Skip to main content
"ಕಾಟನ್ ಪೇಟೆ ಗೇಟ್" ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ.

"ಕಾಟನ್ ಪೇಟೆ ಗೇಟ್" ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ.

"ಕಾಟನ್ ಪೇಟೆ ಗೇಟ್" ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ.

Kannada

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಆರ್ ಎಸ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ಆರ್ ಶ್ರೀನಿವಾಸ್ ನಿರ್ಮಿಸುತ್ತಿರುವ ಇಪ್ಪತ್ತನೆಯ ಚಿತ್ರ "ಕಾಟನ್ ಪೇಟೆ ಗೇಟ್" . ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.

Kannada

ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಬೆಂಗಳೂರು, ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆದಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ವೈ ರಾಜಕುಮಾರ್ ನಿರ್ದೇಶಿಸುತ್ತಿದ್ದಾರೆ. ಕನ್ನಡದಲ್ಲಿ "ಕಾಟನ್ ಪೇಟೆ ಗೇಟ್" ಎಂದು, ತೆಲುಗಿನಲ್ಲಿ "ಸೀತಣ್ಣಪೇಟಾ ಗೇಟ್" ಎಂಬ ಹೆಸರಿನಲ್ಲಿ ನಿರ್ಮಾಣವಾಗುತ್ತಿದೆ.

Kannada

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಎನ್ ಎಸ್ ಪ್ರಸು ಸಂಗೀತ ನೀಡುತ್ತಿದ್ದಾರೆ. ಚಿಡತಾಲ ನವೀನ್ ಹಾಗೂ ಯೋಗಿ ರೆಡ್ಡಿ ಛಾಯಾಗ್ರಹಣ, ಶಿವ ಸರ್ವಣಿ ಸಂಕಲನ ಹಾಗೂ ಬಯ್ಯವರಪು ರವಿ ಸಂಭಾಷಣೆ ಬರೆದಿದ್ದಾರೆ. ವೇಣುಗೋಪಾಲ್, ಯಶ್ವನ್, ಸುರಭಿ ತಿವಾರಿ, ಅನುಶಾ ಜೈನ್, ಸುಧಿಕ್ಷ, ಕಿಸ್ಲೆ ಚೌಧರಿ , ಪಾರ್ಥು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.