ ಅನ್ನಿಸಿತು. ಅದರ ಬಗ್ಗೆ ರೀಸರ್ಚ ಮಾಡುತ್ತ ಹೋದಾಗ ಅನೇಕ ಹೊಸ ವಿಷಯಗಳು ಕಂಡುಬಂದವು. ಸ್ಕ್ರಿಪ್ಟ್ ರೆಡಿಯಾದ ನಂತರ ವಿಜಯ್ ಸೂರ್ಯ ಅವರಿಗೆ ಹೇಳಿದಾಗ ಕಥೆ ಕೇಳಿ ಅವರೂ ಎಕ್ಸೈಟ್ ಆದರು. ಚಿತ್ರದಲ್ಲಿ ಅವರ ಪಾತ್ರಕ್ಕೆ ಮೂರು ಶೇಡ್ಸ್ ಇದೆ.

ಅಲೋಪಥಿಕ್ ಮೆಡಿಸಿನ್ ಬಂದಮೇಲೆ ಆಯುರ್ವೇದ ಚಿಕಿತ್ಸೆ ಹೇಗೆ ಮರೆಯಾಗುತ್ತಾ ಹೋಯಿತು ಅಂತ ಈ ಚಿತ್ರದಲ್ಲಿ ಹೇಳಿದ್ದೇವೆ . ಡಾಕ್ಟರನ್ನು ಒಬ್ಬ ದೇವರು ಅನ್ನುತ್ತೇವೆ. ಆದರೆ ಆತನೇ ತನ್ನ ಕರ್ತವ್ಯಲೋಪ ಎಸಗಿದಾಗ ಏನಾಗಬಹುದು ಎನ್ನುವುದೇ ಈ ಚಿತ್ರದ ಕಥೆ. ರಾಘವ್ ಸುಭಾಷ್ ಚಿತ್ರದ ಸಂಗೀತ ನಿರ್ದೇಶಕರು. ಉದಯಪುತ್ರ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ ಎಂದು ಹೇಳಿದರು. ನನಗಿದು ತುಂಬಾ ವಿಶೇಷ ಹುಟ್ಟುಹಬ್ಬ ಎಂದ ವಿಜಯ ಸೂರ್ಯ ನಾನು ಈವರೆಗೆ ಕಾಯುತ್ತಿದ್ದ ಪಾತ್ರ ನನಗೆ ಈ ಚಿತ್ರದಲ್ಲಿ ಸಿಕ್ಕಿದೆ. ನನ್ನ ಪಾತ್ರಕ್ಕೆ ಹಲವಾರು ಶೇಡ್ಸ್ ಈ ಚಿತ್ರದಲ್ಲಿದೆ. ಈಗ  ಪ್ರೊಮೋ ಮಾತ್ರ ಮಾಡಿದ್ದೇವೆ . ಅಗ್ನಿಸಾಕ್ಷಿ ನಂತರ ನನಗೆ ಪಾಸಿಟಿವ್ ಫೀಲ್  ನೀಡುತ್ತಿರುವ ಚಿತ್ರವಿದು.

Kannada new film

ಒಳ್ಳೆಯ ಕಂಟೆಂಟನ್ನು ಎಂಟರ್‍ಟೈನಿಂಗ್ ಆಗಿ ಹೇಳುತ್ತಿದ್ದೇವೆ . ಚಿತ್ರದಲ್ಲಿ ಲವ್ ಶೇಡ್ ತುಂಬಾ ಕಮ್ಮಿ ಇದೆ. ಸಮಾಜದಲ್ಲಿ ಅನ್ಯಾಯ ನಡೆದಾಗ ಎದ್ದು ನಿಂತು ಕೇಳುವಂಥ ಯುವಕನ ಪಾತ್ರ ನನ್ನದು. ಈ ಪೆÇ್ರಮೋಗಾಗಿ 10 ದಿನ ತಯಾರಿ ನಡೆಸಿದ್ದು, ಒಂದೇ ದಿನದಲ್ಲಿ ಶೂಟ್ ಮಾಡಿದ್ದೇವೆ ಎಂದು  ಹೇಳಿದರು. ನಿರ್ಮಾಪಕ ಗುರು ಬಂಡಿ ಮಾತನಾಡುತ್ತ ನಮ್ಮ ತನ್ವಿ ಪ್ರೊಡಕ್ಷನ್ ಮೂಲಕ  ನಿರ್ಮಿಸುತ್ತಿರುವ ಮೂರನೇ ಚಿತ್ರವಿದು. ಚಿತ್ರದ ಟೈಟಲ್‍ನಲ್ಲೇ ಧಮ್ ಇದೆ. ವಿಜಯ್ ಅವರಿಗಾಗಿಯೇ ಈ ಕಥೆ ಮಾಡಿದ್ದೆವು. ನಮ್ಮ ಕಥೆ ಏನು, ಚಿತ್ರದ ಉದ್ದೇಶ  ಎಂದು ನಿಮಗೆ ತಿಳಿಸಲೆಂದು ಈ ಪ್ರೊಮೋ ಮಾಡಿದ್ದೇವೆ . ಆಯುರ್ವೇದಿಕ್ ಮತ್ತು ಅಲೋಪತಿಕ್ ನಡುವಿನ ಸಂಘರ್ಷವೇ ಈ ಚಿತ್ರದ ಎಳೆ ಎಂದು ಹೇಳಿದರು. ಚಿತ್ರದಲ್ಲಿ ಅಪ್ಪ ಮಗನ ನಡುವಿನ ಎಮೋಷನ್ ಇದೆ, ಸಿಸ್ಟಂ ವಿರುದ್ದ ನಾಯಕ ಹೇಗೆ ಸಿಡಿದು ನಿಲ್ಲುತ್ತಾನೆ ಎಂದು ಚಿತ್ರ ಹೇಳುತ್ತದೆ. ಸಂಗೀತ ನಿರ್ದೇಶಕ ರಾಘವ್ ಸುಭಾಷ್ ಮಾತನಾಡಿ ಚಿತ್ರದಲ್ಲಿ ಒಟ್ಟು 5 ಹಾಡುಗಳಿವೆ. ಈಗಾಗಲೇ ಮ್ಯೂಸಿಕ್ ವರ್ಕ್ ನಡೀತಿದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ಉಳಿದ ಪಾತ್ರವರ್ಗದ ಆಯ್ಕೆ ನಡೆಯುತ್ತಿದ್ದು ಸದ್ಯದಲ್ಲೇ ಚಿತ್ರಿಕರಣ ಆರಂಭಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.