Skip to main content
ಡಿಸೆಂಬರ್ ಹತ್ತರಂದು ಬರಲಿದ್ದಾರೆ .."ಎರಡುಸಾವಿರದ ಇಪ್ಪತ್ತು  ಗೋಪಿಕೆಯರು "

ಡಿಸೆಂಬರ್ ಹತ್ತರಂದು ಬರಲಿದ್ದಾರೆ .."ಎರಡುಸಾವಿರದ ಇಪ್ಪತ್ತು ಗೋಪಿಕೆಯರು "

ಡಿಸೆಂಬರ್ ಹತ್ತರಂದು ಬರಲಿದ್ದಾರೆ .."ಎರಡುಸಾವಿರದ ಇಪ್ಪತ್ತು ಗೋಪಿಕೆಯರು "

ಡಿಸೆಂಬರ್ ಹತ್ತರಂದು ಬರಲಿದ್ದಾರೆ .."ಎರಡುಸಾವಿರದ ಇಪ್ಪತ್ತು  ಗೋಪಿಕೆಯರು "

ಎರಡು ಹಾಡು ನೋಡಿ ಶುಭಕೋರಿದ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ . ವಿಭಿನ್ನ ಕಥಾಹಂದರ ಹೊಂದಿರುವ .."ಎರಡುಸಾವಿರದ ಇಪ್ಪತ್ತು ಗೋಪಿಕೆಯರು " ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಡಿಸೆಂಬರ್ ‌ಹತ್ತರಂದು ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಮುಖ್ಯ ಅತಿಥಿಯಾಗಿ ಆಗಮಿಸಿ, ಹಾಡುಗಳನ್ನು ವೀಕ್ಷಿಸಿ ಶುಭ ಕೋರಿದರು. ಈ ಚಿತ್ರ ನನ್ನ ಗುರುಗಳಾದ ಕುಚ್ಚಣ್ಣ ಶ್ರೀನಿವಾಸ್ ಅವರ ಸಾರಥ್ಯದಲ್ಲಿ ನಿರ್ಮಾಣವಾಗಿದೆ. ಪೊಲೀಸ್ ವೃತ್ತಿಯಲ್ಲಿರುವವರಿಗೂ ಸಾಕಷ್ಟು ಆಸೆಗಳಿರುತ್ತದೆ. ಆದರೆ ಕಾರ್ಯದೊತ್ತಡದಿಂದ ಆಗಿರುವುದಿಲ್ಲ. ನಮ್ಮ ಗುರುಗಳಿಗೂ ಮೊದಲಿನಿಂದಲೂ ‌ಸಿನಿಮಾ‌ ಬಗ್ಗೆ ಆಸಕ್ತಿ ‌. ಆದರೆ ಕಾಲ ಈಗ ‌ಕೂಡಿ ಬಂದಿದೆ.‌‌.‌ ಅವರ ಸಾರಥ್ಯದ ಸಿನಿಮಾ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ. ನಾನು ಸಿನಿಮಾ ನೋಡುತ್ತೇನೆ‌.‌ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು ಪ್ರವೀಣ್ ಸೂದ್. ಈಗಿನ ಕಾಲದ ಮಾಡರ್ನ್ ಹೆಣ್ಣು ಮಕ್ಕಳ ಕುರಿತಾದ ಕಥೆಯಿದು. ಹೆಣ್ಣಿನ ಮನಸ್ಸಿನ ತುಲುಮೆಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ.

ಡಿಸೆಂಬರ್ ಹತ್ತರಂದು ಬರಲಿದ್ದಾರೆ .."ಎರಡುಸಾವಿರದ ಇಪ್ಪತ್ತು  ಗೋಪಿಕೆಯರು "

ಕುಚ್ಚಣ್ಣ ಶ್ರೀನಿವಾಸ್ ಅವರು, ನಾನು ಸೇರಿ ಕಥೆ, ಚಿತ್ರಜಥೆ, ಸಂಭಾಷಣೆ ಬರೆದಿದ್ದೇವೆ. ನಿರ್ದೇಶನ ನಾನೇ ಮಾಡಿದ್ದೇನೆ. ‌ನಾನು ಈ‌ ಹಿಂದೆ ಮಧುಮಾಸ ಎಂಬ ಸಿನಿಮಾ ನಿರ್ದೇಶನ ಮಾಡಿದ್ದೆ. ಅದು ರಮೇಶ್ ಅರವಿಂದ್ ಅವರು ನಾಯಕರಾಗಿ ನಟಿಸಿದ್ದ ಮೊದಲ ಸಿನಿಮಾ. ಈಗ ನನ್ನ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ‌‌ ನಾರಾಯಣಸ್ವಾಮಿ. ನನಗೆ ಚಿಕ್ಕಂದಿನಿಂದಲೂ ಸಿನಿಮಾ ಬಗ್ಗೆ ‌ಆಸಕ್ತಿ.‌ ಕೋಲಾರ ನನ್ನ ಊರು. ಮನೆಯಲ್ಲಿ ತೆಲುಗು ಮಾತನಾಡಿದ್ದರು, ಕನ್ನಡ ನನ್ನ‌ ಜೀವ.‌ ಪೊಲೀಸ್ ವೃತ್ತಿಯಲ್ಲಿದ್ದಾಗ ಹೆಚ್ಚು ತೊಡಗಿಸಿಕೊಳ್ಳಲು ಆಗಿರಲಿಲ್ಲ.‌ ಈಗ ಸ್ನೇಹಿತರ ಸಹಕಾರದಿಂದ ಈ ಸಿನಿಮಾ ನಿರ್ಮಾಣವಾಗಿದೆ. ‌ಕಥೆಯ ಬಗ್ಗೆ ನಿರ್ದೇಶಕರು ಹೇಳಿದ್ದಾರೆ. ‌ಹೋದವರ್ಷವೇ ಸಿನಿಮಾ‌ ತೆರೆಗೆ ಬರಬೇಕಿತ್ತು, ಕೊರೋನ ಕಾರಣದಿಂದ ಬಿಡುಗಡೆ ಆಗಲಿಲ್ಲ. ಇದೇ ಡಿಸೆಂಬರ್ 10 ರಂದು ಚಿತ್ರ ತೆರೆಗೆ ಬರಲಿದೆ. ‌

ಪ್ರವೀಣ್ ಸೂದ್ ಅವರು ಬಂದು ಚಿತ್ರತಂಡಕ್ಕೆ ಹಾರೈಸಿದ್ದು ಸಂತೋಷವಾಯಿತು ಎಂದ ಕುಚ್ಚಣ್ಣ ಶ್ರೀನಿವಾಸ್ ಅವರು ಚಿತ್ರ ನಿರ್ಮಾಣಕ್ಕೆ ತಮಗೆ ಸಹಕಾರ ನೀಡಿದವರಿಗೆ ಧನ್ಯವಾದ ತಿಳಿಸಿದರು. ಚಿತ್ರದಲ್ಲಿ ಮೂರು ಹಾಡುಗಳಿವೆ.. ಎಲ್ಲವೂ ಚೆನ್ನಾಗಿದೆ ಎಂದು ಸಂಗೀತದ ಬಗ್ಗೆ ಸಂಗೀತ ನಿರ್ದಶಕ ಶ್ರೀಧರ್ ವಿ ಸಂಭ್ರಮ್ ಮಾತನಾಡಿದರು. ಛಾಯಾಗ್ರಹಣದ ಬಗ್ಗೆ ಕೆ.ಎಸ್ ಚಂದ್ರಶೇಖರ್ ಮಾಹಿತಿ ನೀಡಿದರು. ‌ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವ ಬಾಲಾಜಿ ಶರ್ಮ, ಪ್ರಿಯಾಂಕ ಚಿಂಚೋಳಿ ಹಾಗೂ ಕಾರ್ಯಕಾರಿ ನಿರ್ಮಾಪಕ ರಾಜಶೇಖರ್ ತಮ್ಮ ಪಾತ್ರ ಹಾಗೂ ಸಿನಿಮಾ ಬಗ್ಗೆ ಅನುಭವ ಹಂಚಿಕೊಂಡರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.