Skip to main content
ಉತ್ತರ ಪ್ರದೇಶ 281ಕ್ಕೆೆ ಆಲೌಟ್: 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಕರ್ನಾಟಕ

ಉತ್ತರ ಪ್ರದೇಶ 281ಕ್ಕೆೆ ಆಲೌಟ್: 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಕರ್ನಾಟಕ

ಉತ್ತರ ಪ್ರದೇಶ 281ಕ್ಕೆೆ ಆಲೌಟ್: 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಕರ್ನಾಟಕ

Karnataka Team

ಹುಬ್ಬಳ್ಳಿ: ದೇವದತ್ತ ಪಡಿಕ್ಕಲ್ (74 ರನ್) ಅವರ ಅರ್ಧಶತಕದ ಹೊರತಾಗಿಯೂ ಉತ್ತರ ಪ್ರದೇಶ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿದ ಕರ್ನಾಟಕ ತಂಡ 2019/20ರ ಆವೃತ್ತಿಯ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಎರಡನೇ ಸುತ್ತಿನ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಹಿನ್ನಡೆ ಭೀತಿಗೆ ಸಿಲುಕಿದೆ. ಪ್ರವಾಸಿಗರು 281 ರನ್ ಗಳಿಗೆ ಆಲೌಟ್ ಆದ ಬಳಿಕ ಪ್ರಥಮ ಇನಿಂಗ್ಸ್ ಶುರುಮಾಡಿದ ಕರ್ನಾಟಕ ತಂಡಕ್ಕೆೆ ಆರಂಭಿಕರಾದ ಡಿ ನಿಶ್ಚಲ್ ಹಾಗೂ ದೇವದತ್ತ ಪಡಿಕ್ಕಲ್ ಜೋಡಿ 91 ರನ್ ಜತೆಯಾಟದೊಂದಿಗೆ ತಂಡಕ್ಕೆೆ ಉತ್ತಮ ಆರಂಭ ನೀಡಿತು. ಆದರೆ, 36 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಡಿ.ನಿಶ್ಚಲ್ ಅವರ ದೊಡ್ಡ ಇನಿಂಗ್ಸ್ ಕಟ್ಟುವ ಆಸೆಗೆ ಸೌರಭ್ ಕುಮಾರ್ ತಣ್ಣೀರೆರಚಿದರು. ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯವಾಡಿದ ಆರ್. ಸಮರ್ಥ್(11) ಹಾಗೂ ನಾಯಕ ಕರುಣ್ ನಾಯರ್ (13)ಅವರನ್ನುಕ್ರಮವಾಗಿ ಮೋಹಿತ್ ಜಂಗ್ರಾ ಹಾಗೂ ಶುಭಂ ಮಾನಿ ವಿಕೆಟ್ ಎತ್ತಿದರು. ಪಡಿಕ್ಕಲ್ ಅರ್ಧಶತಕ: ಆರಂಭಿಕನಾಗಿ ಕಣಕ್ಕೆೆ ಇಳಿದ ದೇವದತ್ತ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ ಮಾಡಿದರು. ಒಂದು 108 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿಗಳೊಂದಿಗೆ 74 ರನ್ ಗಳಿಸಿದರು. ಇದರೊಂದಿಗೆ ಕರ್ನಾಟಕ ಪಾಳಯದಲ್ಲಿ ದೊಡ್ಡ ಇನಿಂಗ್ಸ್ನ ನಿರೀಕ್ಷೆೆ ಹುಟ್ಟಿಸಿದ್ದರು.

Team

ಆದರೆ, ಇದಕ್ಕೆೆ ಮೋಹಿತ್ ಜಂಗ್ರ ಅವಕಾಶ ಕಲ್ಪಿಸಲಿಲ್ಲ. ಎರಡನೇ ದಿನದ ಮುಕ್ತಾಯಕ್ಕೆೆ ಕರ್ನಾಟಕ 59 ಓವರ್ಗಳಿಗೆ 4 ವಿಕೆಟ್ ನಷ್ಟಕ್ಕೆೆ 168 ರನ್ ಗಳಿಸಿದೆ. ಇನ್ನೂ 113 ರನ್ ಹಿನ್ನಡೆಯಲ್ಲಿದೆ. ಇದಕ್ಕೂ ಮುನ್ನ ಐದು ವಿಕೆಟ್ ಕಳೆದುಕೊಂಡು 232 ರನ್ ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಉತ್ತರ ಪ್ರದೆಶ ಅಭಿಮನ್ಯು ಮಿಥುನ್ (60ಕ್ಕೆೆ 6) ಅವರ ಮಾರಕ ದಾಳಿಗೆ ನಲುಗಿ 111.2 ಓವರ್ಗಳಿಗೆ 281 ರನ್ ಗಳಿಗೆ ಆಲೌಟ್ ಆಗಿತ್ತು. ಮೊದಲನೇ ದಿನ ಅರ್ಧಶತಕ ಸಿಡಿಸಿದ್ದ ಮೊಹಮ್ಮದ್ ಸೈಫ್ ಬುಧವಾರ ಕೂಡ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಅವರು 181 ಎಸೆತಗಳಿಗೆ 11 ಬೌಂಡರಿಯೊಂದಿಗೆ 80 ರನ್ ಗಳಿಸಿದರು. ಆದರೆ, ಇವರನ್ನು ಅಭಿಮನ್ಯು ಮಿಥುನ್ ಕ್ಲೀನ್ ಬೌಲ್ಡ್ ಮಾಡಿದರು. ಕೆಲ ಕಾಲ ಉತ್ತಮ ಬ್ಯಾಟಿಂಗ್ ಮಾಡಿದ್ದ ಸೌರಭ್ ಕುರ್ಮಾ 37 ಎಸೆತಗಳಲ್ಲಿ 27 ರನ್ ಗಳಿಸಿ ರೋನಿತ್ ಮೋರೆಗೆ ವಿಕೆಟ್ ಒಪ್ಪಿಸಿದರು. ಮಂಗಳವಾರ ಅತ್ಯುತ್ತಮ ಬೌಲಿಂಗ್ ಮಾಡಿ ಮೂರು ವಿಕೆಟ್ ಕಿತ್ತಿದ್ದ ಮಿಥುನ್ ಇಂದು ಕೂಡ ಅದೇ ಲಯ ಮುಂದುವರಿಸಿದರು. ಸೈಫ್, ಮೋಹಿತ್ ಜಂಗ್ರಾ ಮತ್ತು ಉಪೇಂದ್ರ ಯಾದವ್ ಅವರ ವಿಕೆಟ್ಗಳನ್ನು ಕಬಳಿಸಿದರು. ಇವರಿಗೆ ಸಾಥ್ ನೀಡಿದ ರೋನಿತ್ ಮೋರೆ ಮತ್ತು ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ಉತ್ತರ ಪ್ರದೇಶ ಪ್ರಥಮ ಇನಿಂಗ್ಸ್: 111,2 ಓವರ್ಗಳಿಗೆ 281/10 (ಆರ್ಯನ್ ಜುಯಲ್ 109, ಮೊಹಮ್ಮದ್ ಸೈಫ್ 80, ಸೌರಭ್ ಕುರ್ಮಾ 27; ಅಭಿಮನ್ಯು ಮಿಥುನ್ 60 ಕ್ಕೆೆ 6, ರೋನಿತ್ ಮೋರೆ 41 ಕ್ಕೆೆ 2, ಶ್ರೇಯಸ್ ಗೋಪಾಲ್ 51 ಕ್ಕೆೆ 2) ಕರ್ನಾಟಕ ಪ್ರಥಮ ಇನಿಂಗ್ಸ್: 50 ಓವರ್ಗಳಿಗೆ 168/4 (ದೇವದತ್ತ ಪಡಿಕ್ಕಲ್ 74, ಡಿ.ನಿಶ್ಚಲ್ 36, ಅಭಿಷೇಕ್ ರೆಡ್ಡಿಿ ಔಟಾಗದೆ 23; ಮೋಹಿತ್ ಜಂಗ್ರಾ 56 ಕ್ಕೆೆ 2, ಶುಭಂ ಮಾವಿ 38 ಕ್ಕೆೆ 1, ಸೌರಭ್ ಕುಮಾರ್ 50 ಕ್ಕೆೆ 1)

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.