Skip to main content
​    ​​    ​ಗಣಪತಿ ಹಬ್ಬಕ್ಕೆ 'ಕೋಲು ಮಂಡೆ' ವಿಡಿಯೋ ಆಲ್ಬಂ.

ಗಣಪತಿ ಹಬ್ಬಕ್ಕೆ 'ಕೋಲು ಮಂಡೆ' ವಿಡಿಯೋ ಆಲ್ಬಂ.

ಗಣಪತಿ ಹಬ್ಬಕ್ಕೆ 'ಕೋಲು ಮಂಡೆ' ವಿಡಿಯೋ ಆಲ್ಬಂ.

Kannada film  new album song

ಆನಂದ್ ಆಡಿಯೋ ಹೊಸ ಪ್ರಯತ್ನಕ್ಕೆ ಚಂದನ್ ಶೆಟ್ಟಿ ಸಾಥ್. ಕನ್ನಡ ಚಿತ್ರರಂಗದಲ್ಲಿ ಸರ್ವಕಾಲಿಕ ದಾಖಲೆ ಎನ್ನಬಹುದಾದ, ಬಹು ತಾರಾಬಳಗದ ಅದ್ದೂರಿ ಚಿತ್ರ ಹಬ್ಬ. ಈ ಚಿತ್ರದ ಹಾಡುಗಳು ಜನರ ಕಿವಿಯಲ್ಲಿ ಇನ್ನೂ ಗುನುಗುತ್ತಿದೆ. ಇಂತಹ ಯಶಸ್ವಿ ಚಿತ್ರದ ಆಡಿಯೋ ಹಕ್ಕನ್ನು ಪಡೆಯುವ ಮ‌ೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಆನಂದ್ ಆಡಿಯೋ ಸಂಸ್ಥೆ ಈ ವರೆಗೂ ಸಾಕಷ್ಟು ಯಶಸ್ವಿ ಚಿತ್ರಗಳ ಹಾಡುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈಗ 'ಕೋಲುಮಂಡೆ' ಎಂಬ ವಿಡಿಯೋ ಆಲ್ಬಂ ಈ‌ ಸಂಸ್ಥೆಯಿಂದ ನಿರ್ಮಾಣವಾಗಿದ್ದು, ಗಣಪತಿ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಖ್ಯಾತ ಗಾಯಕ ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದ್ದು, ಚಂದನ್ ಶೆಟ್ಟಿ ಅವರೆ ಸಂಗೀತ ಸಂಯೋಜನೆ ಮಾಡಿದ್ದಾರೆ.

Kannada new film

ಮೊಹನ್ ಛಾಬ್ರಿಯಾ & ಆನಂದ್ ಆಡಿಯೋ ಅರ್ಪಿಸುವ ಈ ವಿಭಿನ್ನ ವಿಡಿಯೋ ಆಲ್ಬಂ ಅನ್ನು ಶ್ಯಾಮ್ ಛಾಬ್ರಿಯಾ ಹಾಗೂ ಆನಂದ್ ಛಾಬ್ರಿಯಾ ನಿರ್ಮಿಸಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ, ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ಅಮಿತ್ ಜವ್ಳೇಕರ್ ಸಂಕಲನವಿರುವ ಈ ಆಲ್ಬಂನ ಪರಿಕಲ್ಪನೆ ಮಯೂರಿ ಉಪಾಧ್ಯ ಅವರದು.

ಸುಪ್ರಸಿದ್ಧ ಜನಪದ ಹಾಡನ್ನು ತಮ್ಮದೇ ವಿಭಿನ್ನ ಶೈಲಿಯಲ್ಲಿ ಹಾಡುತಾ ಚಂದನ್ ಶೆಟ್ಟಿ ಅಭಿನಯಿಸಿದ್ದಾರೆ. ಶಿವು, ನಂದಿನಿ ಹಾಗೂ ಸಾಕಷ್ಟು ಸಹ ಕಲಾವಿದರು ಈ 'ಕೋಲುಮಂಡೆ' ವಿಡಿಯೋ ಆಲ್ಬಂನಲ್ಲಿ ನಟಿಸಿದ್ದಾರೆ. ಕೊರೋನ ಹಾವಳಿಯ ಈ ಸಮಯದಲ್ಲಿ ಸಾಕಷ್ಟು ಜನರಿಗೆ ಕೆಲಸ ವಿಲ್ಲದಂತಾಗಿದೆ.

Kannada film

ಈ ಸಮಯದಲ್ಲಿ ಏನಾದರೂ ಮಾಡೋಣ ಎಂದು ಯೋಚಿಸುತ್ತಿದ್ದಾಗ ಈ ವಿಡಿಯೋ ಆಲ್ಬಂ ನಿರ್ಮಾಣ ಮಾಡೋಣ ಅನಿಸಿತು. ಅಂದುಕೊಂಡ ಹಾಗೆ ಈ ಆಲ್ಬಂ ನಿರ್ಮಿಸಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ಮಾಧ್ಯಮದವರ ಹಾಗೂ ನೋಡಗರ ಸಹಕಾರವಿರಲಿ ಎನ್ನುತ್ತಾರೆ ಆನಂದ್ ಆಡಿಯೋ ಶ್ಯಾಮ್ ಹಾಗೂ ಆನಂದ್.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.