ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ಸಹಾಯ ಅಸ್ತ ನಿಖಿಲ್ ಕುಮಾರ್ ಸ್ವಾಮಿ
ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ಸಹಾಯ ಅಸ್ತ ನಿಖಿಲ್ ಕುಮಾರ್ ಸ್ವಾಮಿ .

ರಾಜ್ಯದಂತ "ಕೊರೋನಾ " ಸಾಂಕ್ರಾಮಿಕ ರೋಗದಿಂದ ತತ್ತರಿಸುವ ಜನ ಒಂದೇಡೆ ಯಾದರೆ ,ಇದರ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕರ್ನಾಟಕ ಚಲನ ಚಿತ್ರ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ,ಇದರಿಂದಾಗಿ ಕನ್ನಡ ಚಿತ್ರ ರಂಗದ ಯುವ ರಾಜಾ ನಿಖಿಲ್ ಕುಮಾರ್ ಸ್ವಾಮಿ ಯವರು , ನಿರ್ಮಾಪಕ ಸಾ.ರಾ.ಗೋವಿಂದು ಅವರ ಮೂಲಕ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ಚೆಕ್ ರವಾನಿಸಿದ್ದಾರೆ . ನಿಖಿಲ್ ಕುಮಾರಸ್ವಾಮಿ ಕೊರೋನ ಲಾಕ್ ಡೌನ್ ಇಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಷ್ಟಕ್ಕೆ ನಿಖಿಲ್ ಕುಮಾರಸ್ವಾಮಿ ಸ್ಪಂದಿಸಿದ್ದು ,ಸುಮಾರು ೩೭ ಲಕ್ಷ ರೂಪಾಯಿ ಚೆಕ್ ಅನ್ನು ನಿರ್ಮಾಪಕ ಸಾ.ರಾ.ಗೋವಿಂದು ಅವರಿಗೆ ತಲುಪಿಸಿದ್ದಾರೆ.

ಇಂದು ಸಾ.ರಾ.ಗೋವಿಂದು ಅವರು ಗಾಂಧಿ ನಗರದಲ್ಲಿರುವ ಕರ್ನಾಟಕ ಚಲನಚಿತ್ರ ಕಾರ್ಮಿಕರ ಸಂಘಕ್ಕೆ ಆಗಮಿಸಿ, ಕಾರ್ಮಿಕರ ಸಂಘದ ಕಾರ್ಯದರ್ಶಿ ರವೀಂದ್ರ ಅವರಿಗೆ ನಿಖಿಲ್ ಕುಮಾರಸ್ವಾಮಿ ಅವರು ನೀಡಿರುವ ಪರಿಹಾರದ ಚೆಕ್ ರವಾನಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್, ನಿರ್ಮಾಪಕರಾದ ಉಮೇಶ್ ಬಣಕಾರ್, ಕೆ.ಎಂ.ವೀರೇಶ್ ಉಪಸ್ಥಿತರಿದ್ದರು.. ಕಿರುತೆರೆಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೂ ನಿಖಿಲ್ ಕುಮಾರಸ್ವಾಮಿ ಅವರು ಸಹಾಯ ನೀಡಿದ್ದು, ಟಿಲಿವಿಷನ್ ಅಸೋಸಿಯೇಷನ್ ಪರವಾಗಿ ನಟಿ ಅಭಿನಯ ಅವರು ಸಾ.ರಾ.ಗೋವಿಂದು ಅವರಿಂದ ಚೆಕ್ ಪಡೆದರು.. ಕರ್ನಾಟಕ ಚಲನಚಿತ್ರ ಕಾರ್ಮಿಕರಿಗೆ 32 ಲಕ್ಷ ಹಾಗೂ ಕಿರುತೆರೆ ಕಾರ್ಮಿಕರಿಗೆ 5 ಲಕ್ಷ ಒಟ್ಟು 37 ಲಕ್ಷ ರೂಪಾಯಿ ಸಹಾಯವನ್ನು ನಿಖಿಲ್ ಕುಮಾರಸ್ವಾಮಿ ಅವರು ಮಾಡಿದ್ದಾರೆ.
Recent comments