ಕಳೆದ ವರ್ಷ ಬಿಡುಗಡೆಗೊಂಡು ಯಶಸ್ವಿಯಾದ ಚಿತ್ರ ಶಿವಾಜಿ ಸುರತ್ಕಲ್,
ಕಳೆದ ವರ್ಷ ಬಿಡುಗಡೆಗೊಂಡು ಯಶಸ್ವಿಯಾದ ಚಿತ್ರ ಶಿವಾಜಿ ಸುರತ್ಕಲ್,

ಇದರ ಮುಂದುವರಿದ ಭಾಗ ಶಿವಾಜಿ ಸುರತ್ಕಲ್-2, ಶಿವಾಜಿ ಸುರತ್ಕಲ್ ಆಗಿ ಕಾಣಿಸಿಕೊಂಡ ರಮೇಶ್ ಅರವಿಂದ್ ಅವರ ಜೊತೆ ರಾಧಿಕಾ ನಾರಾಯಣ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿಯವರು ಅವರವರ ಪಾತ್ರದಲ್ಲಿ ಮುಂದುವರಿಯಲಿದ್ದು, ಇನ್ನಷ್ಟು ಪ್ರಮುಖ ಪಾತ್ರಗಳು ಈ ಚಿತ್ರದಲ್ಲಿದ್ದು ಅದರಲ್ಲಿ ಡಿಸಿಪಿ ದೀಪ ಕಾಮತ್ ಕೂಡ ಒಂದು. ಬೆಂಗಳೂರ್ ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿ ಪಾತ್ರಧಾರಿಯಾಗಿ ಮೇಘನಾ ಗಾಂವ್ಕರ್ ಕಾಣಿಸಿಕೊಳ್ಳಲಿದ್ದಾರೆ.
ಇಷ್ಟು ದಿನ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೇಘನ ಗಾಂವ್ಕರ್ ಅವರು ಮೊದಲ ಬಾರಿಗೆ ಟಫ್ ಕಾಪ್ ಆಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರವಾದ ಡಿಸಿಪಿ ದೀಪ ಕಾಮತ್, ಶಿವಾಜಿ ಸುರತ್ಕಲ್ ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಮತ್ತು ಮೇಲಧಿಕಾರಿಯ ಪಾತ್ರವಾಗಿರುತ್ತದೆ. ಇನ್ನಷ್ಟು ಹೊಸ ತಾರಾಗಣ ಚಿತ್ರತಂಡ ಸೇರಲಿದ್ದು ಚಿತ್ರದ ನಿರ್ಮಾಣದ ಕೆಲಸವು ಈಗಾಗಲೇ ನಡೆಯುತ್ತಿದೆ, ಕೆಲವೇ ದಿನದಲ್ಲಿ ಮುಹೂರ್ತ ಮಾಡಿ ಚಿತ್ರೀಕರಣಕ್ಕೆ ಹೋಗುವುದಾಗಿ ಚಿತ್ರತಂಡ ತಿಳಿಸಿದೆ.
ರಮೇಶ್ ಅರವಿಂದ್ ಅವರ 103ನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ ಅವರು ನಿರ್ದೇಶಿಸಿ, ರೇಖಾ.ಕೆ.ಎನ್ ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.
Recent comments