ಮೈಕಲ್ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ.
ಮೈಕಲ್ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ.
ಸಂದೀಪ್ ಕಿಶನ್ ಮತ್ತು ಮಕ್ಕಳ್ ಸೇಲ್ವನ್ ವಿಜಯ್ ಸೇತುಪತಿ ಕಾಂಬಿನೇಷನ್ ಸಿನಿಮಾ.

ಸ್ಪೇಷಲ್ ಮಾಸ್ ಆ್ಯಕ್ಷನ್ ಅವತಾರದಲ್ಲಿ ವಿಜಯ್ ಸೇತುಪತಿ ನಟನೆ* ಸಂದೀಪ್ ಕಿಶನ್ ಮತ್ತು ಮಕ್ಕಳ್ ಸೇಲ್ವನ್ ವಿಜಯ್ ಸೇತುಪತಿ ಕಾಂಬಿನೇಷನ್ನಲ್ಲಿ ಮೈಕಲ್ ಶೀರ್ಷಿಕೆ ಸಿನಿಮಾ ಶುರುವಾಗಿದೆ. ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್ ಎಲ್ ಪಿ ಮತ್ತು ಕರಣ್ ಸಿ ಪ್ರೊಡಕ್ಷನ್ಸ್ ಎಲ್ಎಲ್ಪಿ ಬ್ಯಾನರ್ನಲ್ಲಿ ಸಿದ್ಧವಾಗಲಿರುವ ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಲಿದ್ದು, ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಹಲವು ಸಿನಿಮಾ ನಿರ್ಮಾಣ ಮಾಡಿರುವ ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್ ಎಲ್ ಪಿ ಇದೀಗ ಮಾಸ್ ಎಂಟರ್ಟೈನರ್ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಭರವಸೆಯ ನಾಯಕ ನಟ ಸಂದೀಪ್ ಕಿಶನ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸಂದೀಪ್ಗೆ ಚಿತ್ರದ ಟೈಟಲ್ ರೋಲ್ ಸಿಕ್ಕಿದ್ದು, ತಮಿಳಿನಲ್ಲಿ ಹವಾ ಸೃಷ್ಟಿಸಿರುವ ವಿಜಯ್ ಸೇತುಪತಿ ಸ್ಪೇಷಲ್ ಮಾಸ್ ಆ್ಯಕ್ಷನ್ ಅವತಾರದಲ್ಲಿ ಈ ಚಿತ್ರದಲ್ಲಿರಲಿದ್ದಾರೆ. ಅಂದಹಾಗೆ ನಿರ್ಮಾಪಕ ಸುನೀಲ್ ನಾರಂಗ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮೈಕಲ್ ಸಿನಿಮಾ ಘೋಷಣೆ ಆಗಿದೆ. ಶೀರ್ಷಿಕೆ ಪೋಸ್ಟರ್ ಸಹ ಬಿಡುಗಡೆ ಆಗಿದೆ. ರಂಜಿತ್ ಜೆಯಕೊಡಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಚಿತ್ರ ಮೂಡಿಬರಲಿದೆ. ಭರತ್ ಚೌಧರಿ, ಪುಷ್ಕರ್ ರಾಮ್ ಮೋಹನ್ ರಾವ್ ಈ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ನಾರಾಯಣ್ ದಾಸ್ ಕೆ ನಾರಂಗ್ ಅರ್ಪಿಸುತ್ತಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ಸೆಟ್ಟೇರಲಿದೆ. ಅಲ್ಲಿಯವರೆಗೂ ಪಾತ್ರಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ರಂಜಿತ್ ಜೆಯಕೊಡಿ ನಿರ್ದೇಶನ ಮಾಡಿದರೆ, ಭರತ್ ಚೌಧರಿ ಮತ್ತು ಪುಷ್ಕರ್ ರಾಮ್ ಮೋಹನ್ ರಾವ್ ಬಂಡವಾಳ ಹೂಡುತ್ತಿದ್ದಾರೆ. ತಾಂತ್ರಿಕ ವರ್ಗದ ಆಯ್ಕೆಯೂ ಬಹುತೇಕ ಅಂತಿಮವಾಗಿದ್ದು, ಇನ್ನೇನು ಆ ಮಾಹಿತಿಯೂ ಹೊರಬೀಳಲಿದೆ.
Recent comments