ಈ ವಾರ ತೆರೆ ಕಾಣುತ್ತಿರುವ ಚಿತ್ರಗಳತ್ತ ಒಂದು ನೋಟ .
ಈ ವಾರ ತೆರೆ ಕಾಣುತ್ತಿರುವ ಚಿತ್ರಗಳತ್ತ ಒಂದು ನೋಟ .
ಈ ವಾರ ಕನ್ನಡದಲ್ಲಿ ಒಟ್ಟು 4 ಚಿತ್ರಗಳು ಬಿಡುಗಡೆಯಾಗುತ್ತಿವೆ. ಲವ್ ಸ್ಟೋರಿ, ಹಾರರ್ ಸಿನಿಮಾ, ಆಕ್ಷನ್-ಸಸ್ಪೆನ್ಸ್, ಹಾಗೂ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಹೀಗೆ ವಿಭಿನ್ನ ಬಗೆಯ ಕಥೆ ಹೊಂದಿರುವ ಸಿನಿಮಾಗಳು ಪ್ರೇಕ್ಷಕರೆದುರು ಬರಲು ಸಜ್ಜಾಗಿವೆ. ಶ್ರೀರಾಮಾ ಟಾಕೀಸ್ ಲಾಂಛನದಲ್ಲಿ ರಾಜೇಂದ್ರ ಕಾರಂತ್ ನಿರ್ದೇಶನ ಮಾಡಿರುವ 'ನಂಜುಂಡಿ ಕಲ್ಯಾಣ' ತೆರೆಕಾಣುತ್ತಿದೆ. ತನುಷ್, ಶ್ರಾವ್ಯ, ಕುರಿ ಪ್ರತಾಪ್, ರಾಜೇಂದ್ರ ಕಾರಂತ್, ಪದ್ಮಜಾರಾವ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಎಸ್.ಉಮೇಶ್ ನಿರ್ದೇಶನದ 'ಮದುವೆ ದಿಬ್ಬಣ' ಸಿನಿಮಾ ಕೂಡ ಇದೇ ವಾರ ತೆರೆಗೆ ಬರ್ತಿದೆ. ಅಭಿಷೇಕ್, ಸೋನಾಲ್, ಶಿವರಾಜ್ ಕೆ.ಆರ್.ಪೇಟೆ, ಚಂದ್ರಕಲಾ ಮೋಹನ್, ವೀರಣ್ಣ, ಆಲಿಶಾ, ಕಾವ್ಯ, ಮಾಸ್ಟರ್ ಭೂಷಣ್, ಬೇಬಿ ಅಶ್ವಿನಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶುಭ ಪೂಂಜ ಅಭಿನಯದ 'ಜಯಮಹಲ್' ಚಿತ್ರವು ಇದೇ ವಾರ ಥಿಯೇಟರ್ ಅಂಗಳಕ್ಕೆ ಕಾಲಿಡುತ್ತಿದೆ. ಹೃದಯ ಶಿವ ನಿರ್ದೇಶನದ ಈ ಚಿತ್ರದಲ್ಲಿ ಕೌಸಲ್ಯ, ನೀನಾಸಂ ಅಶ್ವಥ್, ಹೃದಯಶಿವ, ಪ್ರತಿಭಾ ನಂದಕುಮಾರ್, ಕರಿಸುಬ್ಬು, ಜೀವನ್, ಸುರೇಶ್ ಮುಂತಾದವರಿದ್ದಾರೆ.
ಈ ಎಲ್ಲ ಚಿತ್ರಗಳ ಜೊತೆ ಓಂ ಪ್ರಕಾಶ್ ರಾವ್ ನಿರ್ದೇಶನದ ಹುಚ್ಚ 2 ಚಿತ್ರವೂ ಬಿಗ್ ಸ್ಕ್ರೀನ್ ಗೆ ಲಗ್ಗೆಯಿಡುತ್ತಿದೆ. ಮದರಂಗಿ ಕೃಷ್ಣ, ಶ್ರಾವ್ಯ ರಾವ್, ಅವಿನಾಷ್, ಸಾಯಿ ಕುಮಾರ್, ಅವಿನಾಷ್, ಸಾಧು ಕೋಕಿಲ, ಓಂಪ್ರಕಾಶ್ ರಾವ್, ಶ್ರೀನಿವಾಸಮೂರ್ತಿ, ಅಶ್ವಿನ್ ಹಾಗೂ ಇತರರು ತಾರಗಣದಲ್ಲಿದ್ದಾರೆ.
Recent comments