Skip to main content
ಅಮೃತ್ ಅಪಾರ್ಟ್ಮಮೆಂಟ್ಸ್”

" ಅಮೃತ್ ಅಪಾರ್ಟ್ಮಮೆಂಟ್ಸ್”

ಜಿ-9 ಕಮ್ಯುನಿಕೆಷನ್ ಮೀಡಿಯಾ ಆಂಡ್ ಎಂಟರಟೆನಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಅಮೃತ್ ಅಪಾರ್ಟ್ಮಮೆಂಟ್ಸ್” ಪೋಸ್ಟ್ ಪ್ರೊಡಕ್ಷನ್ ಕೆಲಸಗಳನೆಲ್ಲಾ ಮುಗಿಸಿಕೊಂಡು, ಸೆನ್ಸಾರ್ ಮನೆಗೆ ತಲುಪಿದೆ.Kannada new film

ಸಿನೆಮಾ ತಂಡ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಗುರುರಾಜ ಕುಲಕರ್ಣಿ (ನಾಡಗೌಡ) ರಚಿಸಿ ನಿರ್ಮಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ತಾರಕ ಪೊನ್ನಪ್ಪ, ಊರ್ವಶಿ ಗೋವರ್ಧನ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ವಿಶಿಷ್ಟ ನಟನೆಗೆ ಹೆಸರಾಗಿರುವ ರಾಜ್ಯ ಪ್ರಶಸ್ತಿ ವಿಜೇತ, ಬಾಲಾಜಿ ಮನೋಹರ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಮುಖ ಪ್ರತಿಭೆಯ ಸಂಪತ ಕುಮಾರ ತಮ್ಮ ಎಂದಿನ ನೈಜ ನಟನೆಯಿಂದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಾನಸಾ ಜೋಷಿ ಪೋಲಿಸ್ ಎ.ಸಿ.ಪಿ, ಪಾತ್ರದಲ್ಲಿ ತಮ್ಮ ಗತ್ತು-ಗೈರತ್ತು ತೋರಿದ್ದಾರೆ.

Kannada new film

ಸೀತಾ ಕೋಟೆ ಲಾಯರ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಉಳಿದಂತೆ ರಂಗಭೂಮಿ ಕಲಾವಿದರಾದ, ಸಿತಾರಾ, ಮಾಲತೇಶ, ರಾಜ ನೀನಾಸಂ, ಜಗದೀಶ ಜಾಲಾ, ರಂಗಸ್ವಾಮಿ, ಶಂಕರ ಶೆಟ್ಟಿ, ವೈಷ್ಣವಿ ಮೊದಲಾದ ಕಲಾವಿದರು ನಟಿಸಿದ್ದಾರೆ. ಈ ಚಿತ್ರಕ್ಕೆ ಬಿ, ಎಸ್, ಕೆಂಪರಾಜ್ ರವರ ಸಂಕಲನವಿದ್ದು, ಅರ್ಜುನ್ ಅಜಿತ್ ಕ್ಯಾಮರಮನ್ ಆಗಿ ಕೆಲಸ ಮಾಡಿದ್ದಾರೆ.

Kannada new film

ಎಸ್. ಡಿ ಅರವಿಂದ್ ಮೂರು ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸೌಂಡ್ ಡಿಸೈನರ್ ರಾಜನ್ ವಿಶೇಷ ಎಫೆಕ್ಟ್ಸ್ ಗಳನ್ನು ಈ ಚಿತ್ರಕ್ಕಾಗಿಯೇ ಬಳಿಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.