Skip to main content
1.20 ಲಕ್ಷ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ .ಹೆಚ್ ಡಿ ಕೆ ಹೇಳಿಕೆ

1.20 ಲಕ್ಷ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ .ಹೆಚ್ ಡಿ ಕೆ ಹೇಳಿಕೆ

1.20 ಲಕ್ಷ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ .ಹೆಚ್ ಡಿ ಕೆ ಹೇಳಿಕೆ .

Hdk

ರಾಮನಗರ - ಈಗಾಗಲೇ ಕೊರೋನಾ ಸಂಕಷ್ಟಕ್ಕೆ ಸಿಲುಕಿ ನಾನ ತೊಂದರೆಗಳು ಎದುರಿಸುತ್ತಿರುವ ಬಡ ಕುಟುಂಬಗಳಿಗೆ ಹೆಚ್ ಡಿ ಕೆ ಕುಟುಂಬ ಫುಡ್ ಕಿಟ್ ವಿತರಣೆ ಮಾಡುತ್ತಿದ್ದಾರೆ .ಅವರ ಪ್ರಕಾರ ಚನ್ನಪಟ್ಟಣ ಕ್ಷೇತ್ರಗಳಿಗೆ 60 ಸಾವಿರ ಜನರಿಗೆ ಫುಡ್ ಕಿಟ್ ಕೊಡಲು ತೀರ್ಮಾನಿಸಿದ್ದರು ಆದರೆ ಈಗ ಎರಡೂ ಕ್ಷೇತ್ರದಿಂದ 1.20 ಲಕ್ಷ ಕುಟುಂಬಗಳಿಗೆ ಫುಡ್ ಕಿಟ್ ಕೊಡುತ್ತಿದ್ದೇವೆ ಎಂದರು ಇದೇ ತಿಂಗಳು ರಾಮನಗರದಲ್ಲೇ ಮಗನ ಮದುವೆ ಮಾಡಬೇಕಿತ್ತು .

ಆದರೆ ಕೊರೋನಾ ಎಫೆಕ್ಟ್ ನಿಂದಾಗಿ ಮಾಡಲಾಗಲಿಲ್ಲ, ಹಾಗಾಗಿ ಇವತ್ತು 5.50 ಕೋಟಿ ವೆಚ್ಚದಲ್ಲಿ ರಾಮನಗರ - ಚನ್ನಪಟ್ಟಣ ಜನರಿಗೆ ಫುಡ್ ಕಿಟ್ ಕೊಡುತ್ತಿದ್ದೇವೆ, ಮುಂದೆ ಎರಡೂ ಕ್ಷೇತ್ರದ ಪ್ರತಿ ಮನೆಗೂ ಕೂಪನ್ ಕೊಟ್ಟು ಫುಡ್ ಕಿಟ್ ಕೊಡಲಾಗುವುದು ಎಂದರು ಅಲ್ಲದೇ ಮಗನ ಮದುವೆ ಸಮಾರಂಭದ ಹಣವನ್ನ ಜನರಿಗಾಗಿ ಖರ್ಚು ಮಾಡುತ್ತಿದ್ದೇನೆ ಅಕ್ಕಿ, ಬೇಳೆ, ಸಕ್ಕರೆ, ಈರುಳ್ಳಿ ಕೊಡುತ್ತಿದ್ದೇವೆ ರಾಮನಗರದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಹೇಳಿದರು ಮತ್ತು ರಾಮನಗರ ಜಿಲ್ಲೆಯ ಕೊರೋನಾ ವರದಿ ನೆಗೆಟಿವ್ ಬಂದ ಹಿನ್ನೆಲೆ ಮಾಜಿ ಸಿಎಂ ಹೆಚ್ಡಿಕೆ ರಾಮನಗರದಲ್ಲಿ ಪ್ರತಿಕ್ರಿಯೆ ನಿಡಿ ಇದು ಸಂತೋಷವಾದ ಸುದ್ದಿ, ಆದರೆ ಜನ ಮೈಮರೆಯಬಾರದು ಈ ಸಂದರ್ಭದಲ್ಲಿ ನೆಗೆಟಿವ್ ಬಂದು ಮತ್ತೆ ಸೋಂಕು ಕಾಣಿಸುವ ಸಾಧ್ಯತೆ ಇದೇ ಹಾಗಾಗಿ ಇನ್ನು ಎರಡು ವಾರಗಳ ಕಾಲ ಸಿಬ್ಬಂದಿಗಳು ಎಚ್ಚರಿಕೆಯಿಂದ ಇರಬೇಕು ಜಿಲ್ಲಾಡಳಿತ ಕೂಡ ಎಚ್ಚರದಿಂದ ಕೆಲಸ ಮಾಡಬೇಕು, ಯಾವುದೇ ನಿರ್ಲಕ್ಷ್ಯ ಮಾಡಬಾರದು ಜನರು ಕೂಡ ಆತಂಕಕ್ಕೆ ಒಳಗಾಗಬಾರದು ಎಂದು ಜನರಲ್ಲಿ ಮನವಿ ಮಾಡಿಕೊಂಡರು .

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.