Skip to main content
ರಾಹುಲ್ ದ್ರಾವಿಡ್ ಪುತ್ರ ಸಮಿತ್‌ ದ್ರಾವಿಡ್‌ ದ್ವಿಶತಕ !

ರಾಹುಲ್ ದ್ರಾವಿಡ್ ಪುತ್ರ ಸಮಿತ್‌ ದ್ರಾವಿಡ್‌ ದ್ವಿಶತಕ !

ರಾಹುಲ್ ದ್ರಾವಿಡ್ ಪುತ್ರ ಸಮಿತ್‌ ದ್ರಾವಿಡ್‌ ದ್ವಿಶತಕ !

Dravid son

ಬೆಂಗಳೂರು: ಭಾರತದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್‌ ಅವರ ಪುತ್ರ ಸಮಿತ್‌ ದ್ರಾವಿಡ್ ಅವರು ವಯೋಮಿತಿ ಪಂದ್ಯವೊಂದರಲ್ಲಿ ದ್ವಿಶತಕ ಸಿಡಿಸಿದ್ದಾರೆ. ಆ ಮೂಲಕ ತಂದೆ ನಡೆದು ಬಂದ ಹಾದಿಯಲ್ಲಿ ತಮ್ಮ ಪುತ್ರ ದಿಟ್ಟ ಹೆಜ್ಜೆಇಟ್ಟಿದ್ದಾರೆ ಎನ್ನಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್ 14 ರ ವಯೋಮಿತಿ ವಲಯ ಮಟ್ಟದ ಉಪಾಧ್ಯಕ್ಷರ ಇಲೆವೆನ್ ತಂಡದ ಪರ 14ರ ಪ್ರಾಯದ ಸಮಿತ್ ದ್ರಾವಿಡ್‌ 201 ರನ್‌ ಬಾರಿಸಿದರು.

ನಂತರ ಎರಡನೇ ಇನಿಂಗ್ಸ್ ನಲ್ಲೂ ಇದೇ ಲಯ ಮುಂದುವರಿಸಿದ ಅವರು 24 ರನ್ ಗಳಿಸಿದರು. ಧಾರವಾಡ ವಲಯದ ವಿರುದ್ಧ ದ್ವಿತೀಯ ಇನಿಂಗ್ಸ್ ನಲ್ಲಿ 26 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದ್ದರು. ಪಂದ್ಯ ಅಂತಿಮವಾಗಿ ಡ್ರಾ ಆಗಿತ್ತು. 2018ರಲ್ಲಿ ಸಮಿತ್ ಕೆಎಸ್‌ಸಿಎ 14 ವಯೋಮಿತಿ ಬಿಟಿಆರ್ ಕಪ್‌ ಶಾಲಾ ಟೂರ್ನಿಯಲ್ಲಿ ಮಲ್ಯ ಅದಿತಿ ಇಂಟರ್‌ ನ್ಯಾಷನಲ್‌ ಪರ 150 ರನ್‌ ಸಿಡಿಸಿದ್ದರು. ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್‌ ಸದ್ಯ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥರಾಗಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.