Skip to main content
ಮತ್ತೇ ಸ್ಯಾಂಡಲ್ ವುಡ್ ಗೆ ರಾಘಣ್ಣ ರೀ ಎಂಟ್ರಿ!

ಮತ್ತೇ ಸ್ಯಾಂಡಲ್ ವುಡ್ ಗೆ ರಾಘಣ್ಣ ರೀ ಎಂಟ್ರಿ!

ಮತ್ತೇ ಸ್ಯಾಂಡಲ್ ವುಡ್ ಗೆ ರಾಘಣ್ಣ ರೀ ಎಂಟ್ರಿ!

​ ​ನಟ ರಾಘವೇಂದ್ರರಾಜ್ ಕುಮಾರ್

ಸ್ಯಾಂಡಲ್ ವುಡ್ ನಟ ರಾಘವೇಂದ್ರರಾಜ್ ಕುಮಾರ್ ಅವರು ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ “ಕೆಲವೇ ದಿನಗಳ ನಂತರ” ಚಿತ್ರದ ದ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ರಾಘಣ್ಣ ಕಸ್ತೂರಿ ನಿವಾಸ ಚಿತ್ರದ “ಆಡಿಸಿ ನೋಡು ಬಿಳಿಸಿ ನೋಡು ಉರುಳಿ ಹೋಗದು” ಎಂಬ ಅಪ್ಪಾಜಿ ಅವರ ಹಾಡನ್ನು ಆಡುವುದರ ಮೂಲಕ ಮಾತನ್ನು ಪ್ರಾರಂಬಿಸಿದ ರಾಘಣ್ಣ ನಾನು ಆರೋಗ್ಯ ಸಮಸ್ಯೆಯಲ್ಲಿದ್ದಾಗ, ಅಮ್ಮ ನನ್ನ ಕೈ ಹಿಡಿದು ಚಿಂತಿಸಬೇಡ ಅಪ್ಪಾಜಿ ನಮ್ಮನೆಲ್ಲ ನೋಡಿ ಅವರು ಆರ್ಶಿವದಿಸುತ್ತಾರೆ ಎನ್ನುತ್ತಿದ್ದರು ಈಗ ಅಪ್ಪಾಜಿ ಅಮ್ಮ ಇಬ್ಬರು ಕೂಡ ಒಟ್ಟಿಗೆ ಹಾರೈಸಲಿದ್ದಾರೆ ಎಂದು ಭಾವುಕರಾದ ರಾಘಣ್ಣ, ಅವರ ಆರ್ಶಿವಾದ ನಮ್ಮ ಕುಟುಂಬದಲ್ಲಿ ಒಳ್ಳೆಯ ಕೆಲಸಗಳನ್ನು ಮುಂದುವರೆಸಲು ಪ್ರೇರಕ ಎಂದರು.

ದೇವರು ನನಗೆ ದೇಶಕ್ಕಾಗಿ ಏನಾದರೂ ಒಳಿತನ್ನು ಮಾಡಲು ಚಿಂತಿಸಲು ಅವಕಾಶ ನೀಡಿದ್ದಾನೆ ಏಕೆಂದರೆ ಭಾರತದ ಅತ್ಯುನ್ನತ ಗೌರವ ಡಾಕ್ಟರೇಟ್ ರಾಜ್ ಕುಮಾರ್ ರವರು, ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ರವರು ಸೇರಿದಂತೆ ಮೂವರು ಪ್ರಶಸ್ತಿಯನ್ನು ಪಡೆದ ಕುಟುಂಬ ನಮ್ಮದು ಹಾಗಾಗಿ ನಮ್ಮಿಂದ ದೇಶಕ್ಕೆ ಏನಾದರು ಮರಳಿ ನೀಡಬೇಕಾಗಿರುವುದರಿಂದ ಅಪ್ಪಾಜಿ ಅಮ್ಮ ರವರ ಕನಸಿನಂತೆ ಡಾ.ರಾಜ್ ಕುಮಾರ್ IAS ಅಕಾಡಮಿ ಪ್ರಾರಂಬಿಸಿದ್ದು, ಅಕಾಡಮಿಯ ಕಾರ್ಯವನ್ನು ನನ್ನ ಎರಡನೇ ಪುತ್ರ ಗುರುರಾಜ್ ನೋಡಿಕೂಳ್ಳುತ್ತಿದ್ದಾನೆ. ಈ ಮೂಲಕ ದೇಶಕ್ಕೆ ಉತ್ತಮ ಅಧಿಕಾರಿಗಳನ್ನು ನೀಡುವುದು ನಮ್ಮ ಅಶಯವಾಗಿದೆ.

ಮತ್ತೇ ಬಣ್ಣ ಹಚ್ಚಲಿರುವ ರಾಘಣ್ಣ

​   ​ನಟ ರಾಘವೇಂದ್ರರಾಜ್ ಕುಮಾರ್

ಇದೀಗ ರಾಘವೇಂದ್ರ ರಾಜ್ ಕುಮಾರ್ ರವರು ಹೂಸ ಉತ್ಸಹದೊಂದಿಗೆ ಮತ್ತೆ ಸ್ಯಾಂಡಲ್ ವುಡ್ ಗೆ ರೀ ಎಂಟ್ರೀ ಕೂಡುತ್ತಿದ್ದಾರೆ.ಅದು ಬ್ಯಾಕ್ ಟು ಬ್ಯಾಕ್ ಮೂರು ಚಿತ್ರಗಳಲ್ಲಿ ನಟಿಸುವುದಾಗಿ ಸ್ವತಃ ರಾಘಣ್ಣ ಅವರೇ ತಿಳಿಸಿದ್ದಾರೆ. ಕ್ವಾಟ್ಲೆ ಸತೀಶ ಚಿತ್ರದ ನಿರ್ದೇಶಕರಾದ ಚಂದ್ರಲೇಖ ಅವರು “ಚಿಲ್ಲಂ” ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು ಇದರಲ್ಲಿ ರಾಘಣ್ಣ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೂಳ್ಳಲಿದ್ದಾರಂತೆ. ಇದಾದ ಬಳಿಕ ರಾಷ್ಟೀಯ ಪ್ರಶಸ್ತಿ ವಿಜೇತ ನಿಖಿಲ್ ಮಂಜು ನಿರ್ದೇಶನದ “ಅಮ್ಮನ ಮನೆ” ಚಿತ್ರದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ.

ಮತ್ತೇ ನಿರ್ದೇಶನದತ್ತ ಎಸ್.ಕೆ. ಭಗವಾನ್

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಕೆ ಭಗವಾನ್ ಅವರು ಹಲವು ವರ್ಷಗಳ ನಂತರ ಮತ್ತೇ “ಆಡುವ ಗೂಂಬೆ” ಎಂಬ ಚಿತ್ರವನ್ನು ನಿರ್ದೇಶಿಸಲಿದ್ದಾರೆ.ಎಂದ ರಾಘಣ್ಣ ಇದೇ ವೇಳೆ ಎಸ್.ಕೆ. ಭಗವಾನ್ ಅವರ ಜೊತೆಗಿನ ತಮ್ಮ ಆತ್ಮೀಯ ಭಾಂದ್ಯವದ ಬಗ್ಗೆ ಮಾತನಾಡಿ, ಭಗವಾನ್ ಅವರು ಮಂತ್ರಾಲಯ ಮಹಾತ್ಮೆ ಚಿತ್ರದ ನಿರ್ದೇಶನದ ಸಂಧರ್ಭದಲ್ಲಿ ನಾನು ಜನಿಸಿದ್ದೆ ಹೀಗಾಗಿ ನನಗೆ ರಾಘವೇಂದ್ರ ಅಂತ ನಾಮಕರಣ ಮಾಡಿದ್ದರು. ಇದೀಗ ನಾನು ಮತ್ತೆ ಅವರೇ ನಿರ್ದೇಶಿಸಲಿರುವ ಚಿತ್ರದ ಮೂಲಕ ಚಿತ್ರರಂಗದಲ್ಲಿ ನನ್ನ ಎರಡನೇ ಇನಿಂಗ್ಸ್ ಪ್ರಾರಂಭ ಮಾಡಿತ್ತಿರುವುದು ವಿಶೇಷವಾಗಿದ್ದು “ಆಡುವ ಗೂಂಬೆ” ಚಿತ್ರದಲ್ಲಿ ಹಾಡುವ ಅವಕಾಶ ನೀಡುವ ಮೂಲಕ ಭಗವಾನ್ ಅವರು ನನಗೆ ವೇದಿಕೆ ಸೃಷ್ಟಿಸಿದ್ದಾರೆ ಎಂದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.