ನೋಡುಗರ ಮನ ಗೆಲುತ್ತಿದೆ 'ಅದನೇನ್ ಕೇಳ್ತಿ' .
ನೋಡುಗರ ಮನ ಗೆಲುತ್ತಿದೆ 'ಅದನೇನ್ ಕೇಳ್ತಿ' .

ಸ್ಕೆಚ್ ಪೆನ್ಸಿಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹ್ಯಾರಿ ಅವರು ನಿರ್ಮಿಸಿರುವ, ನಾಗೇಂದ್ರ ಅರಸ್ ನಿರ್ದೇಶಿಸಿರುವ 'ಅದನೇನ್ ಕೇಳ್ತಿ' ಚಿತ್ರ ಆಗಸ್ಟ್ ೨೨ರಂದು ವಿ ೪ ಸ್ಟ್ರೀಮಿಂಗ್ V4stream ಓಟಿಟಿ ಮೂಲಕ ಬಿಡುಗಡೆಯಾಗಿ ಜನಮನಸೂರೆಗೊಂಡಿದೆ. ೧೬ ಸನ್ನಿವೇಶಗಳ ಚಿತ್ರೀಕರಣ ಕೇವಲ ನಾಲ್ಕು ವರೆ ದಿನಗಳಲ್ಲಿ ಮುಕ್ತಾಯವಾಗಿರುವುದು ವಿಶೇಷ.
ಮನೋರಂಜನಾ ಪ್ರಧಾನವಾಗಿರುವ ಈ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಇಡೀ ತಂಡಕ್ಕೆ ಸಂತಸ ತಂದಿದೆ ಎನ್ನುತ್ತಾರೆ ನಾಗೇಂದ್ರ ಅರಸ್. ನಿರ್ದೇಶಕರೆ ಕಥೆ ಬರದು ಸಂಕಲನ ಕಾರ್ಯವನ್ನು ನಿರ್ವಹಿಸಿದ್ದಾರೆ. ಎಂ.ಬಿ ಅಳಿಕಟ್ಟಿ ಛಾಯಾಗ್ರಹಣ ಹಾಗೂ ಸೇನಾಪತಿ ಅವರ ಸಂಗೀತ ಈ ಚಿತ್ರಕ್ಕಿದೆ. ನಿರಂಜನ್ ದೇಶಪಾಂಡೆ, ಪ್ರವೀಣ್ ಕುಮಾರ್ (ಕಾಮಿಡಿ ಕಿಲಾಡಿಗಳು), ಅನಿಲ್ ಯಾದವ್, ಹ್ಯಾರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Recent comments