Skip to main content
ಶ್ರೀಮತಿ ಮಂಜುಳಾ ಗುರುರಾಜ್ ಅವರ ಸಾಧನಾ ಸಂಗೀತ ಶಾಲೆಗೆ 30 ವರ್ಷ

ಶ್ರೀಮತಿ ಮಂಜುಳಾ ಗುರುರಾಜ್ ಅವರ ಸಾಧನಾ ಸಂಗೀತ ಶಾಲೆಗೆ 30 ವರ್ಷ

ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಮಂಜುಳಾ ಗುರುರಾಜ್ ಅವರ ಸಾಧನಾ ಸಂಗೀತ ಶಾಲೆಗೆ 30 ವರ್ಷತುಂಬಿದ ಹರ್ಷ.

ಶ್ರೀಮತಿ ಮಂಜುಳಾ ಗುರುರಾಜ್ ಅವರ ಸಾಧನಾ ಸಂಗೀತ ಶಾಲೆಗೆ 30 ವರ್ಷ

 ಮಕ್ಕಳ ದಿನಾಚರಣೆಯ ದಿನದಂದು ಅರ್ಥ ಪೂರ್ಣ ಕಾರ್ಯಕ್ರಮ, ಮಂಜುಳಾ ರವರೇ ನಾಲ್ಕು ವರ್ಷದ ಹಿಂದೆ ನಿರ್ಮಿಸಿದ ಶುಕ್ರ ಸಭಾಂಗಣ ದಲ್ಲಿ, ಬೆಳಿಗ್ಗೆ ನಡೆದ ಗಾಯನ ಕಾರ್ಯಕ್ರಮ ಕ್ಕೆ ಮುಖ್ಯ ಅತಿಥಿಗಳಾಗಿ ನಾಡೋಜ ಪ್ರೊ ಕಮಲಾ ಹಂಪನಾ ಹಾಗೂ ಹಂಪನಾಗರಾಜಯ್ಯ ದಂಪತಿಗಳು, ಖ್ಯಾತ ಕಾದಂಬರಿಕಾರ್ತಿ ಎಂಕೆ ಇಂದಿರಾ ಅವರ ಸುಪುತ್ರ ಲೇಖಕ ಎಂಕೆ ಮಂಜುನಾಥ್,ಪ್ರೊ.ಅರುಣಾ, ಜನಪ್ರಿಯ ಗಾಯಕಿ ರೆಮೋ , ಮಂಗಳಾ ಅಂಜನ್ ,ಯುವ ಗಾಯಕ ಅನಿರುದ್ಧ ಶಾಸ್ತ್ರಿ, ಮುಂತಾದ ಸಾಧಕರ ಮುಂದೆ ಸಾಧನಾ ದ ಪುಟ್ಟ ಪ್ರತಿಭೆ ಗಳು ಅದ್ಭುತ ವಾಗಿ ಹಾಡಿ,, ಭರವಸೆ ಮೂಡಿಸಿದ ರು ,

ರಂಜನಿ ಸತ್ಯನಾರಾಯಣ ಉತ್ತಮ ನಿರೂಪಣೆ ಮಾಡಿದರು ಸಂಜೆ ನಡೆದ ರಂಗು ರಂಗಿನ ಕಾರ್ಯಕ್ರಮದಲ್ಲಿ 14 ಯುವ ಗಾಯಕರ ಅದ್ಭುತ ಗಾಯನ , ಖ್ಯಾತ ಕಲಾವಿದೆ ಅಪರ್ಣ ಅವರ ನಿರೂಪಣೆ ಮಧ್ಯೆ ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್, ನಿರ್ದೇಶಕ ಜೋಸೈಮನ್, ಮಾಲತಿ ಸರದೇಶಪಾಂಡೆ, ಜೊತೆ ಜೊತೆಯಲಿ ಖ್ಯಾತಿಯ ಅನಿರುದ್ಧ ಜತ್ಕರ್ ದಂಪತಿಗಳು, ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್, ಪತ್ರಕರ್ತ ಬಿಜಿ ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು ಎಲ್ಲ ಗಣ್ಯರು ಸಾಧನಾ ಪ್ರತಿಭೆಗಳನ್ನ ಪ್ರಶಂಸಿಸಿ, ಮಂಜುಳಾ ಗುರುರಾಜ್ ಅವರ ಸಾಧನೆಯನ್ನು ಶ್ಲಾಘಿಸಿದರು, , ಕೊನೆಯಲ್ಲಿ ಮಂಜುಳಾ ಮತ್ತು ಅನಿರುದ್ಧ್ ಅವರು, ಮೋಜುಗಾರ ಸೊಗಸುಗಾರ ಚಿತ್ರದ ಯಾರಮ್ಮ ಇವನು ಹಾಡನ್ನು ಹಾಡಿ ಪ್ರೇಕ್ಷಕರನ್ನುರಂಜಿಸಿದರು

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.