KGF Chapter 2 ಟೀಸರ್ ಬಿಡುಗಡೆ.!!
KGF Chapter 2 ಟೀಸರ್ ಬಿಡುಗಡೆ.

ಬಹುನಿರೀಕ್ಷಿತ ಚಿತ್ರ KGF Chapter 2 ಟೀಸರ್ ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜನವರಿ ೮ ನೇ ತಾರೀಕು ೧೦:೦೮ ಸಮಯಕ್ಕೆ ಬಿಡುಗಡೆ ಮಾಡಲಾಗುವುದು. ಈ ಪ್ರಯುಕ್ತ ಇಂದು ಅನೌನ್ಸ್ಮೆಂಟ್ ಪೋಸ್ಟರ್ ಹೊರತರಲಾಗಿದೆ. KGF Chapter 2 ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿಯೇ ಮೂಡಿ ಬಂದಿದ್ದು, ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಮುಂತಾದ ತಾರಾಗಣ ಹೊಂದಿದೆ. ಚಿತ್ರಕ್ಕೆ ಭುವನ್ ಗೌಡರವರ ಛಾಯಾಗ್ರಹಣವಿದ್ದು, ರವಿ ಬಸರೂರ್ ಅವರೇ ಮತ್ತೊಮ್ಮೆ ಮನಸೂರೆಗೊಳ್ಳುವ ಸಂಗೀತ ಸಂಯೋಜಿಸಿದ್ದಾರೆ. ಜನವರಿ ೮ ರಂದು ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನ್ನೆಲ್ನಲ್ಲಿ 10 :18 ಕ್ಕೆ ಚಿತ್ರದ ಟೀಸರ್ ರಿಲೀಸ್ ಮಾಡಲಾಗುತ್ತದೆ. ನಿಮ್ಮ ಅನನ್ಯ ಪ್ರೀತಿಗೆ ನಾವು ಚಿರಋಣಿ ಎಂದು ಚಿತ್ರ ತಂಡ ತಿಳಿಸಿದ್ದಾರೆ.
Recent comments