Skip to main content

ಅದಿತಿ ಪ್ರಭುದೇವ ಮಹಿಳಾ ಸೂಪರ್ ಹೀರೋ ಚಿತ್ರಕ್ಕೆ ಆನ ಶೀರ್ಷಿಕೆ.

ಅದಿತಿ ಪ್ರಭುದೇವ ಮಹಿಳಾ ಸೂಪರ್ ಹೀರೋ ಚಿತ್ರಕ್ಕೆ ಆನ ಶೀರ್ಷಿಕೆ.

Kannada new film

ಯೂಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪೂಜಾ ವಸಂತ್‌ಕುಮಾರ್ ನಿರ್ಮಾಣ ಮಾಡಿರುವ, ಮನೋಜ್ ಪಿ ನಡಲುಮನೆ ನಿರ್ದೇಶನದ ‘ಆನ’ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಶನಿವಾರ ನೆರವೇರಿತು. ಈ ಮೊದಲೇ ಹೇಳಿದಂತೆ ಇದೊಂದು ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಪರಿಕಲ್ಪನೆಯ ಸಿನಿಮಾ. ಚಿತ್ರದ ಶೀರ್ಷಿಕೆಯೂ ಅಷ್ಟೇ ವಿಶೇಷವಾಗಿರಲಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದರು.

ರತ್ನನ್ ಪ್ರಪಂಚದಲ್ಲಿ ಉತ್ತರ ಕರ್ನಾಟಕದ ಗಟ್ಟಿಗಿತ್ತಿ ಗೌಡತಿಯಾದ ನಟಿ ತಾರಾ

ರತ್ನನ್ ಪ್ರಪಂಚದಲ್ಲಿ ಉತ್ತರ ಕರ್ನಾಟಕದ ಗಟ್ಟಿಗಿತ್ತಿ ಗೌಡತಿಯಾದ ನಟಿ ತಾರಾ.

Kannada new film

ನಟಿ ತಾರಾ ಕನ್ನಡ ಚಿತ್ರರಂಗದ ಹಿರಿಯ ನಟಿ. ನೂರಾರು ಅಧಿಕ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದು. ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಪಾತ್ರವನ್ನು ಪೋಷಿಸುತ್ತ ಬಂದಿದ್ದಾರವರು. ಆದರೆ, ಆ ಒಂದು ಪಾತ್ರವನ್ನು ಬಿಟ್ಟು! ಅದುವೇ ಗಟ್ಟಿಗಿತ್ತಿ ಗೌಡತಿ ಪಾತ್ರ. ಹೌದು, ಅಂಥ ಒಂದು ವಿಶೇಷ ಪಾತ್ರವನ್ನು ಡಾಲಿ ಧನಂಜಯ್ ನಟಿಸುತ್ತಿರುವ ‘ರತ್ನನ್​ ಪ್ರಪಂಚ’ ಚಿತ್ರ ಅವರಿಗೆ ಕರುಣಿಸಿದೆ.

ಸೆನ್ಸಾರ್ ಮುಂದೆ 'ಬ್ಲಾಂಕ್'

ಸೆನ್ಸಾರ್ ಮುಂದೆ 'ಬ್ಲಾಂಕ್'.

Kannada new film

ಫೆಲಿಸಿಟಿ ಫಿಲಂಸ್ ಲಾಂಛನದಲ್ಲಿ ಎನ್ ಪಿ ಮಂಜುನಾಥ್ ಪ್ರಸನ್ನ ಅವರು ನಿರ್ಮಿಸಿರುವ 'ಬ್ಲಾಂಕ್' ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಪ್ರಥಮಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸಲಿದೆ. ಮೈಸೂರು, ಚಿಕ್ಕಮಗಳೂರು, ಬೆಂಗಳೂರು, ತುಮಕೂರು, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಎಸ್ ಜಯ್ ಈ ಚಿತ್ರದ ನಿರ್ದೇಶಕರು.

Subscribe to FILIMI TALK