Skip to main content
ಮಾಜಿ ಶಾಸಕರು ರೈತರನ್ನು ದಾರಿ ತಪ್ಪಿಸುವ ಕೆಲಸ ನಿಲ್ಲಿಸಬೇಕು.

ಮಾಜಿ ಶಾಸಕರು ರೈತರನ್ನು ದಾರಿ ತಪ್ಪಿಸುವ ಕೆಲಸ ನಿಲ್ಲಿಸಬೇಕು.

ಮಾಜಿ ಶಾಸಕರು ರೈತರನ್ನು ದಾರಿ ತಪ್ಪಿಸುವ ಕೆಲಸ ನಿಲ್ಲಿಸಬೇಕು.

Raichur

ಕವಿತಾಳ : NRBC5A ನಾಲಾ ಯೋಜನೆ ಜಾರಿಗೆ ಆಗ್ರಹಿಸಿ ಪಾಮನಕಲ್ಲೂರಿನ ಬಸವೇಶ್ವರ ದೇವಸ್ಥಾನದ ಹತ್ತಿರ ನಡೆಯುತ್ತಿರುವ ಅನಿರ್ದಿಷ್ಟವಾಧಿ ಹೋರಾಟ ಇಂದು 62 ನೆ ದಿನಕ್ಕೆ ಕಾಲಿಟ್ಟದೆ ಹೋರಾಟ ವನ್ನು ಉದ್ದೇಶಿಸಿ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಈ ಹೋರಾಟದ ಶಕ್ತಿಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಮಸ್ಕಿಯ ಅನರ್ಹ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಈ ಭಾಗದ BJP ನಾಯಕರು ಸೇರಿ ಅನೇಕರು ಈ ಹೋರಾಟವನ್ನು ದಾರಿ ತಪ್ಪಿಸಲು ಹಾಗೂ ಹತ್ತಿಕ್ಕಲು ಆರಂಭದಿಂದಲೂ ಸತತ ಪ್ರಯತ್ನ ಮಾಡುತ್ತಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ ನಿನ್ನೆ ಈ ಭಾಗದ ಆರಾಧ್ಯದೈವ ವಟಗಲ್ ಬಸವೇಶ್ವರರ ಹೆಸರಿನ ಮೇಲೆ ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ಹರಿ ನೀರಾವರಿ ಕಾಲುವೆ ಜಾರಿ ಮಾಡುವ ಭರವಸೆ ನೀಡಿದ್ದಾರೆ ಅದು ಹೋರಾಟದಿಂದ ದೂರ ಉಳಿದ ತಮ್ಮ ಕಾರ್ಯಕರ್ತರು ಹಾಗೂ ರೈತರಲ್ಲದವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಒಂದು ಖಾಸಗಿ ಕಲ್ಯಾಣ ಮಂಟಪದಲ್ಲಿ ಸಭೆ ಮಾಡಿ ನಂತರ ಜಲ ಸಂಪನ್ಮೂಲ ಸಚಿವ ಜಾರಕಿಹೊಳಿಯ ಮುಖಾಂತರ ಈ ಕೆಲಸ ಮಾಡಿ ಶಹಬ್ಬಾಸ್ ಗಿರಿ ಹೇಳಿಸಿಕೊಳ್ಳಲು ಹೊರಟ್ಟಿದ್ದಾರೆ ಆದರೆ ಅಲ್ಲಿ ಭಾಗವಹಿಸಿದವರಿಗೂ ಲಿಖಿತವಾದ ಯಾವ ಭರವಸೆ, ಆದೇಶವು ನೀಡಿಲ್ಲ ಇದದು ಮಾಜಿ ಶಾಸಕರು ತಮ್ಮ ಮುಂದಿನ ಉಪ ಚುನಾವಣೆ ಮತ್ತು ಮಂತ್ರಿ ಪದವಿಗಾಗಿ ಮಾಡುತ್ತಿರುವ ನಾಟಕ, ಕಸರತ್ತು ಅಷ್ಟೇ ಕೂಡಲೇ ಮಾಜಿ ಶಾಸಕರು ರೈತರನ್ನು ಮತ್ತು ಈ ಭಾಗದ ಜನತೆಯನ್ನು ದಾರಿ ತಪ್ಪಿಸುವ ಕೆಲಸವನ್ನು ಕೈ ಬಿಡಬೇಕು ಎಂದು ಕಿಡಿ ಕಾರಿದರು. ಕಳಕಳಿ ಇದ್ದರೆ ಈಗಾಗಲೇ ವಿಫಲವಾದ ನಂದವಾಡಗಿ ನೀರಾವರಿ ಯೋಜನೆ ಹಾಗೂ ಹರಿ, ಹನಿ ನೀರಾವರಿ ಯೋಜನೆಯ ವಿಚಾರವನ್ನು ಕೈ ಬಿಟ್ಟು ಶೀಘ್ರವೇ nrbc5a ಹರಿ ನೀರಾವರಿ ಯೋಜನೆಯ ಜಾರಿಗೆ ಮುಂದಾಗಬೇಕು ಅಲ್ಲಿಯವರೆಗೂ ಹೋರಾಟ ಮುಂದುವರಿಯುತ್ತದೆ ರೈತರು ಮತ್ತು ಜನತೆ ಮಾಜಿ ಶಾಸಕರ ಮತ್ತು ಅವರ ಹಿಂಬಾಲಕ ಮಾತಿಗೆ ಕಿವಿಗೊಡದೆ ಹೋರಾಟ ವನ್ನು ತೀವ್ರಗೊಳಿಸುತ್ತ ಗಮನ ಹರಿಸಬೇಕೆಂದು ಹೇಳಿದರು.

ಈ ಸಂಧರ್ಭದಲ್ಲಿ ಹೋರಾಟ ಸಮಿತಿ ಗೌರವಾಧ್ಯಕ್ಷರಾದ ತಿಮ್ಮನಗೌಡ ಚಿಲಕರಾಗಿ, ಅಧ್ಯಕ್ಷರಾದ ಬಸವರಾಜಪ್ಪಗೌಡ ಹಾರ್ವಪುರ, ಶಿವನಗೌಡ ವಟಗಲ್, ಮಂಜೂರುಪಾಷ ಅಮೀನಗಡ, ಅತ್ಯಣ್ಣ, ಸದ್ದಾಂ, ಖಾಜಾ ಸೇರಿ ಅನೇಕರಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.