Skip to main content
ವಿಶ್ವಮಟ್ಟಕ್ಕೆ ಕನ್ನಡ ಚಿತ್ರಗಳನ್ನು ಕೊಂಡ್ಯುಯುವ ಪರ್ಪಲ್ ಆರೋ.!

ವಿಶ್ವಮಟ್ಟಕ್ಕೆ ಕನ್ನಡ ಚಿತ್ರಗಳನ್ನು ಕೊಂಡ್ಯುಯುವ ಪರ್ಪಲ್ ಆರೋ.!

ವಿಶ್ವಮಟ್ಟಕ್ಕೆ ಕನ್ನಡ ಚಿತ್ರಗಳನ್ನು ಕೊಂಡ್ಯುಯುವ ಪರ್ಪಲ್ ಆರೋ.!

ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಚಿತ್ರ.

ಕರ್ನಾಟಕದ ಕನ್ನಡ ಭಾಷೆ, ಸಾಹಿತ್ಯ, ಸಂಗೀತ, ನೃತ್ಯ, ಕಲೆಗಳು ನಮ್ಮ ಸಾಂಸ್ಕೃತಿಕ  ನಿದರ್ಶನಗಳಾದರೆ ನಾಟಕ ಹಾಗೂ ಸಿನಿಮಾಗಳು ಕನ್ನಡದ ಅಭಿಮಾನಿಗಳ ಮೇಲೆ ಅತೀ ಹೆಚ್ಚು ಪ್ರಭಾವ ಬಿರುವಂತವಾಗಿವೆ. ಇತ್ತಿಚಿನ ದಿನ ಮಾನಗಳಲ್ಲಿ ಸಿನಿಮಾರಂಗದ ವಿಷಯಕ್ಕೆ ಬಂದರೆ ಕನ್ನಡದಲ್ಲಿ “ಡಬ್ಬಿಂಗ್” ವಿಚಾರ ಮತ್ತು ಪರಭಾಷಿಗರ ಸಿನಿಮಾಗಳಿಗೆ ದೊರೆಯುವಂತಹ ಮಾನ್ಯತೆಯ ಬಗ್ಗೆ ಋಣಾತ್ಮಕ ದ್ವನಿಗಳು ಕೇಳಿಸುತ್ತವೆ. ಆದರೆ ನಮ್ಮದೆ ರಾಜ್ಯದ ಕನ್ನಡ ಚಿತ್ರ, ಕನ್ನಡ ಭಾಷೆಯ ಜನರಿಗೆ, ಪರ ರಾಜ್ಯ ಮತ್ತು ವಿದೇಶಗಳಲ್ಲಿ ಕನ್ನಡದ ಸಿನಿಮಾ ಮತ್ತು ಸಾಂಸ್ಕೃತಿಕ ಕಲೆಗೆ ಮೆಚ್ಚಿ ಪುರಸ್ಕಾರಗಳು ಮತ್ತು ಮಾನ್ಯತೆಗಳು ದೊರೆತರೆ ಹೇಗಿರುತ್ತದೆ.? ಹೌದು ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಇತಿಹಾಸವಿದೆ.ಇಲ್ಲಿ ಕನ್ನಡ ಭಾಷೆ ಮತ್ತು ಸಿನಿಮಾಗಳನ್ನು ಬೇರೆ ಬೇರೆ ರಾಷ್ಟ್ರಗಳಿಗೆ ಪರಿಚಯಿಸಿದಂತಹ ಮಹಾನ್ ನಾಯಕರು ಇದ್ದಾರೆ. ಇನ್ನೂ ಒಂದು ಉತ್ತಮ ಕನ್ನಡ ಸಿನಿಮಾಕ್ಕೆ ಆಸ್ಕರ್ ಮತ್ತು ರಾಷ್ಟ್ರಪ್ರಶಸ್ತಿಗಳಂತಹ ಬಿರುದುಗಳು ಬಂದರೆ.! ಅದು ಕನ್ನಡದ ಪ್ರತಿಯೊಬ್ಬ ಅಭಿಮಾನಿಗೂ ದೊರೆಯುವ ಪುರಸ್ಕಾರ ವಾದಂದತೆ.

ಇಂತಹ ಕಾರ್ಯವನ್ನು ಕೈಗೊಂಡಿರುವ “ಪರ್ಪಲ್ ಆರೋ”ಸಂಸ್ಥೆ ಬಗ್ಗೆ ಮಾಹಿತಿ.

ಅಂತರಾಷ್ಟ್ರೀಯ ಮಟ್ಟದಲ್ಲಿ  ಆಯ್ಕೆ ಯಾದಚಿತ್ರ

ವಿದೇಶಗಳಲ್ಲಿ ಅದೆಷ್ಟೋ ಕನ್ನಡ ಸಿನಿಮಾಗಳು ತಕ್ಕಮಟ್ಟಿಗೆ ಅಲ್ಲಿಯ ಚಿತ್ರಮಂದಿರಗಳಲ್ಲಿ ಪ್ರದರ್ಶನಮಾಡಿ ಅಲ್ಲಿರುವ ಕನ್ನಡ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತವೆ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಅಲ್ಲಿ ನಡೆಯುವಂತಹ ಚಿತ್ರ ಸಮ್ಮೇಳನಗಳಲ್ಲಿ ಭಾಗವಹಿಸಿ ಆರ್ವಾಡ್ ಗಳು ಪಡೆದಿರುವಂತಹ ಉದಾಹರಣೆಗಳು ಅತಿವಿರಳ. ಹೀಗಿರುವಾಗ “ಪರ್ಪಲ್ ಆರೋ ಅನ್ನೋ ಸಂಸ್ಥೆ”ಇಂತಹ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವಂತಹ ಕೂರಿಯ,ಕಾನ್ಸ್,ಯುಎಸ್ ಎ,ಗಳಂತಹ ಚಲನಚಿತ್ರೋತ್ಸವ ಸಮ್ಮೆಳನಗಳಲ್ಲಿ ಕನ್ನಡದ ಯಾವುದೇ ಒಂದು ಚಿತ್ರವು ಕೂಡ ಭಾಗವಹಿಸಿದೆ ಇರುವುದನ್ನ ಕಂಡ, ಬೆಂಗಳೂರಿನ “ಶ್ರೀನಿವಾಸ್” ಮತ್ತು ಅವರ ಸ್ನೇಹಿತರು ಕನ್ನಡ ಚಿತ್ರಗಳನ್ನು ವಿಶ್ವ ಮಟ್ಟದಲ್ಲಿ ಬಾಗವಹಿಸುವಂತೆ ಮಾಡಬೇಕೆಂಬ ಮಹಾದಸೆಯಿಂದ ಪ್ರಾರಂಭಿಸಿದ ಸಂಸ್ಥೆಯೇ ಈ ಪರ್ಪಲ್ ಆರೋ ಸಂಸ್ಥೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಅರ್ವಾಡ್ ಗಳನ್ನು ಪಡೆದುಕೊಂಡ ಚಿತ್ರ

ಸುಮಾರು ಮೂರು ವರ್ಷಗಳಿಂದೆ ಪ್ರಾರಂಭಿಸಿದ ಸಂಸ್ಥೆ ಒಂದು ವರ್ಷಗಳ ಕಾಲ ಪ್ರಪಂಚದಲ್ಲಿ ನಡೆಯುವಂತಹ ಎಲ್ಲಾ ಫಿಲ್ಮ್ ಫೆಸ್ಟಿವಲ್  ಬಗ್ಗೆ ಸಂಶೋಧನೆ ಮಾಡಿ ನಾಲ್ಕು ಸಾವಿರ ಸಮ್ಮೆಳನಗಳಲ್ಲಿ ಬಾಗವಹಿಸಿ ಕನ್ನಡ ಚಿತ್ರರಂಗಕ್ಕೆ ಸೂಕ್ತವಾದಂತಹ 400 ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮ್ಮೆಳನಗಳನ್ನು ಅಂತಿಮಗೊಳಿಸಿ. ಅಲ್ಲಿ ನಡೆಸುವಂತಹ ಅಯೋಜಕರೊಂದಿಗೆ ಮಾತನಾಡಿ ಪ್ರಶಸ್ತಿಗೆ ಆಯ್ಕೆಯಾಗುವಂತಹ ಸೂಕ್ತ ಕನ್ನಡ ಚಿತ್ರಗಳನ್ನು ಕಳುಹಿಸಿ ಕೊಡುವಂತಹ ಕಾರ್ಯಮಾಡುತ್ತಿದ್ದಾರೆ. ಇನ್ನೂ ಇಂತಹ ಆರ್ವಾಡ್ ಗಳಿಗೆ ಸಿನಿಮಾಗಳನ್ನು ಅಂತಿಮಗೊಳಿಸಲು ನುರಿತ ಆಯ್ಕೆಸಮಿತಿ ಯೊಂದನ್ನು ಮಾಡಿದ್ದು  ಆಯ್ಕೆ ಸಮಿತಿಯು ಯಾವ ಸಮ್ಮೇಳನಗಳಲ್ಲಿ ಯಾವ ಚಿತ್ರ ಬಾಗವಹಿಸಬೇಕೆಂದು ನಿರ್ಣಯಗೊಳಿಸಿ ಸೂಕ್ತ ಚಿತ್ರೋತ್ಸವಗಳಿಗೆ ಚಲನಚಿತ್ರಗಳನ್ನು ಕಳುಹಿಸಿಕೊಡುವುದಾಗಿದೆ. ಪ್ರಪಂಚದ ಎಲ್ಲ ಬಾಗಗಳಲ್ಲಿ ನಡೆಯು ಸಮ್ಮೆಳನಗಳಲ್ಲಿ ಕನ್ನಡ ಚಿತ್ರಗಳು ಬಾಗಿಯಬೇಕು ಎನ್ನುವ ಗುರಿಯನ್ನ ಹೊಂದಿದ್ದಾರೆ.

ಅರ್ವಾಡ್ ಗಳನ್ನು ಪಡೆದುಕೊಂಡ ಚಿತ್ರ.

ಕನ್ನಡದ ಚಿತ್ರಗಳಾದ “ಎಡಕಲ್ಲು ಗುಡ್ಡದ ಮೇಲೆ” “ವೈಷ್ಣವಿ” “ಉರ್ವೀ” “ರಾಮಾ ರಾಮಾ ರೇ” “ಅಮರಾವತಿ” ಚಿತ್ರಗಳಿಗನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಅರ್ವಾಡ್ ಗಳನ್ನು ಪಡೆದುಕೊಂಡು ಯಶಸ್ವಿ ಯಾಗಿದ್ದಾರೆ.ಇಂತಹ ಅರ್ವಾಡ್ ಗಳು ಕನ್ನಡ ಚಿತ್ರಗಳಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಲಭಿಸಿ ವಿಶ್ವಮಟ್ಟದಲ್ಲಿ ಕನ್ನಡದ ಕಹಳೆ ಮೊಳಗಿಸಲಿ ಎಂದು ಆಶಿಸೋಣ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.