ದೇವದುರ್ಗ ಛಾಯಗ್ರಾಹಕರಿಂದ ಪರಿಹಾರಕ್ಕಾಗಿ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ.
ದೇವದುರ್ಗ ಛಾಯಗ್ರಾಹಕರಿಂದ ಪರಿಹಾರಕ್ಕಾಗಿ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ.

ಕರೋನ ವೈರಸ್ ನ ತೊಂದರೆಯಿಂದ ಕರ್ನಾಟಕದಲ್ಲಿನ ವೃತಿಪರ ಛಾಯಾಗ್ರಾಹಕರಿಗೆ ವ್ಯಾಪರ ವ್ಯವಹಾರಗಳಲ್ಲಿ ಅಪಾರ ಹಾನಿಯಾಗಿದ್ದು ಸಹಾಯ ಕೋರಿ ಸರ್ಕಾರಕ್ಕೆ ಮನವಿ.ಕರ್ನಾಟಕ ರಾಜ್ಯದಲ್ಲಿ ಛಾಯಗ್ರಹಣ ವೃತ್ತಿಯನ್ನು ಅವಲಂಭಿಸಿ ಸರಿಸುಮಾರು ಲಕ್ಷಾಂತರ ಜನರು ತಮ್ಮ ಜೀವನಾಧಾರವಾಗಿ ಈ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ,ಛಾಯಾಗ್ರಾಹಕರಿಗೆ ಮಾರ್ಚ್,ಏಪ್ರಿಲ್,ಮೇ,ಜೂನ್, ತಿಂಗಳು ಮದುವೆಯ ಸಮಯವಾಗಿದ್ದು ಉಳಿದ ದಿನಗಳಲ್ಲಿ ಅಷ್ಟಾಗಿ ಮದುವೆಗಳು ಇರುವುದಿಲ್ಲ, ಪ್ರಮುಖವಾಗಿ ಮದುವೆಗಳು ನಡೆಯುವ ನಾಲ್ಕು ತಿಂಗಳಲ್ಲಿ ಕರೋನ ವೈರಸ್ ನ ತೊಂದರೆಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನಸಂದಣಿ ಆಗದಂತೆ ಎಚ್ಚರ ವಹಿಸುವ ಸಲುವಾಗಿ ಮದುವೆಗಳನ್ನು ಸರಳವಾಗಿ ಆಚರಿಸಿರಿ ಎಂದು ಸರ್ಕಾರ ಆದೇಸಿದೆ. ಸರ್ಕಾರದ ಆದೇಶದ ನಂತರ ಛಾಯಗ್ರಾಹಕರಿಗೆ ಬುಕ್ ಆಗಿದ್ದ ಎಲ್ಲಾ ಕಾರ್ಯಕ್ರಮಗಳೂ ರದ್ದಾಗಿವೆ.
ನಮ್ಮ ಕುಟುಂಬಗಳಿಗೆ ಜೀವನಾಧರವೇ ಛಾಯಾಗ್ರಾಹಣ ವೃತ್ತಿ,ಸರ್ಕಾರದ ಆದೇಶದಿಂದ ಈ ವೃತ್ತಿಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಛಾಯಗ್ರಾಹಕರು ಮತ್ತು ನಮ್ಮ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ.ಇಂತಹ ಸಮಯದಲ್ಲಿ ನಮ್ಮಂತಹ ಅಸಹಾಕರನ್ನು ಕೈಹಿಡಿದು ವೃತ್ತಿಪರ ಛಾಯಗ್ರಾಹಕರಿಗೆ ಸರ್ಕಾರದ ವತಿಯಿಂದ ಆರ್ಥಿಕವಾಗಿ ನೆರವನ್ನು ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳ ಸನ್ನಿಧಾನದಲ್ಲಿ ನಾಡಿನ ಸಮಸ್ತ ಛಾಯಗ್ರಾಹಕರ ಪರವಾಗಿ ಬೇಡಿಕೊಳ್ಳುತ್ತೆವೆಂದು ಪರಿಹಾರಕ್ಕಾಗಿ ದೇವದುರ್ಗ ತಾಲುಕಿನ ಛಾಯಾಗ್ರಾಹಕ ಸಂಘ (ರಿ) ವತಿಯಿಂದ ರಾಜ್ಯದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀಬಿ.ಎಸ್.ಯಡಿಯೂರಪ್ಪನವರಿಗೆ ದೇವದುರ್ಗ ತಾಲುಕು ದಂಡಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.ಅಧ್ಯಕ್ಷರಾದ ಬೂದೆಪ್ಪ ಬಳೆ,ಸಂಗಮೇಶ ಹರವಿ,ವಿಜಯಕುಮಾರ್ ಕುಂಬಾರ್ , ಗುರು ಉಭಾಳೆ,ಆದೆಪ್ಪ,ಕುಂಬಾರ,ಪೋಮಣ್ಣ,ವಿರೇಶ್ ಮಸ್ಕಿ ಇನ್ನೀತರರು ಭಾಗಿಯಾಗಿದ್ದರು.
Recent comments