"ಶಂಭೋ ಶಿವ ಶಂಕರ" ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ.
"ಶಂಭೋ ಶಿವ ಶಂಕರ" ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ.

ಹಾಡೊಂದರ ಚಿತ್ರೀಕರಣವಾದರೆ ಚಿತ್ರೀಕರಣ ಮುಗಿದಂತೆ. ವರ್ತೂರು ಮಂಜು ನಿರ್ಮಾಣದ , ಶಂಕರ್ ಕೋನಮಾನಳ್ಳಿ ನಿರ್ದೇಶನದ "ಶಂಭೋ ಶಿವ ಶಂಕರ" ಚಿತ್ರದ ಚಿತ್ರೀಕರಣ ನೆಲಮಂಗಲದ ಹೊರ ವಲಯದಲ್ಲಿರುವ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆದಿದೆ. ಅದೊಂದು ಮಾರ್ಕೆಟ್ ದೃಶ್ಯ ಅಲ್ಲಿ ಚಿತ್ರೀಕರಣದಲ್ಲಿ ಮೂರು ಜನ ಮಂಗಳ ಮುಖಿಯರದ್ದೇ ಕಾರು ಬಾರು ನಡೆದಿತ್ತು. ಚಿತ್ರೀಕರಣದ ಸ್ಥಳಕ್ಕೆ ಹೋದವರಿಗೆ ಚಿತ್ರದ ಪ್ರಮುಖ ಮೂರು ಪಾತ್ರಗಳಾದ "ಶಂಭೋ ಶಿವ ಶಿಂಕರ"ರು ಎಲ್ಲಿ ಇದ್ದಾರೆ ಎಂದು ಹುಡುಕುವುದೇ ದೊಡ್ಡ ಸಾಹಸದ ವಿಷಯವಾಗಿತ್ತು.
ಏಕೆಂದರೆ ಆ ಮೂರೂ ಜನ ನಟರು ಮಂಗಳ ಮುಖಿಯರ ಗೆಟಪ್ಪಿನಲ್ಲಿದ್ದರು. ಮೂರೂ ಜನ ಚಿತ್ರದ ನಾಯಕ ನಟರನ್ನು ನಿಜಕ್ಕೂ ಇವರು ಮಂಗಳ ಮುಖಿಯರು ಎನ್ನುವಷ್ಟು ಚನ್ನಾಗಿ ಮೇಕಪ್ ಮಾಡಿದ್ದರು. ಇದೊಂದು ಕಥೆಯಲ್ಲಿ ಬರುವ ತುಂಬಾ ಪ್ರಮುಖವಾದ ದೃಶ್ಯ ವಂತೆ ಹಾಗಂತ ಮೂರು ಜನ ನಟರಾದ ರೋಹಿತ್, ರಕ್ಷಿತ್ ಮತ್ತು ಪುನೀತ್ ತಮ್ಮ ಅನುಭವ ಹಂಚಿಕೊಂಡರು. ಸೀರೆಯಲ್ಲಿ ಹೆಣ್ಣು ಮಕ್ಕಳು ಹೇಗಿರುತ್ತಾರೋ ನಮಗಂತು ಸಾಕಾಗಿ ಹೋಗಿದೆ ಎಂದರು.

ಇದೇ ಉಡುಗೆಯಲ್ಲಿ ಆಕ್ಷನ್ ಸನ್ನಿವೇಶದಲ್ಲೂ ನಾಯಕರು ಕಾಣಿಸಿಕೊಂಡಿರುವುದು ವಿಶೇಷ. ಆ ಸಾಹಸ ದೃಶ್ಯವನ್ನು ಫೈಟ್ ಮಾಸ್ಟರ್ ಡಿಫ್ರೆಂಟ್ ಡ್ಯಾನಿ ಯವರು ಕಂಪೋಸ್ ಮಾಡಿದ್ದಾರೆ. ಚಿತ್ರದ ನಿರ್ದೇಶಕ ಶಂಕರ್ ಮಾತಾಡಿ ಈಗಾಗಲೇ ಚಿತ್ರದ ಟಾಕಿ ಪೋಷನ್ ಇಂದು ಕೊನೆಯ ದಿನ ಬಹುತೇಕ ಚಿತ್ರೀಕರಣ ಮುಗಿದಂತೆ ಒಂದು ಹಾಡಿನ ಚಿತ್ರೀಕರಣ ಬಾಕಿ ಇದ್ದು ಗೋವಾದಲ್ಲಿ ಚಿತ್ರೀಕರಿಸುವ ಯೋಜನೆ ಇದೆ. ಕೋವಿಡ್ ನಿಂದಾಗಿ ನಮಗೆ ಅನುಮತಿ ಸಿಕ್ಕಿಲ್ಲ ಸಕ್ಕಿದ ಕೂಡಲೇ ಗೋವಾಗೆ ಹೊರಡುತ್ತೇವೆ ಎಂದರು.
ಚಿತ್ರದ ನಿರ್ಮಾಪಕ ವರ್ತೂರು ಮಂಜು ಸಿನಿಮಾ ಬಗ್ಗೆ ಒಳ್ಳೆಯ ಭರವಸೆ ಇಟ್ಟುಕೊಂಡು ಚಿತ್ರವನ್ನು ಮುಂದಿನ ದಿನಗಳಲ್ಲಿ ಬಿಡುಗಡೆಗೆ ಬೇಕಾದ ಪೂರ್ವಯೋಜನೆ ಹಾಕಿಕೊಂಡಿದ್ದಾರೆ. ಗೌಸ್ ಫೀರ್ ಹಾಡುಗಳನ್ನು ಬರೆದಿದ್ದಾರೆ. ಹಿತನ್ ಹಾಸನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಧರ್ಮವಿಶ್ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ವೆಂಕಟೇಶ್ ಯುಡಿವಿ ಅವರ ಸಂಕಲನ ಈ ಚಿತ್ರಕ್ಕಿದೆ. 'ಶಂಭೋ ಶಿವ ಶಂಕರ' ಮೂರು ನಾಯಕ ಪಾತ್ರಗಳ ಹೆಸರಾಗಿದ್ದು, ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ. ಸುಪ್ರಿಂ ಹೀರೋ ಶಶಿಕುಮಾರ್, ಸೋನಾಲ್ ಮಾಂಟೆರೊ, ಜೊಗಿ ನಾಗರಾಜ್, ಪ್ರದೀಪ್ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್', ಡಿ.ಸಿ.ತಮ್ಮಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Recent comments