Skip to main content
ನಿಮ್ಮ ಸೇವೆಗೆ ನಾನು ಸಿದ್ದ.!!ಬದಲಾವಣೆಗೆ ನೀವು ಸಿದ್ದರಾಗಿ.ಶಿವಕುಮಾರ್ ಮ್ಯಾಗಳ ಮನಿ.

ನಿಮ್ಮ ಸೇವೆಗೆ ನಾನು ಸಿದ್ದ.!!ಬದಲಾವಣೆಗೆ ನೀವು ಸಿದ್ದರಾಗಿ.ಶಿವಕುಮಾರ್ ಮ್ಯಾಗಳ ಮನಿ.

ನಿಮ್ಮ ಸೇವೆಗೆ ನಾನು ಸಿದ್ದ.!!ಬದಲಾವಣೆಗೆ ನೀವು ಸಿದ್ದರಾಗಿ.ಶಿವಕುಮಾರ್ ಮ್ಯಾಗಳ ಮನಿ.

Raichur

ರಾಯಚೂರು :ಜನತೆಯ ಒತ್ತಾಸೆ, ಅವರ ಬದುಕಿನ ಬದಲಾವಣೆ ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಗಾಗಿ ಪ್ರಜೆಗಳು ಬಯಸಿದರೆ ಬಾಗಲವಾಡ ಜಿಲ್ಲಾ ಪಂಚಾಯತಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದನಿದ್ದೇನೆ ಎಂದು ವಿದ್ಯಾರ್ಥಿ ಯುವ ಜನರ ಖ್ಯಾತ ಹೋರಾಟಗಾರ, ಜನ ನಾಯಕ ಭಾರತ ವಿದ್ಯಾರ್ಥಿ ಫೆಡರೇಷನ್‌ ( ಎಸ್ಎಫ್ಐ ) ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕವಿತಾಳ ಪಟ್ಟಣದ ‌ನಿವಾಸಿಯಾದ ಇವರು ಕೆಳ‌ ವರ್ಗದ ಬಡ ರೈತ ಕುಟುಂಬದಲ್ಲಿ ಹುಟ್ಟಿ ಸ್ನಾತಕೋತ್ತರ ಪದವಿ ಪಡೆದು ವಿದ್ಯಾರ್ಥಿ ದೆಸೆಯಿಂದಲೆ ಹೋರಾಟವನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ, ಯುವಜನ ಮತ್ತು ಜನ ಸಾಮಾನ್ಯರ ಹಕ್ಕುಗಳಿಗಾಗಿ ಹಾಗೂ ಹಿಂದುಳಿದ, ದಮನಿತ, ಶೋಷಿತ, ಅಲ್ಪಸಂಖ್ಯಾತರ, ಮಹಿಳೆಯರ ಪರವಾಗಿ ರಾಜಿ ರಹಿತವಾದ ಪ್ರಾಮಾಣಿಕ ಮತ್ತು ಪಾರದರ್ಶಕ ವಾಗಿ ಮುಂಚೂಣಿಯಲ್ಲಿ ನಿಂತು ಕಳೆದ ಒಂದು ದಶಕದಿಂದಲೂ ಹೋರಾಟವನ್ನು ಮಾಡುತ್ತಾ ಅನೇಕ ಪ್ರಮುಖ ಮತ್ತು ನಿರ್ಣಾಯಕ ಹೋರಾಟಗಳಲ್ಲಿ ಯಶಸ್ಸು ಗಳಿಸಿ ಜನಮನ್ನಣೆ ಗಳಿಸಿ ಮಾದರಿಯಾಗಿದ್ದಾರೆ.

Raichur

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಜನಪರ ಹೋರಾಟ ಮತ್ತು ಜನ ಹಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮ್ಮ ಸಂಘಟಿತ ಹಾಗೂ ತೀಕ್ಷ್ಣ ಬುದ್ದಿಯಿಂದಾಗಿ ದೊಡ್ಡ ದೊಡ್ಡ ಹೋರಾಟಗಾರರಿಂದ, ರಾಜಕೀಯ ಮುಖಂಡರಿಂದ ಶಹಬಾಸ್ ಗಿರಿ ಗಿಟ್ಟಿಸಿಕೊಂಡು ಅವರ ಪ್ರೀತಿ, ವಿಶ್ವಾಸ‌, ಸಂಪರ್ಕ ಮತ್ತು ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಇವರು ಕವಿತಾಳ ಪಟ್ಟಣ, ಸಿರವಾರ ತಾಲ್ಲೂಕು, ರಾಯಚೂರು ಜಿಲ್ಲೆ ಸೇರಿ ರಾಜ್ಯಾದ್ಯಂತ ಚಿರಪರಿಚಿತರಾಗುವುದರ ಜೊತೆಗೆ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ರಾಜ್ಯ ಮತ್ತು ದೇಶದ ಗಮನ ಸೆಳೆಯುವ ನಿಟ್ಟಿನಲ್ಲಿ ಗಟ್ಟಿತನದ ಬದ್ಧತೆಯ ಹೋರಾಟವನ್ನು ಕಟ್ಟಿದ ಇವರು ಕವಿತಾಳ ಪಟ್ಟಣಕ್ಕೆ ವಸತಿ ಸಹಿತ ಪದವಿ ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಿದ್ಯಾರ್ಥಿಗಳಿಗೆ ಉಚಿತ ಬಸ್, ಮಧು ಪತ್ತಾರ್ ಮತ್ತು ಲೊಯಲ್ ಕಾಲೇಜು ವಿದ್ಯಾರ್ಥಿ ಸಾವಿನ ಪ್ರಕರಣ, ಗಮೇಸಾ ಕಾರ್ಮಿಕರ ಹೋರಾಟ, ರೈತಪರ ಚಳವಳಿ, ನೀರಾವರಿ, ಮೂಲಭೂತ ಸೌಕರ್ಯಕ್ಕಾಗಿ ಮಾಡಿದ ಹೋರಾಟಗಳು ಸೇರಿದಂತೆ ಇಂತಹ ಅನೇಕ ಉದಾಹರಣೆಗಳಿವೆ.

ಜಿಲ್ಲೆ ರಾಜ್ಯ ಸೇರಿ ಎಲ್ಲಿಯೇ ಅನ್ಯಾಯ, ಅಕ್ರಮ, ದೌರ್ಜನ್ಯ, ದಬ್ಬಾಳಿಕೆ ಮತ್ತು ಭ್ರಷ್ಟಾಚಾರ ನಡೆದು ಅದು ಇವರ ಗಮನಕ್ಕೆ ಬಂದರೆ ತಮ್ಮ ಸಂಘಟಕರೊಂದಿಗೆ ಸೇರಿ ಯೋಜನೆ ರೂಪಿಸಿಕೊಂಡು ತುರ್ತಾಗಿ ಹೋರಾಟಕ್ಕೆ ಧುಮುಕಿ ಛಲ ಬಿಡದೆ ಹೋರಾಡಿ ಯಶಸ್ಸು ಗಳಿಸಿದ್ದಾರೆ. ಇವರ ಮೃದು ಹಾಗೂ ಸಹೋದರ ಸ್ವಭಾವದಿಂದಾಗಿ ಎಲ್ಲಾ ಜಾತಿಯ ಮತ್ತು ಧರ್ಮದ ಜನರೊಂದಿಗೆ ಮುಕ್ತವಾಗಿ ಬೆರೆತು ಸ್ನೇಹ ಪ್ರೀತಿ ಹಂಚಿಕೊಳ್ಳುವ ಉದಾತ್ತ ವ್ಯಕ್ತಿತ್ವದವರಾಗಿದ್ದಾರೆ. ತನ್ನ ಬಳಿ ಸಹಾಯ, ಸಹಕಾರ, ನ್ಯಾಯ ಅಂತಾ ತಮ್ಮ ಬಳಿ ಬಂದವರಿಗೆ ಮುಂದೆ ನಿಂತು ಆಗತ್ಯ ನೆರವನ್ನು ನೀಡುವವರಾಗಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಹಣ, ಅಧಿಕಾರ, ಅಂತಸ್ತು ಮತ್ತು ಕೌಟುಂಬಿಕ ಹಿನ್ನೆಲೆಯ ಆಧಾರವಾಗಿ ಸಾಗುತ್ತಿರುವ ಬದ್ದತೆಯಿಲ್ಲದ ರಾಜಕಾರಣದ ಹಿನ್ನೆಲೆಯಿಂದ ನೋಡಿದಾಗ ಈ ತರದ ಯಾವುದೇ ರಾಜಕೀಯ ಹಿನ್ನೆಲೆ, ಪ್ರಭಾವ, ಹಣ, ಕೌಟುಂಬಿಕ ಹಿನ್ನೆಲೆ ಹೊಂದಿರದ ಶಿವಕುಮಾರ ಮ್ಯಾಗಳಮನಿ ತಾನು ನಂಬಿರುವ ಸಂಘಟನೆ, ಸಿದ್ದಾಂತಕ್ಕೆ ಬದ್ದವಾಗಿ ಸಾರ್ವಜನಿಕರ ಏಳಿಗೆಗಾಗಿ ತನ್ನ ಕುಟುಂಬ ಮತ್ತು ವೈಯಕ್ತಿಕ ಬದುಕನ್ನೆ ಬದಿಗೊತ್ತಿ ಹೋರಾಟ ಸಂದರ್ಭದಲ್ಲಿ ಎದುರಾದ ಅನೇಕ ಕಷ್ಟ, ನಷ್ಟ ಆಸೆ ಆಮಿಷೆ, ಒತ್ತಡ, ಬೆದರಿಕೆ, ಕೇಸು ಕಟ್ಠಲೆ ಎಲ್ಲವನ್ನೂ ಎದುರಿಸಿ ತ್ಯಾಗಮಯಿ ಜೀವನವನ್ನು ಸಾಗಿಸುತ್ತಿದ್ದಾರೆ. ಇದೆಲ್ಲವನ್ನೂ ಹತ್ತಿರದಿಂದ ಗಮನಿಸಿದ ಬಾಗಲವಾಡ ಕ್ಷೇತ್ರದ ಮತದಾರರು, ಸ್ನೇಹಿತರು, ಅಧಿಕಾರಿಗಳು, ಬಂಧುಗಳು ಹಾಗೂ ಅಭಿಮಾನಿಗಳು ಬಾಗಲವಾಡ ಮೀಸಲು ಜಿಲ್ಲಾ ‌ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಲು ತಿಳಿದು ಬರುತ್ತಿದೆ. ಅಲ್ಪಸ್ವಲ್ಪ ತಿಳಿದುಕೊಂಡು ಸಿದ್ದಾಂತ ಮತ್ತು ಬದ್ದತೆಯಿಲ್ಲದ ಅರೆ ಬರೆ ಸಂಘ ಸಂಸ್ಥೆ, ಬ್ಯಾಂಕ್, ಆಸ್ತಿ ಕಟ್ಟಿಕೊಂಡು ಸ್ವಯಂ ಘೋಷಿತ ನಾಯಕರೆಂದು ಕರೆಯಿಸಿಕೊಳ್ಳುವ ಮೂಲಕ ಸ್ವಾರ್ಥಕ್ಕಾಗಿ ಬದುಕುವ ಇಂತಹ ಮುಖಂಡರ ಮಧ್ಯೆ ಪ್ರಜಾಪ್ರಭುತ್ವದ ಆಶಯಗಳು ಉಳಿದು ಅಭಿವೃದ್ಧಿ ಆಗಬೇಕಾದರೆ ಜನಪರ ಆಶಯ ಮತ್ತು ಅಭಿವೃದ್ಧಿಯ ಕಣ್ಣೋಟವನ್ನು ಒಳಗೊಂಡಿರುವ ಉತ್ಸಾಹಿ ಯುವ ನಾಯಕರಾದ ಶಿವಕುಮಾರ ಮ್ಯಾಗಳಮನಿ ಅಂತವರು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವುದು ಅತ್ಯಗತ್ಯ ಮತ್ತು ಅನಿವಾರ್ಯತೆ ಇದೆ. ಇದಕ್ಕೆ ಮನ್ನಣೆ ಕೊಟ್ಟು ಜನತೆ ಮತ್ತು ಅಭಿವೃದ್ಧಿಗಾಗಿ ಚುನಾವಣೆಗೆ ಸ್ಪರ್ಧಿಸಲು ಮ್ಯಾಗಳಮನಿ ಯವರು ಉತ್ಸುಕರಾಗಿದ್ದಾರೆ ಇವರು ಸ್ಪರ್ಧಿಸದರೆ ಕ್ಷೇತ್ರದಲ್ಲಿ ಕಠಿಣ ಸ್ಪರ್ಧೆ ನಡೆಯುವುದು ನಿಶ್ಚಿತ ಎಂದು ಮತದಾರರು ಮಾತನಾಡಿ ಕೊಳ್ಳುತ್ತಿದ್ದಾರೆ ಎಲ್ಲವನ್ನೂ ಕಾದು ನೋಡಬೇಕಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.