Skip to main content
ಪ್ರಯೋಗ್ ಸ್ಟುಡಿಯೋ ಸಂಸ್ಥೆಯ ಓನ್ಲಿ ಕನ್ನಡ (Only ಕನ್ನಡ ) ಕನ್ನಡದ ಓ.ಟಿ.ಟಿ ಯಲ್ಲಿ .

ಪ್ರಯೋಗ್ ಸ್ಟುಡಿಯೋ ಸಂಸ್ಥೆಯ ಓನ್ಲಿ ಕನ್ನಡ (Only ಕನ್ನಡ ) ಕನ್ನಡದ ಓ.ಟಿ.ಟಿ.

ಪ್ರಯೋಗ್ ಸ್ಟುಡಿಯೋ ಸಂಸ್ಥೆಯ ಓನ್ಲಿ ಕನ್ನಡ (Only ಕನ್ನಡ ) ಕನ್ನಡದ ಓ.ಟಿ.ಟಿ.

Kannada new film

ಸಧ್ಯದಲ್ಲೆ ನಾಡಿನ ಜನರ ಮುಂದೆ ತರಲು ಸನ್ನದ್ಧರಾಗಿದ್ದಾರೆ ಶ್ರೀ ಪ್ರದೀಪ್ ಮುಳ್ಳೂರು ಹಾಗು ಶ್ರೀಮತಿ ರಜನಿ ಪ್ರದೀಪ್. ಕನ್ನಡದ ಸಿನಿಮಾ ಹಾಗೂ ಕನ್ನಡದ ಕಲಾವಿದರಿಗೆ ಆರ್ಥಿಕ ಅನುಕೂಲಗಳನ್ನು, ಅವಕಾಶಗಳನ್ನು ಒದಗಿಸುವ ಮೂಲಕ ಕನ್ನಡ ರಾಜ್ಯೋತ್ಸವ ನವೆಂಬರ್ ೧ರಿಂದ ಕನ್ನಡಕ್ಕಾಗಿ ಕನ್ನಡದ ಕಲಾವಿದರಿಗೆ ಕನ್ನಡದ ಕಲಾರಸಿಕರ ಮನ ಮನೆಗಳಲ್ಲಿ ರಂಜಿಸಲು ಸಿದ್ದರಾಗುತ್ತಿದ್ದಾರೆ. ಕನ್ನಡದ ಸಿನಿಮಾ,ನಾಟಕ ಸಂಗೀತ ಸಾಹಿತ್ಯ ಹಾಗೂ ಕರುನಾಡಿನ ಎಲ್ಲಾ ಕಲಾಪ್ರಕಾರಗಳನ್ನು ಹಳ್ಳಿಯಿಂದ ದಿಲ್ಲಿವರೆಗೆ, ದೇಶದ ಹಾಗೂ ವಿದೇಶದ ಎಲ್ಲಾ ಕನ್ನಡ ಪ್ರೇಮಿಗಳಿಗೆ ಕನ್ನಡದ ಕಂಪನ್ನು ಮತ್ತೆ ಪಸರಿಸಲು ಮುಂದಾಗಿದ್ದಾರೆ. ಇದರ ಮೊದಲ ಕಾರ್ಯಕ್ರಮ ನವರಾತ್ರಿ ಉತ್ಸವದ ಮೂಲಕ ಚಾಲನೆ ಕೊಡುತ್ತಿದ್ದಾರೆ . ನಾಡಿನ ಸುಪ್ರಸಿದ್ಧ ಕಲಾವಿದರಿಂದ ೯ ದಿನ ನವರಾತ್ರಿ ಉತ್ಸವದ ಮೂಲಕ ನಾಡಿಗೆ ನಾಡಿನ ಜನತೆಗೆ ಸುಭಿಕ್ಷೆಯನ್ನು ನೀಡೆಂದು ನಾಡದೇವಿ ತಾಯಿ ಚಾಮುಂಡಿಯನ್ನು ಬೇಡುವ ಮೂಲಕ ನಾಡದೇವಿಗೆ ಕಲಾವಿದರು ಕಲಾಸೇವೆಯನ್ನು ಮಾಡುತ್ತಿದ್ದಾರೆ.

ಕನ್ನಡದ ಆಸಕ್ತ ಕಲಾವಿದರು ,ಕನ್ನಡದ ಸಿನಿಮಾ ತಂಡದವರು ಪ್ರಯೋಗ್ ಸ್ಟುಡಿಯೋ ಸಂಸ್ಥೆಯ ಮೂಲಕ ಬರುತ್ತಿರುವ ಓನ್ಲಿ ಕನ್ನಡ ಓ.ಟಿ.ಟಿ ಮೂಲಕ ಸದುಪಯೋಗ ಪಡಿಸಿಕೊಳ್ಳಲು ಸಂಸ್ಥೆಯನ್ನು ಸಂಪರ್ಕಿಸಬಹುದು. ನವೆಂಬರ್ ತಿಂಗಳಿಂದ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಿನಿಮಾಗಳು ಓನ್ಲಿ ಕನ್ನಡದ ಓ.ಟಿ.ಟಿ ಮೂಲಕ ಕನ್ನಡದ ಹಾಗೂ ವಿಶ್ವದ ಜನರಿಗೆ ತಲುಪಲು ಸಿದ್ದವಾಗಿದೆ. ಓನ್ಲಿ ಕನ್ನಡ ಓ.ಟಿ.ಟಿ. ಮೂಲಕ ಕನ್ನಡದ ಕಲಾವಿದರಿಗೆ ಸಾಕಷ್ಟು ಪ್ರಮಾಣದಲ್ಲಿ ಅವಕಾಶಗಳನ್ನು ರೂಪಿಸುವ ಮಹದಾಸೆ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಪ್ರದೀಪ್ ಮುಳ್ಳೂರು ಹಾಗೂ ಶ್ರೀಮತಿ ರಜನಿ ಪ್ರದೀಪ್ ಅವರದ್ದು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.