Skip to main content
ಲಹರಿ ಪಾಲಾದ ಬನಾರಸ್ ಆಡಿಯೋ ಹಕ್ಕು- ಚೊಚ್ಚಲ ನಾಯಕ‌ನಟರ ಸಿನಿಮಾಗಳ‌ಲ್ಲಿ ಇದರದ್ದೇ ಇತಿಹಾಸ !

ಲಹರಿ ಪಾಲಾದ ಬನಾರಸ್ ಆಡಿಯೋ ಹಕ್ಕು- ಚೊಚ್ಚಲ ನಾಯಕ‌ನಟರ ಸಿನಿಮಾಗಳ‌ಲ್ಲಿ ಇದರದ್ದೇ ಇತಿಹಾಸ !

ಲಹರಿ ಪಾಲಾದ ಬನಾರಸ್ ಆಡಿಯೋ ಹಕ್ಕು- ಚೊಚ್ಚಲ ನಾಯಕ‌ನಟರ ಸಿನಿಮಾಗಳ‌ಲ್ಲಿ ಇದರದ್ದೇ ಇತಿಹಾಸ !

Kannada new film

- ಲಹರಿ' ತೆಕ್ಕೆಗೆ 'ಬನಾರಸ್' ಆಡಿಯೋ ರೈಟ್ಸ್ ;ಜಮೀರ್ ಪುತ್ರನ ಡೆಬ್ಯೂ ಚಿತ್ರ - ಹೊಸ ದಾಖಲೆ- ಝೈದ್ ಖಾನ್- ಜಯತೀರ್ಥ ಜುಗಲ್ ಬಂಧಿ ಮೋಡಿ ! ನಾಯಕ‌‌ ನಟ ಹಾಗೂ‌ ನಿರ್ಮಾಣ ಸಂಸ್ಥೆಯೂ ಸೇರಿದಂತೆ ಕನ್ನಡ ಚಿತ್ರರಂಗದ ಲ್ಲಿ ಅನೇಕ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ' ಬನಾರಸ್ ' ಚಿತ್ರದ ಆಡಿಯೋ- ವಿಡಿಯೋ ಹಕ್ಕುಗಳು ಕನ್ನಡದ ಪ್ರತಿಷ್ಟಿತ ಆಡಿಯೋ ಸಂಸ್ಥೆ ಲಹರಿ ಪಾಲಾಗಿವೆ. ಈ ಚಿತ್ರವು ಕನ್ನಡ, ತೆಲುಗು,ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ‌ಬರುತ್ತಿದ್ದು,ಆ ಎಲ್ಲಾ ಭಾಷೆಯ ಆಡಿಯೋ‌ಮತ್ತು ವಿಡಿಯೋ ಹಕ್ಕುಗಳನ್ನು ಲಹರಿ‌ಸಂಸ್ಥೆ ಖರೀದಿಸಿದೆ.

ಸದ್ಯಕ್ಕೆ ಅದರ‌ ಮೊತ್ತ ರಿವೀಲ್ ಆಗಿಲ್ಲವಾದರೂ, ಚೊಚ್ಚಲ ನಾಯಕ‌ ನಟರೊಬ್ಬರ ಸಿನಿಮಾಗಳ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತಕ್ಕೆ ಲಹರಿ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಾಗಿ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಈ‌ ‌ಕುರಿತು‌ ಲಹರಿ ಸಂಸ್ಥೆಯೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ, ಹಲವು ಕಾರಣಕ್ಕೆ ಸುದ್ದಿಯಲ್ಲಿರುವ ಬನಾರಸ್ ಚಿತ್ರದ ಆಡಿಯೋ - ವಿಡಿಯೋ ಹಕ್ಕುಗಳನ್ನು ಖರೀದಿಸಿದ್ದಕ್ಕೆ ಹೆಮ್ಮೆ ಇದೆ ಎಂದಿದೆ. ಆಂದ ಹಾಗೆ, ' ಬನಾರಸ್' ' ಒಲವೇ ಮಂದಾರ ಹಾಗೂ ಬೆಲ್ ಬಾಟಮ್ ಖ್ಯಾತಿಯ ನಿರ್ದೇಶಕ ಜಯತೀರ್ಥ ಡೈರೆಕ್ಟ್ ಮಾಡಿರುವ ಚಿತ್ರ. ಕಾಂಗ್ರೇಸ್ ಶಾಸಕರಾದ ಜಮೀರ್ ಅಹಮ್ಮದ್ ಪುತ್ರ ಝೈದ್ ಖಾನ್ ಈ‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿಕೊಡ್ತಿದ್ದಾರೆ.

ಅಚ್ಚರಿ ಅಂದರೆ ಝೈದ್ ಡೆಬ್ಯೂ ಚಿತ್ರ ಹೊಸ ದಾಖಲೆ ಬರೆದಿದೆ. ಈ ನಯಾ ಹಿಸ್ಟ್ರಿಗೆ ಮೊದಲ ಕಾರಣ ಹಾಡುಗಳು, ಎರಡನೇ ಕಾರಣ ಲಹರಿ ಸಂಸ್ಥೆ. ಲಹರಿ ಬರೀ ದೊಡ್ಡವರ ಸಿನಿಮಾಗಳಿಗಷ್ಟೇ ಸೀಮಿತವಾಗಿಲ್ಲ, ಸ್ಟಾರ್ ನಟರುಗಳಿಗಷ್ಟೇ ಮಣೆ ಹಾಕಲ್ಲ‌. ಕಲಾವಿದರು ಯಾರೇ ಇರಲಿ, ಸಿನಿಮಾ ಯಾವುದೇ ಇರಲಿ ಸಂಗೀತದಲ್ಲಿ ಹೊಸತನವಿದೆ, ಸಾಹಿತ್ಯ ಕೇಳುಗರನ್ನು‌ ಆಕರ್ಷಿಸುತ್ತದೆ, ಹಾಡುಗಾರನ ಕಂಠದಲ್ಲಿ ನಾವೀನ್ಯತೆಯಿದೆ ಎಂತಾದರೆ ಸ್ಟಾರ್ ಢಮ್ ನೋಡಲ್ಲ. ಬದಲಾಗಿ ಕಲೆಗೆ ಬೆಲೆಕೊಡ್ತಾರೆ, ದಾಖಲೆ‌ ಬೆಲೆ ಕೊಟ್ಟು ಪ್ರೋತ್ಸಾಹಿಸ್ತಾರೆ.ಇದಕ್ಕೆ ಹಲವಾರು ನಿದರ್ಶನಗಳಿವೆ. ಸದ್ಯ, ಬನಾರಸ್ ಚಿತ್ರ ತಾಜಾ ಉದಾಹರಣೆ' ಬನಾರಸ್ ಚಿತ್ರ' ಬನಾರಸ್ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಯ ಆಡಿಯೋ ‌ಹಾಗೂ ವಿಡಿಯೋ ರೈಟ್ಸ್ ನ ದುಬಾರಿ ಮೊತ್ತ ಕೊಟ್ಟೆ ಲಹರಿ ಹಾಗೂ ಟಿ ಸೀರೀಸ್ ಜಂಟಿಯಾಗಿ ಖರೀದಿಸಿದೆ. ಹಿಂದೆಂದೂ ಕೂಡ‌ ಡೆಬ್ಯೂ ಹೀರೋನ ಸಿನಿಮಾದ ಎಲ್ಲಾ ಭಾಷೆಯ ಆಡಿಯೋ ಹಕ್ಕುಗಳ ರೈಟ್ಸ್ ಪಡೆದುಕೊಂಡಿರಲಿಲ್ಲ.

ಇದೇ ಮೊದಲ ಭಾರಿಗೆ ಪ್ರತಿಷ್ಠಿತ ಆಡಿಯೋ ಕಂಪೆನಿಗಳು ಯುವನಟನ ಚೊಚ್ಚಲ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿವೆ. ಹೀಗಾಗಿ, ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಇಂಡಿಯನ್ ಸಿನ್ಮಾ ಇಂಡಸ್ಟ್ರಿಯಲ್ಲೇ ಹೊಸ ದಾಖಲೆ ಬರೆದಂತಾಗಿದೆ. ..

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.