ಯೋಗರಾಜ್ ಭಟ್ ಬ್ಯಾನರ್ ಅಡಿಯಲ್ಲಿ ದಾವಣೆಗೆರೆಯ ಹುಡುಗ ನಾಯಕ ನಟ.
ಜನವರಿಯಲ್ಲಿ “ಪದವಿ ಪೂರ್ವ” ಸಿನಿಮಾ.

ಅರೇ ಅರೇ… ಏನಿದೂ “ಪದವಿ ಪೂರ್ವ” ಯಾವ ಸಿನಿಮಾ ಯಾರದು ಅಂತ ಯೊಚ್ನೆ ಮಾಡ್ತಾಇದ್ದಿರಾ.? ಹದಿ ಹರಿಯದ ಯುವಕ -ಯುವತಿಯರ ಮನಸ್ಸಿಗೆ ಬಾಣದಂತಹ ಬರವಣಿಗೆಯ ಮೂಲಕ ಡೈಲಾಗಳನ್ನ ಬರೆಯುವಂತಹ ವಿಭಿನ್ನ ಶೈಲಿಯ ನಿರ್ದೇಶಕ ಯೋಗರಾಜ್ ಭಟ್ ಇವರ “ ಯೋಗರಾಜ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಚಿತ್ರ “ ಪದವಿ ಪೂರ್ವ “ . ಈ ಶೀರ್ಷಿಕೆ ಹೆಳುವಂತೆ ಇದು ಕಾಲೇಜು ಓದುವ ವಿದ್ಯಾರ್ಥಿ –ವಿದ್ಯಾರ್ಥಿನಿಯರಿಗೆ ಸಂಭದಿಸಿದ್ದು ಎಂದು ಊಹಿಸಬಹುದು.
ಈ ಚಿತ್ರ ನಿರ್ಮಾಣದ ಬಗ್ಗೆ ವಿಶೇಷವೆಂದರೆ.

ಪದವಿ ಪೂರ್ವ ಶೀರ್ಷಿಕೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿಲ್ಲ. ಬದಲಿಗೆ ಅವರ ಜೊತೆ ಕೆಲಸ ಮಾಡಿ ಅನುಭವ ಇರುವಂತಹ ಹರಿಪ್ರಸಾದ್ ಜಯಣ್ಣ ಅ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾದ ಮೂಲಕ ಹೊಸ ನಟ , ದಾವಣಗೆರೆ ಮೂಲದ ಪೃಥ್ವಿ ಶ್ಯಾಮನೂರು ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಲಿದ್ದಾರೆ. ಅವರ ತಂದೆ ರವಿ ಶ್ಯಾಮನೂರ್ ನಿರ್ಮಾಣದಲ್ಲಿ ಯೋಗ್ ರಾಜ್ ಭಟ್ ಜೊತೆ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಅರ್ಜುನ್ ಜನ್ಯ ವಾದ್ಯಗಳನ್ನ ನುಡಿಸಲಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಗ್ರಹಣ ಇರಲಿದೆ.ಚಿತ್ರಕ್ಕೆ ತಕ್ಕಂತೆ ಹದಿಹರೆಯದಲ್ಲಿರುವ ಪೃಥ್ವಿ ಶಾಮನೂರು ಮಾಡೆಲಿಂಗ್ ನಲ್ಲಿ ತೋಡಗಿಕೊಂಡಿರುವ ಇವರು ಚಿತ್ರರಂಗಕ್ಕೆ ಪಾದರ್ಪಣೆ ಮಾಡುವ ಖುಷಿಯಲ್ಲಿದ್ದಾರೆ. ಇನ್ನೂ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ.ಎಲ್ಲವೂ ಅಂದುಕೊಂಡಂತೆ ನಡೆದರೆ 2020 ರ ಜನವರಿಯಲ್ಲಿ ಚಿತ್ರ ಸೆಟ್ಟೆರಲಿದೆ.
Recent comments