ನಮ್ಮ ಹಿರೋಗಳ “ಕಟ್ ಔಟ್” ನಿರ್ಮಾಣಕಾರನ ಬದುಕು ದುಸ್ತರ.
ನಮ್ಮ ಹಿರೋಗಳ “ಕಟ್ ಔಟ್” ನಿರ್ಮಾಣಕಾರನ ಬದುಕು ದುಸ್ತರ.

ಕನ್ನಡ ಚಿತ್ರರಂಗದ ಬಹುತೇಕ ಮಹಾನ್ ನಾಯಕ ನಟರ “ಕಟ್ ಔಟ್” ಗಳನ್ನ ನಿರ್ಮಾಣ ಮಾಡಿ ಇದುವರೆಗೂ ಐದು ಸಾವಿರಕ್ಕೂ ಅಧಿಕ ಸಿನಿಮಾ ಪ್ರಚಾರ ಕಾರ್ಯದ ಕಟ್ ಔಟ್,ಪೋಸ್ಟರ್ಸ್ ಗಳನ್ನು ರಚಿಸಿರುವ ಹಿರಿಯ ಅಪರೂಪದ ಕುಂಚ ಕಲಾವಿದ ,ಚಿನ್ನಪ್ಪ ವೃತ್ತಿಬದುಕಿನಲ್ಲಿ ದೊಡ್ಡಪ್ಪ ಎನ್ನುವ ಹೆಸರಿನ ಈ ಜೀವ ಇಂದು ತನ್ನ ಜೀವನದ ಅತೀ ಕರಳಾ ದಿನಗಳನ್ನ ಎದುರಿಸುವಂತಹ ಪರಿಸ್ಥಿ ಉಟಾಂಗಿದೆ. ತಮ್ಮ 10ನೇ ವಯಸ್ಸಿನಲ್ಲಿ ಬ್ರಶ್ ಹಿಡಿದ ಈ ಮನುಷ್ಯ 85 ವರ್ಷ ವಯಸ್ಸಿನವರಾದರು ಸುಮಾರು 75 ವರ್ಷಗಳಿಂದಲೂ ಇಂದಿನ ವರೆಗೂ ಬ್ರಶ್ ಹಿಡಿದೇ ಬದುಕು ನಡೆಸುತ್ತಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಕಡಿಮೆ ಎಲ್ಲಾ ತಲೆಮಾರಿನ ನಾಯಕ ನಟರ “ಕಟ್ ಔಟ್” ಗಳನ್ನು ರಚಿಸಿದ ಈ ಕಲಾವಿದ ವಿಪರ್ಯಯಾಸ ವೆಂದರೆ,ಆರ್ಥಿಕವಾಗಿ ಸದೃಡವಾಗಿ ಜೀವನ ನಡೆಸಬೇಕಾಗಿತ್ತು ,ಆದರೆ ಈ ಕಲಾವಿದ ಈಗಲೂ ನೆಲೆಸಿರುವುದು ಅದೇ ರಾಜಾಜಿನಗರದ ರಸ್ತೆಬದಿಯ ಸ್ವಯಂ ನಿರ್ಮಿತದ ಟೆಂಟ್ ನಲ್ಲಿ. ಅತೀರಥ ಮಹಾರಥರಾದ ಅಮೀತಾಬ್ ಬಚ್ಚನ್,ನಿಂದ ಹಿಡಿದು.ಕನ್ನಡ, ತಮಿಳು,ತೆಲುಗು,ಮಲಯಳಂ,ಒರಿಯಾ,ಹಿಂದಿ ಚಿತ್ರರಂಗದ ನಾಯಕ ನಟರ “ಕಟ್ ಔಟ್”ಗಳನ್ನು ರಚಿಸಿ ಖ್ಯಾತಿ ಹೊಂದಿದ ಈ ಕುಂಚ ಕಲಾವಿದನ ಬದುಕು ಇಂದು “ಕೊರೋನಾ”ಇಂಪ್ಯಾಕ್ಟ್ ನಿಂದಾಗಿ ಬದುಕು ದುಸ್ತರವಾಗಿದೆ.

ಹನ್ನೊಂದು ಮಂದಿಯ ಜನರ ಟೀಮ್ ಕಟ್ಟಿಕೊಂಡು ಹಾಗೂ ಹೀಗೂ ಜೀವನ ಸಾಗುಸುತ್ತಿದ್ದ ಚಿನ್ನಪ್ಪ ಅವರ ಕೈಯಲ್ಲಿ ಕೇಲಸ ವಿಲ್ಲದೇ ಕಂಗಾಲಾಗಿದ್ದಾರೆ.ಇನ್ನೂ ಇದೇ ವೃತ್ತಿಯನ್ನು ನಂಬಿಕೊಂಡು ಬದುಕು ಕಟ್ಟಿಕೊಳ್ಳುವ ಆಸೆ ಹೊಂದಿದ ಮಗನೂ ಕೂಡ ನಿರುದ್ಯೋಗಿಯಾಗಿದ್ದಾರೆ.ಈ ಹಿಂದೆ ವಿನಾಯಲ್ ತಂತ್ರಜ್ಞಾನದ ಪ್ರಿಟಿಂಗ್ ವ್ಯವಸ್ಥೆ ಬಂದಾಗಲೂ ಬುದುಕು ನರಕವಾಗಿತ್ತು.ಇದನ್ನೆ ನಂಬಿರುವ ಇವರು ಈಗ ಕೈಯಲ್ಲಿ ಕೇಲಸವಿಲ್ಲದೇ ಕಂಗಾಲಾಗಿದ್ದಾರೆ.ಇದುವೆರಗೂ ಈ ಉದ್ಯಮಕ್ಕೆ ಸಂಬದಿಸಿದ ಸಂಘಸಂಸ್ಥೆಗಳಲ್ಲಿ ಯಾವುದೇ ಸದಸ್ಯತ್ವ ಹೊಂದಿಲ್ಲ ಈ ಕುಟುಂಬ ಅಕ್ಷರಶಃ ಬಿದಿಗೆ ಬಿದ್ದಿದೆ.ಯಾರಾದರೂ ಸಹೃದಯಿಗಳು ಈ ಹಿರಿಯ ಕಲಾವಿದನ ಕೈ ಹಿಡಿಯುವರೇನೋ ಎಂಬುದನ್ನು ಕಾದು ನೋಡಬೇಕಾಗಿದೆ.
ಇಂಥಾ ಸಹೃದಯಿಗಳಿಗಾಗಿ ಈ ನಂಬರ್.9844183935
Recent comments