ಮತವಾಗಿ ಪರಿವರ್ತನೆ ಆಗಲಿದೆ ನನ್ನ ಇಮೇಜ್:
ಮತವಾಗಿ ಪರಿವರ್ತನೆ ಆಗಲಿದೆ ನನ್ನ ಇಮೇಜ್:
ಕೃಪೆ :ವಿಜಯಾವಾಣಿ
ಬೆಂಗಳೂರು :ಈ ಬಾರಿ ನನ್ನ ಇಮೇಜನ್ನು ವೋಟ್ ಆಗಿ ಪರಿವರ್ತನೆ ಮಾಡಿಕೊಳ್ಳುವ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಹೀಗಾಗಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಜೆಡಿಎಸ್ ಅಧಿಕಾರ ಹಡಿಯುವುದು ನೂರಕ್ಕೆ ಇನ್ನೂರರಷ್ಟು ಗ್ಯಾರಂಟಿ,ಈ ವಿಶ್ವಾಸ ದಿಂದಲೇ ರಾಜ್ಯದ ಅಭಿವೃದ್ದಿಗೆ ನೀಲನಕ್ಷೆ ಸಿದ್ದವಾಗಿದೆ’ ಇದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಅಚಲ ವಿಶ್ವಾಸ ಎಂದು ನಿನ್ನೆ ನಡೆದ ಪೋನ್ ಇನ್ ಕಾರ್ಯಕ್ರಮದಲ್ಲಿ ಹೇಳಿದರು. ಎರಡು ಕಡೆ ಸ್ಪರ್ಧೆ ಕಾರ್ಯಕರ್ತರ ಬಯಕೆ: ರಾಮನಗರ ಹಾಗು ಚನ್ನಪಟ್ಟಣ ಎರಡೂ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ನನಗೆ ಅನಿವಾರ್ಯವಾಗಿರಲಿಲ್ಲ. ಕಾರ್ಯಕರ್ತರಿಗೆ ಅನಿವಾರ್ಯವಾಗಿತ್ತು.ನನ್ನ ಮನಸ್ಸಿನಲ್ಲಿ ಇದ್ದುದು ರಾಮನಗರ ಒಂದೇ.ನಮ್ಮ ಕುಟುಂಬದವರನ್ನು ಸ್ಪರ್ಧಿಸಲು ಸಜ್ಜಾಗುವಂತೆಎ ಹೇಳಿದ್ದೆ.ಆದರೆ ಅವರು ಟೇಕ್ಆಫ್ ಆಗಲಿಲ್ಲ.ಅಲ್ಲದೆ, ಚನ್ನಪಟ್ಟಣದ ಕಾರ್ಯಕರ್ತರು ಅನಿತಾ ಕುಮಾರಸ್ವಾಮಿ ಸ್ಪರ್ಧಿಸದಿದ್ದರೆ ನೀವೇ ಸ್ಪರ್ಧಿಸಿ ಎಂದು ಒತ್ತಡ ಹೇರಿದ್ದರಿಂದ ನನ್ನ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಸ್ಪರ್ಧಿಸುತ್ತಿದ್ದೇನೆ.ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂದು ಇನ್ನು ಮುಂದೆ ಯಾರು ಹೇಳಲು ಆಗುವಿದಿಲ್ಲ.ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಎಂದು ಒಂದು ವರ್ಷದ ಹಿಂದೆಯೇ ಹೇಳಿದ್ದೆ.ಈಗಲೂ ಅದಕ್ಕೆ ಬದ್ದ. ಕಾರಣಕ್ಕಾಗಿಯೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕಿದೆ ಎಂದು ಸಮರ್ಥಿಸಿಕೊಂಡರು.

ವಾರದಲ್ಲಿ ಪ್ರಣಾಳಿಕೆ:
ಈ ಗಾಗಲೇ ನಾನು ಪಕ್ಷದ ಪ್ರಣಾಳಿಕೆ ಅಂಶಗಳನ್ನು ಜನರ ಎದುರು ಹೇಳುತ್ತಲೇ ಬಂದಿದ್ದೇನೆ.ಮುಂದಿನ ಒಂದು ವಾರದ ಒಳಗೆ ಸಮಗ್ರ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದು ಪ್ರಶ್ನೇಯೊಂದಕ್ಕೆ ಉತ್ತರಿಸಿದರು.
ಉತ್ತರದಲ್ಲಿ ಶಕ್ತಿ ಪ್ರದರ್ಶನ:
ಹುಬ್ಬಳ್ಳಿ-ಧಾರವಾಡಗಳಲ್ಲಿ1-2 ಬೆಳಗಾವಿ ಜಿಲ್ಲೆಯಲ್ಲಿ3-4 ರಾಯಚೂರು 7ರಲ್ಲಿ ಐದು ಸೀಟು ಗೆದ್ದು ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಶಕ್ತಿಯೇ ಇಲ್ಲ ಎನ್ನುವವರಿಗೆ ನಮ್ಮ ಸಾಮರ್ಥ್ಯ ಸಾಭೀತುಪಡಿಸುತ್ತೇವೆ ಎಂದು ಎಚ್ಡಿಕೆ ಸವಾಲು ಹಾಕಿದರು. ನಮ್ಮದು ಟಾರ್ಗೆಟ್ 113. ಅನೇಕ ಅಭ್ಯರ್ಥಿಗಳು ಕಳೆದೊಂದು ವರ್ಷದಿಂದ ಕ್ಷೇತ್ರದಲ್ಲಿ ಮತದಾರರ ಸಂಪರ್ಕದಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದಾರೆ.2ತಿಂಗಳ ಹಿಂದೆಯೇ ನಾವು 126 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದೇವೆ.ಯಾರಿಗೂ ಟಿಕೆಟ್ ಗಾಗಿ ಅಲೆದಾಡುವ ಸ್ಥಿತಿಯಿಲ್ಲ.ನಾನು 140-150 ಟಾರ್ಗೆಟ್ ಇಟ್ಟುಕೊಂಡಿಲ್ಲ ಮ್ಯಾಜಿಕ್ ನಂಬರ್ 113 ನನ್ನ ಗುರಿ ಎಂದರು.
ಸಾಲಮನ್ನ ಹೇಗೆ .?
ಸಂಪನ್ಮೂಲ ಕ್ರೋಡೀಕರಣದ ಲೆಕ್ಕಾಚಾರ ಹಾಕಿಯೇ ಸಾಲಮನ್ನಾ ಘೋಷಿಸಿದ್ದೇನೆ. ತೆಲಂಗಾಣದಲ್ಲಿ 40 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಮಾಡಿದ್ದಾರೆ.ಅಲ್ಲಿ ರೈತರ ಸಾಲದ ಮೇಲಿನ ಬಡ್ಡಿಯಷ್ಟೇ ಕಟ್ಟಿದ್ದಾರೆ.ಉಳಿದ ಅಸಲು ಪಾವತಿಗೆ ರಿಸರ್ವ್ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ 4 ಕಂತುಗಳಲ್ಲಿ ಕಟ್ಟುವ ಭರವಸೆಯನ್ನು ಸರ್ಕಾರ ನೀಡಿದೆ.ಅದೇ ರೀತಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಂತು ರೂಪದಲ್ಲಿ ಸಾಲವನ್ನು ಪಾವತಿಸುತ್ತೇವೆ; ರೈತರಿಗೆ ಬ್ಯಾಂಕ್ ನಿಂದ ಯಾವುದೇ ರೀತಿಯ ನೋಟಿಸ್ ಜಾರಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಎಚ್ ಡಿಕೆ ತಿಳಿಸಿದರು.

Recent comments