Skip to main content
ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು "ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ".ಚಿತ್ರದ ಲಿರಿಕಲ್ ಸಾಂಗ್.

ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು "ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ".ಚಿತ್ರದ ಲಿರಿಕಲ್ ಸಾಂಗ್.

ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು "ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ".ಚಿತ್ರದ ಲಿರಿಕಲ್ ಸಾಂಗ್.

Kannada new film

ಕೊರೋನ ಎರಡನೇ ಅಲೆ ಪೂರ್ತಿ ಮುಗಿದಿಲ್ಲ..ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಇನ್ನೂ ಅವಕಾಶ ಸಿಕ್ಕಿಲ್ಲ.. ಆದರೆ ಕೆಲವು ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಈಗ ಕನ್ನಡ ಚಿತ್ರರಂಗದ ಕಾರ್ಯ‌ಚಟುವಟಿಕೆ ನಿಧಾನವಾಗಿ ಆರಂಭವಾಗಿದೆ.‌ ತಾರಾಜೋಡಿ ದಿಗಂತ್ - ಐಂದ್ರಿತಾ ರೇ ಬಹಳವರ್ಷಗಳ ನಂತರ ನಾಯಕ - ನಾಯಕಿಯಾಗಿ ನಟಿಸಿರುವ "ಕ್ಷಮಿಸಿ‌ ನಿಮ್ಮ ಖಾತೆಯಲ್ಲಿ ಹಣವಿಲ್ಲ" ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಈ ಲಿರಿಕಲ್ ಸಾಂಗ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಕಳೆದ ಒಂದೂವರೆ ವರ್ಷಗಳಿಂದ ಕೊರೋನ ಕಾರಣದಿಂದ ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಿರಲಿಲ್ಲ.. ಇಂದು ಈ ಸಮಾರಂಭದಲ್ಲಿ ಮಾಧ್ಯಮದ ಮಿತ್ರರನ್ನು ಹಾಗೂ ಚಿತ್ರೋದ್ಯಮದ ಗೆಳೆಯರನ್ನು ನೋಡಿ ಬಹಳ ಆನಂದವಾಗಿದೆ. ಚಿತ್ರಮಂದಿರಗಳು ಬೇಗ ಆರಂಭವಾಗಲಿ.. ಚಿತ್ರೋದ್ಯಮದ ಚಟುವಟಿಕೆಗಳು ಮುಂಚಿನಂತೆ ಆಗಲಿ.. ಎಲ್ಲರ ಖಾತೆಗೂ ಹಣ ಬರಲಿ ಎಂದು ಗಣೇಶ್ ಹಾರೈಸಿದರು. ನಾನು ಮೂಲತಃ ಮಲೆನಾಡಿನವನು.

Kannada new film

ಅಡಿಕೆ ಬೆಳೆ ಬೆಳೆದು ನನಗೆ ಅಭ್ಯಾಸವಿದೆ.. ಈ ಸಿನಿಮಾ ಮಲೆನಾಡಿನ ಹುಡುಗನ‌ ಕಥೆಯನ್ನೇ ಆಧರಿಸಿರುವುದರಿಂದ ನನಗೆ ನಟಿಸಲು ಸುಲಭವಾಯಿತು ಎಂದು ತಿಳಿಸಿದ ನಾಯಕ ದಿಗಂತ್, ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕರಿಸಿದ ನಿರ್ಮಾಪಕ,‌ ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು. ಚಿತ್ರದ ಕಥಾವಸ್ತು ತುಂಬಾ ಇಷ್ಟವಾಯಿತು.. ಚಿತ್ರದ ಕಥೆ ಕೇಳಿದ ಕೂಡಲೇ ನನಗೆ ಈ ಪಾತ್ರದಲ್ಲಿ ನಟಿಸುವ ಮನಸ್ಸಾಯಿತು. ಜನ ಈಗ ಉತ್ತಮ ಕಥಾವಸ್ತುವುಳ್ಳ ಚಿತ್ರಗಳನ್ನು ಇಷ್ಟಪಡುತ್ತಿದ್ದಾರೆ. ನಮ್ಮ ಚಿತ್ರವನ್ನು ಕನ್ನಡ ಕಲಾರಸಿಕರು ಇಷ್ಟಪಟ್ಟು ಯಶಸ್ವಿಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ಚಿತ್ರದ ಮತ್ತೊಬ್ಬ ನಾಯಕಿ ರಂಜನಿ ರಾಘವನ್ ಅವರ ಅಭಿಪ್ರಾಯ. ನಮ್ಮ ಚಿತ್ರದ ಚಿತ್ರೀಕರಣ ‌ಪೂರ್ಣವಾಗಿ ರೀರೆಕಾರ್ಡಿಂಗ್ ಹಂತದಲ್ಲಿದೆ. ಮಲೆನಾಡ ಹುಡುಗನ ಜೀವನದಲ್ಲಿ ನಡೆಯುವ ಕಥಾವಸ್ತುವಿನ ಚಿತ್ರವಾಗಿರುವುದರಿಂದ ಮಲೆನಾಡಿನ ಭಾಗದಲ್ಲೇ ಹೆಚ್ಚು ಚಿತ್ರೀಕರಣ ಮಾಡಿದ್ದೇವೆ. ಚಿತ್ರದಲ್ಲಿ ಮನೋರಂಜನೆಗೆ ಹೆಚ್ಚಿನ ಒತ್ತು ನೀಡಿದ್ದೇವೆ‌. ಕೊನೆಯಲ್ಲಿ ಉತ್ತಮ ಸಂದೇಶ ಕೂಡ ಇರುತ್ತದೆ ಎಂದು ತಿಳಿಸಿದ ನಿರ್ದೇಶಕ ವಿನಾಯಕ ಕೋಡ್ಸರ, ಕೊರೋನ ಹಾವಳಿ ಕಡಿಮೆ ಆದರೆ ಸೆಪ್ಟೆಂಬರ್ ವೇಳೆಗೆ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು.

ನಿರ್ಮಾಪಕ ಸಿಲ್ಕ್ ಮಂಜು ಹಾಗೂ ಚಿತ್ರದ ಆಡಿಯೋ ಹಕ್ಕು ಪಡೆದಿರುವ ಲಹರಿ ಸಂಸ್ಥೆ ವೇಲು ಅವರು ಸಹ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ನಿರ್ಮಾಪಕರ ಸ್ನೇಹಿತರಾದ ದೇವೇಂದ್ರ ರೆಡ್ಡಿ, ಯಶ್ ರಾಜ್, ಪ್ರಕಾಶ್ ಮುಂತಾದವರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ವಿಶ್ವಜಿತ್ ರಾವ್ ಬರೆದಿರುವ ಈ ಚಿತ್ರದ ಲಿರಿಕಲ್ ಹಾಡು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ‌. ಪ್ರಜ್ವಲ್ ಪೈ ಈ ಚಿತ್ರದ ಸಂಗೀತ ನಿರ್ದೇಶಕರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.