Skip to main content
ಕರುನಾಡ ಚಕ್ರವರ್ತಿ ಡಾ|| *ಶಿವರಾಜಕುಮಾರ್* ಬಿಡುಗಡೆ ಮಾಡಿದರು *"ಗಾಂಧಿ ಮತ್ತು ನೋಟು"* ಚಿತ್ರದ ಟ್ರೇಲರ್.

ಕರುನಾಡ ಚಕ್ರವರ್ತಿ ಡಾ|| *ಶಿವರಾಜಕುಮಾರ್* ಬಿಡುಗಡೆ ಮಾಡಿದರು *"ಗಾಂಧಿ ಮತ್ತು ನೋಟು"* ಚಿತ್ರದ ಟ್ರೇಲರ್.

ಕರುನಾಡ ಚಕ್ರವರ್ತಿ ಡಾ|| *ಶಿವರಾಜಕುಮಾರ್* ಬಿಡುಗಡೆ ಮಾಡಿದರು *"ಗಾಂಧಿ ಮತ್ತು ನೋಟು"* ಚಿತ್ರದ ಟ್ರೇಲರ್.

Kannada new film

ಸಾಹಿತಿ *ವಿ.ನಾಗೇಂದ್ರಪ್ರಸಾದ್* ಪುತ್ರಿ *ದಿವಿಜಾ ನಾಗೇಂದ್ರಪ್ರಸಾದ್* ನಟನೆಯ ಚಿತ್ರ. ವಿಭಿನ್ನ ಕಥಾಹಂದರ ಹೊಂದಿರುವ *"ಗಾಂಧಿ ಮತ್ತು ನೋಟು"* ಚಿತ್ರದ ಟ್ರೇಲರ್ ಕರುನಾಡ ಚಕ್ರವರ್ತಿ *ಶಿವರಾಜಕುಮಾರ್* ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಸಾಹಿತಿ ವಿ.ನಾಗೇಂದ್ರಪ್ರಸಾದ್ ಪುತ್ರಿ *ದಿವಿಜಾ ನಾಗೇಂದ್ರಪ್ರಸಾದ್* ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. *ಲೋಕೇಶ್‌ ಡಿ.ಕೆ, ಮುರುಧ್ಯ, ಪ್ರಜ್ಞಾ ಬ್ರಹ್ಮಾವರ್, ಕೆ.ಬಿ.ರವಿ, ರಂಗಸ್ವಾಮಿ, ನವೀನ್, ವಿಶಾಲ್* ಮುಂತಾದವರು ತಾರಾಬಳಗದಲ್ಲಿದ್ದಾರೆ.

ಭಾವನ ಕಂಬೈನ್ಸ್ ಲಾಂಛನದಲ್ಲಿ *ಸುಧಾರಾಣಿ ಹೆಚ್.ಆರ್, ವೀಣಾ ಪದ್ಮನಾಭ, ಮಂಜುನಾಥ್ ಬಿ.ಎನ್* ಈ ಚಿತ್ರ ನಿರ್ಮಾಣ ಮಾಡಿದ್ದಾರೆ. *ಪ್ರಿಯಾಂಕ ಉಪೇಂದ್ರ* ಅಭಿನಯದ ಸೆಕೆಂಡ್ ಆಫ್ ಚಿತ್ರ ನಿರ್ದೇಶಿಸಿದ್ದ *ಯೋಗಿ ದೇವಗಂಗೆ* ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಕೂಡ ಯೋಗಿ ಅವರದೆ.

Kannada new film

ಗಾಂಧಿ ತತ್ವಗಳನ್ನು ಹಾಗೂ ನೋಟನ್ನು ಈಗಿನ ಜನ ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನು ಹಳ್ಳಿ ಹುಡುಗಿ(ದಿವಿಜಾ) ಪಾತ್ರದ ಮೂಲಕ ಹೇಳ ಹೊರಟಿದ್ದಾರೆ ನಿರ್ದೇಶಕರು. ಚಿಕ್ಕ ವಯಸ್ಸಿನ ಈ ಹುಡುಗಿ ಹೇಳುವ ಮಾತು ಎಲ್ಲಾವರ್ಗದ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದೇ ಇದರ ಕಥಾಸಾರಾಂಶ. ಸಾಗರದ ತುಂಬ್ರಿ ಎಂಬ ಸ್ಥಳದಲ್ಲೇ ಹೆಚ್ಚಿನ‌ ಚಿತ್ರೀಕರಣ ನಡೆದಿದೆ. ಪ್ರಸ್ತುತ ಚಿತ್ರ ಡಿ ಐ ನಿಂದ ಸಿಂಗಾರಗೊಳ್ಳುತ್ತಿದೆ. ಅಕ್ಟೋಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದೆ.

*ವಿ.ನಾಗೇಂದ್ರಪ್ರಸಾದ್* ಅವರು ಬರೆದಿರುವ ಹಾಡುಗಳಿಗೆ *ವಾಣಿ ಹರಿಕೃಷ್ಣ* ಸಂಗೀತ ನೀಡಿದ್ದಾರೆ. *ಅಚ್ಚು ಸುರೇಶ್* ಛಾಯಾಗ್ರಹಣ, *ವಸಂತಕುಮಾರ್* ಸಂಕಲನ ಹಾಗೂ *ವಿ.ಎಲ್ ಸತೀಶ್* ಅವರ ಸಹ ನಿರ್ದೇಶನವಿರುವ ಈ ಚಿತ್ರಕ್ಕೆ *ಗುರುಪ್ರಸಾದ್ ಚಂದ್ರಶೇಖರ್* ಸಂಭಾಷಣೆ ಬರೆದಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.