Skip to main content
ಸೆಂಚುರಿ ರಿಯಲ್ ಎಸ್ಟೇಟ್ ಹೊಸ ಯೋಜನೆ

ಉತ್ತರ ಬೆಂಗಳೂರಿನಲ್ಲಿ ಹೊಸ ಯೋಜನೆ ಸೆಂಚುರಿ ರಿಯಲ್ ಎಸ್ಟೇಟ್ .

ಉತ್ತರ ಬೆಂಗಳೂರಿನಲ್ಲಿ ಹೊಸ ಯೋಜನೆ‌ ಕೈಗೆತ್ತಿಕೊಂಡಿರುವ ಸೆಂಚುರಿ ರಿಯಲ್ ಎಸ್ಟೇಟ್

Dr .Daynanda.

ಬೆಂಗೆಳೂರು, ಡಿಸೆಂಬರ್ 11, 2019: ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈ. ಲಿಮಿಟೆಡ್, ಇದೀಗ ಉತ್ತರ ಬೆಂಗಳೂರು ಭಾಗದಲ್ಲಿ "ಸೆಂಚುರಿ ಹೊರೈಸನ್" ಹೆಸರಿನಡಿಯಲ್ಲಿ ನೂತನ ಯೋಜನೆ ಕೈಗೆತ್ತಿಕೊಂಡಿದ್ದು, ಇಂದು ಇದರ ಅನಾವರಣ ಮಾಡಲಾಯಿತು. ರಿಯಲ್ ಎಸ್ಟೇಟ್‌ನಲ್ಲಿ ದೊಡ್ಡ ಹೆಸರು ಮಾಡಿರುವ ಸೆಂಚುರಿ ರಿಯಲ್‌ ಎಸ್ಟೇಟ್‌ ಹೋಲ್ಡಿಂಗ್‌ ಬೆಂಗಳೂರಿನ ಉತ್ತರ ಭಾಗದಲ್ಲಿ ತನ್ನ ವರ್ಚಸ್ಸು ತೋರಿಸಲು ಮುಂದಾಗಿದೆ. 'ಸೆಂಚುರಿ ಹೊರೈಸನ್'‌ ಯೋಜನೆ‌ ಅಡಿಯಲ್ಲಿ ಸಾಕಷ್ಟು ಮನೆಗಳು ತಲೆ ಎತ್ತಲು ಸಿದ್ಧವಾಗಿದ್ದು, ಸಾಕಷ್ಟು ಜನರ ಕನಸು ನನಸಾಗಲಿವೆ. ಉತ್ತರ ಬೆಂಗಳೂರು ಹಲವು ಟೆಕ್ ಪಾರ್ಕ್‌ಗಳೊಂದಿಗೆ ಮಹತ್ತರ ಬೆಳವಣಿಗೆಯನ್ನು ಕಾಣುತ್ತಿರುವ ಪ್ರದೇಶ. ಶಿಕ್ಷಣ, ಆರೋಗ್ಯ ಸಂಸ್ಥೆಗಳು ಮತ್ತು ವಸತಿ ಯೋಜನೆಗಳು ಈ ಭಾಗದಲ್ಲಿ ಬರುತ್ತಿವೆ. ಈಗಾಗಲೇ ಸಾಕಷ್ಟು ಪ್ರತಿಷ್ಠಿತ ಸಂಸ್ಥೆಗಳು ಈ ಭಾಗದಲ್ಲಿ ಪ್ರಾರಂಭಗೊಂಡಿವೆ.

Century Real Estate

ಉತ್ತರ ಬೆಂಗಳೂರು ಎಲ್ಲಾ ರೀತಿಯ ಮೂಲಸೌಕರ್ಯಯಗಳನ್ನು ಹೊಂದಿರುವ ಪ್ರದೇಶ. ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕವನ್ನು ಹೊಂದಿರುವ ಉತ್ತರ ಬೆಂಗಳೂರು ನಗರದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ ಮತ್ತು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮಾರ್ಪಾಡಾಗಿದೆ. ಉತ್ತರ ಬೆಂಗಳೂರು ಸ್ಥಳಾವಕಾಶದ ಲಭ್ಯತೆ, ರಿಯಲ್ ಎಸ್ಟೇಟ್ ಅಭಿವೃದ್ಧಿ, ವಿಮಾನ ನಿಲ್ದಾಣದ ಸಾಮೀಪ್ಯ ಮತ್ತು ನಗರದ ಪ್ರಮುಖ ಹಬ್‌ಗಳಿಗೆ ಸಂಪರ್ಕವನ್ನು ಹೊಂದಿದ್ದು, ಹಲವು ಅಭಿವೃದ್ಧಿ ಕಾರ್ಯ ಮತ್ತು ಹೂಡಿಕೆಗೆ ಮೊಳಕೆಯೊಡೆದಿರುವ ಪ್ರಮುಖ ಸ್ಥಳವಾಗಿದೆ. ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಪಿ ರವೀಂದ್ರ ಪೈ, ಸೆಂಚುರಿ ಹೊರೈಸನ್ ಪ್ರಾಜೆಕ್ಟ್‌ನ ಅನಾವರಣ ಸಮಾರಂಭದಲ್ಲಿ ಮಾತನಾಡಿ, “ಸೆಂಚುರಿ ಹೊರೈಸನ್ ನಮಗೆ ಬಹುನಿರೀಕ್ಷಿತ ಯೋಜನೆಯಾಗಿದೆ. ಬೆಂಗಳೂರು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ 46 ವರ್ಷಗಳ ಅನುಭವ ಹೊಂದಿದ್ದೇವೆ. ಜೊತೆಗೆ ಗಣನೀಯ ಭೂ ಬ್ಯಾಂಕ್ ಹೊಂದಿರುವುದರಿಂದ ನಮ್ಮ ಸಂಸ್ಥೆ ರಿಯಲ್‌ ಎಸ್ಟೇಟ್‌ನಲ್ಲಿ ದೊಡ್ಡ ಸ್ಥಾನದಲ್ಲಿ ನಿಂತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಪೈಪೋಟಿ ನಡುವೆಯೂ ನಮ್ಮ ಸಂಸ್ಥೆ ದೊಡ್ಡ ಮಟ್ಟದ ಬುಕಿಂಗ್ ಮತ್ತು ಗ್ರಾಹಕರ ವಿಶ್ವಾಸವನ್ನು ನಾವು ಹೊಂದಿದ್ದೇವೆ. ಇಲ್ಲಿಗೆ ಬೆಂಗಳೂರು ಉತ್ತರದ ಹೆಬ್ಬಾಳದಿಂದ 5 ನಿಮಿಷಗಳು ಮತ್ತು ವಿಮಾನ ನಿಲ್ದಾಣದಿಂದ 20 ನಿಮಿಷ ಸಾಕು.

Century Real Estate

ಎಲ್ಲಾ ಸ್ಥಳಕ್ಕೂ ಬಹಳ ಹತ್ತಿರ ಇರುವ ಸ್ಥಳದಲ್ಲಿ ಸೆಂಚುರಿ ಹೊರೈಸನ್‌ ವಿನ್ಯಾಸಗೊಳಿಸಲಾಗಿದೆ, ” ಎಂದರು. ಸ್ಪರ್ಧಾತ್ಮಕ ಬೆಲೆಯ ಲಾಭದಲ್ಲಿ ಗುಣಮಟ್ಟದ ಉತ್ಪನ್ನಗಳು ಮತ್ತು ಸೌಲಭ್ಯಗಳನ್ನು ಹುಡುಕುವ ಹೊಸ ತಲೆಮಾರಿನ ಮನೆ ಖರೀದಿದಾರರನ್ನು ಗಮನದಲ್ಲಿಟ್ಟುಕೊಂಡು ಸೆಂಚುರಿ ಹೊರೈಸನ್ ಯೋಜನೆಯನ್ನು‌ 10,000 ಚದರ ಅಡಿಯಷ್ಟು ಸ್ಥಳಾವಕಾಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ನೂತನ ಬಡಾವಣೆಯಲ್ಲಿ ಕ್ಲಬ್‌ಹೌಸ್ ಮತ್ತು ನಿವಾಸಿಗಳ ಸಾಮಾಜಿಕ, ಮನರಂಜನೆ ಮತ್ತು ಫಿಟ್‌ನೆಸ್ ಅಗತ್ಯಗಳನ್ನು ಪೂರೈಸಲು ವ್ಯಾಪಕವಾದ ಸೌಲಭ್ಯಗಗಳು ಇರಲಿವೆ. ಅಲ್ಲದೆ ತಾಪಮಾನ ನಿಯಂತ್ರಿತ ಒಳಾಂಗಣ ಈಜುಕೊಳ, ಸ್ಟೀಮ್ ರೂಮ್ ಮತ್ತು ಒಳಾಂಗಣ ಆಟಗಳ ಕೋಣೆಯಂತಹ ಸೌಲಭ್ಯಗಳೂ ಇರಲಿವೆ. ಈ ನೂತನ ಸೆಂಚುರಿ ಹೊರೈಸನ್ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್‌‌ಗೆ ಭೇಟಿ ನೀಡಿ: https://www.centuryrealestate.in/luxury-apartments-in-jakkur/century-horizon/

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.