ಶೀಘ್ರದಲ್ಲೇ *"ತಾಜ್ ಮಹಲ್ ೨"
ಶೀಘ್ರದಲ್ಲೇ *"ತಾಜ್ ಮಹಲ್ ೨" ಟ್ರೇಲರ್

.ಶೀಘ್ರದಲ್ಲೇ *"ತಾಜ್ ಮಹಲ್ ೨"* ಟ್ರೇಲರ್. ಶ್ರೀ ಗಂಗಾಂಬಿಕೆ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ದೇವರಾಜ್ ಕುಮಾರ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ "ತಾಜ್ ಮಹಲ್ ೨" ಚಿತ್ರದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ದೇವರಾಜ್ ಕುಮಾರ್ ಈ ಹಿಂದೆ ಡೇಂಜರ್ ಜೋನ್, ನಿಶ್ಯಬ್ದ ೨ ಹಾಗೂ ಅನುಷ್ಕಾ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ವಿಭಿನ್ನ ಕಥಾಹಂದರದ ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಗಗನಚುಕ್ಕಿ, ಬರಚುಕ್ಕಿ ಮುಂತಾದ ಕಡೆ 65 ದಿನಗಳ ಚಿತ್ರೀಕರಣ ನಡೆದಿದೆ.

ದೇವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಸಮೃದ್ಧಿ ಶುಕ್ಲ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಮನವರ್ಷಿ ನವಲಗುಂದ ಹಾಡುಗಳನ್ನು ಬರೆದಿದ್ದು, ವಿಕ್ರಂ ಸೆಲ್ವ ಸಂಗೀತ ನೀಡಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ, ವಿಜಯ್ ಸಂಕಲನ ಹಾಗೂ ಬಿ.ಧನಂಜಯ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
Recent comments