Skip to main content
ಕಂಬಳಿ ನೇಕಾರರ ಕಾರ್ಯಕ್ರಮ

ಕಂಬಳಿ ನೇಕಾರರ ಜೀವನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮ

ಕಂಬಳಿ ನೇಕಾರರ ಜೀವನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳು

ನೀಲ ಕಾಂತ್

ಬೆಂಗಳೂರು: ವಿಮೋರ್‌ ಹ್ಯಾಂಡ್‌ಲೂಮ್‌ ಸಂಸ್ಥೆಯ 45 ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿದ್ದ ವಿಮೋರ್ ಕೈಮಗ್ಗ ಉತ್ಸವದ ಭಾಗವಾಗಿ ಕಂಬಳಿ ತಯಾರಿಕರ ಕತೆ ಹಾಗೂ ಅವರ ಜೀವನ ಶೈಲಿಯನ್ನು ಹಾಡು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಪ್ರಸ್ತುತ ಪಡಿಸಲಾಯಿತು. ಬೆಲ್ಗಾಂ ಕುರುಬಾ ಸಮುದಾಯದ ಗ್ರಾಮೀಣ ಕಾಂಬ್ಲಿ ನೇಕಾರರು ತಲೆಮಾರುಗಳಿಂದ ಕಂಬಳಿಗಳನ್ನು ತಯಾರಿಸುತ್ತ ಬಂದಿದ್ದಾರೆ. ಕಂಬಳಿ ನೇಯ್ಗೆಕಾರರು ತಮ್ಮ ಜೀವನ ಶೈಲಿ, ತಮ್ಮ ಪ್ರಯಾಣವನ್ನು, ದೇವರ ಕತೆಗಳನ್ನು ಜಾನಪದ ಹಾಡಿನ ಮೂಲಕ ಪ್ರಸ್ತುತ ಪಡಿಸಿದರು.

ಕಾರ್ಯಕ್ರಮ

ವಿಮೋರ್ ಹ್ಯಾಂಡ್‌ಲೂಮ್ ಫೌಂಡೇಶನ್ ಆಯೋಜಿಸಿದ್ದ ಕೈಮಗ್ಗ ವಾಯೇಜ್ ಕಾರ್ಯಕ್ರಮದ ಅಂಗವಾಗಿ ನೀಲಕಾಂತ್ ನಾಗಪ್ಪ ಕುರುಬಾ, ಹುಚ್ಚಗವಾ, ಬೆಲ್ಗಾಂ ಮತ್ತು ನಿಂಗಪ್ಪ ಶಂಕರ್ ಸನಕ್ಕಿ ಅವರ ತಂಡದಿಂದ ತಮ್ಮ‌ಕುಲಕಸುಬನ್ನು ಜಾನಪದ ಹಾಡಿನ ಮೂಲಕ ಪ್ರಸ್ತುತ ಪಡಿಸಿದರು. ಅವರ ಸಮುದಾಯದಲ್ಲಿ ತಮ್ಮ ಗ್ರಾಮ ದೇವರಿಗೆ ಬಿಯರ್‌ನನ್ನು ಅರ್ಪಿಸಿ ಪೂಜೆ ಸಲ್ಲಿಸುವ ಪದ್ಧತಿ ಹೊಂದಿದ್ದಾರೆ. ಈ ಸಂಪ್ರದಾಯ ಆಚಾರ ವಿಚಾರಗಳನ್ನು, ಹಾಗೂ ತಮ್ಮ ಸಮುದಾಯದ ಇತಿಹಾಸ, ಪುರಾಣವನ್ನು ತಮ್ಮ ಹಾಡಿನ‌ ಮೂಲಕ ಇಡೀ ಸಮಾಜಕ್ಕೆ ಕಾರ್ಯಕ್ರಮದ ಮೂಲಕ ತಲುಪಿಸಿದರು.‌

ನಿಂಗಪ್ಪ ಶಂಕರ್

ಕಾರ್ಯಕ್ರಮ ನಡೆಸಿಕೊಟ್ಟ ನೀಲಕಂಠ ನಾಗಪ್ಪ ಮಾತನಾಡುತ್ತ, ಸಮಾಜದಲ್ಲಿನ ಆಗುತ್ತಿರುವ ಬದಲಾವಣೆಗಳು ಕಲಾ ಪ್ರಕಾರವನ್ನೂ ಬದಲಾಗುತ್ತಿದೆ. “ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಸಮಾಜ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದೆ. ಇದು ಸಮುದಾಯಗಳ ಮೇಲೂ ಪರಿಣಾಮ ಬೀರಿದೆ. ನಾವು ಯಾವುದೇ ಆರ್ಥಿಕ ಕೊಯ್ಲು ಇಲ್ಲದೆ ಹಾಡುತ್ತಿದ್ದೆವು. ಅದು ಭಕ್ತಿ. ಆದರೆ, ಕಲಾ ಪ್ರಕಾರವು ಈಗ ಆರ್ಥಿಕ ಲಾಭಕ್ಕಾಗಿ ಒಂದು ತಿರುವು ಪಡೆದುಕೊಂಡಿದೆ. ಅದು ಹೊಸ ಪೀಳಿಗೆಯ ಭಕ್ತಿಯಾಗಿ ಮಾರ್ಪಟ್ಟಿದೆ ಎಂದು ಅಭಿಪ್ರಾಯಪಟ್ಟರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.