ಲಾಕ್ ಡೌನ್ ನಂತರ 'ಮುಂದುವರೆದ ಅಧ್ಯಾಯ'
ಲಾಕ್ ಡೌನ್ ನಂತರ 'ಮುಂದುವರೆದ ಅಧ್ಯಾಯ'

ಕಣಜ ಎಂಟರ್ ಪ್ರೈಸಸ್ ಲಾಂಛನ ದಡಿಯಲ್ಲಿ ನಿರ್ಮಾಣವಾಗಿರುವ, ಬಾಲು ಚಂದ್ರಶೇಖರ್ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ 'ಮುಂದುವರೆದ ಅಧ್ಯಾಯ' ಚಿತ್ರ ಲಾಕ್ ಡೌನ್ ಮುಗಿದ್ದು ಚಿತ್ರ ಬಿಡುಗಡೆಗೆ ಅನುಮತಿ ಸಿಕ್ಕ ಕೂಡಲೆ ತೆರೆಗೆ ಬರಲಿದೆ. ಲಾಕ್ ಡೌನ್ ಪೂರ್ವದಲ್ಲೇ ಸೆನ್ಸಾರ್ ಗೆ ಅಪ್ಲೈ ಮಾಡಿದ್ದು, ಸೆನ್ಸಾರ್ ಮಂಡಳಿ ಕಾರ್ಯ ನಿರ್ವಹಿಸಲು ಆರಂಭಿಸಿದ ಕೂಡಲೆ ನಮ್ಮ ಚಿತ್ರವನ್ನು ವೀಕ್ಷಿಸುವ ಭರವಸೆಯಿದೆ ಎನ್ನುತ್ತಾರೆ ನಿರ್ದೇಶಕರು