ಉದಯರಂಗ ಮೋಟಾರ್ಸ್ ಮಾಲೀಕ ಎಂ ವಿ ಸುಬ್ರಮಣ್ಯ ನಿಧನ .
ಉದಯರಂಗ ಮೋಟಾರ್ಸ್ ಮಾಲೀಕ ಎಂ ವಿ ಸುಬ್ರಮಣ್ಯ ನಿಧನ .

ಖಾಸಗಿ ರಸ್ತೆ ಸಾರಿಗೆ ಸಂಸ್ಥೆಯ ಉದಯರಂಗ ಮೋಟಾರ್ಸ್ ಮಾಲೀಕ ಎಂ ವಿ ಸುಬ್ರಮಣ್ಯ ಗುರುವಾರ ವಿಧಿವಶರಾಗಿದ್ದಾರೆ. ಅವರಿಗ 74 ವರ್ಷ ವಯಸ್ಸಗಿತ್ತು ಉದಯರಂಗ ಬಸ್ ಮಾಲೀಕ ಎಂ.ವಿ. ಸುಬ್ರಮಣ್ಯ .ಬೆಂಗಳೂರು ಮೈಸೂರು, ಚಾಮರಾಜಪೇಟೆ, ಕೊಳ್ಳೇಗಾಲ ಭಾಗದಲ್ಲಿ ಚಿರಪರಿಚಿತವಾಗಿರುವ, ಉದಯರಂಗ ಮೋಟಾರ್ಸ್ ಬೆಂಗಳೂರಿನಲ್ಲಿಯೂ ಕಳೆದೊಂದು ದಶಕದ ಹಿಂದೆ ವ್ಯವಹಾರವನ್ನು ವಿಸ್ತರಿಸಿತ್ತು. ಮಳವಳ್ಳಿಯಲ್ಲಿ ಮಹಾಲಕ್ಷ್ಮಿ ಹಾಗೂ ರಾಜರಾಜೇಶ್ವರಿ ಚಿತ್ರ ಮಂದಿರದ ಮಾಲೀಕರು, ಪ್ರದರ್ಶಕರು ಹಾಗೂ ಹಂಚಿಕೆದಾರರೂ ಆಗಿದ್ದ ಸುಬ್ರಮಣ್ಯ ಅವರು, ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಸುಮಾರು 300ಕ್ಕೂ ಹೆಚ್ಚು ಚಿತ್ರಗಳಿಗೆ ಫೈನಾನ್ಸ್ ಮಾಡಿದ್ದರು. ಹೀಗಾಗಿ ಅನೇಕ ಚಿತ್ರಗಳು ತೆರೆಕಂಡು ಯಶಸ್ಸು ಗಳಿಸಲು ಸಾಧ್ಯವಾಗಿತ್ತು. ಶ್ರೀ ಎಂ.ವಿ.ಸುಬ್ರಮಣ್ಯ 74 ವಯಸ್ಸು ಇಂದು ಮಧ್ಯಾಹ್ನ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರು ಸುಮಾರು 40 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಫೈನಾನ್ಸ್ ಮಾಡಿದ್ದಾರೆ. ಮಳವಳ್ಳಿ ಯಲ್ಲಿರುವ ಮಹಾಲಕ್ಷ್ಮಿ ಚಿತ್ರಮಂದಿರ ಹಾಗೂ ರಾಜರಾಜೇಶ್ವರಿ ಚಿತ್ರ ಮಂದಿರದ ಮಾಲೀಕರು, ಪ್ರದರ್ಶಕರು , ಹಾಗೂ ಹಂಚಿಕೆದಾರರಾಗಿದ್ದರು ,ಉದಯರಂಗ ಮೋಟಾರ್ಸ್ನ ಮಾಲೀಕರು. ಇವರ ಅಂತ್ಯಕ್ರಿಯೆಯನ್ನು ನಾಳೆ ಮಳವಳ್ಳಿಯಲ್ಲಿ ನೆರವೇರಿಸಲಿದ್ದಾರೆ.
Recent comments