*ಗಣಪನ* ಹಬ್ಬಕ್ಕೆ ಬಿಡುಗಡೆಯಾಯಿತು *"ವ್ಹೀಲ್ ಚೇರ್ ರೋಮಿಯೋ"* ಚಿತ್ರದ ಲಿರಿಕಲ್ ಸಾಂಗ್..
*ಗಣಪನ* ಹಬ್ಬಕ್ಕೆ ಬಿಡುಗಡೆಯಾಯಿತು *"ವ್ಹೀಲ್ ಚೇರ್ ರೋಮಿಯೋ"* ಚಿತ್ರದ ಲಿರಿಕಲ್ ಸಾಂಗ್.

*ವಿಜಯ್ ಪ್ರಕಾಶ್* ಕಂಠಸಿರಿಯಲ್ಲಿ *"ರಂಗುರಾಟೆ"* ಹಾಡು.. ವಿಭಿನ್ನ ಕಥಾಹಂದರ ಹೊಂದಿರುವ *"ವ್ಹೀಲ್ ಚೇರ್ ರೋಮಿಯೋ"* ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರ ಪ್ರಸಾದ್ ಬರೆದಿರುವ "ರಂಗುರಾಟೆ" ಎಂದು ಆರಂಭವಾಗುವ ಹಾಡು ಜಂಕಾರ್ ಮ್ಯೂಸಿಕ್ ಮೂಲಕ ಗಣಪನ ಹಬ್ಬದಂದು ಬಿಡುಗಡೆಯಾಗಿದೆ. ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡು ಬಹಳ ಜನಪ್ರಿಯವಾಗಿದೆ.
ಬಿ.ಜೆ.ಭರತ್ ಈ ಚಿತ್ರದ ಸಂಗೀತ ನಿರ್ದೇಶಕರು. ಸದ್ಯದಲ್ಲೇ "ವ್ಹೀಲ್ ಚೇರ್ ರೋಮಿಯೋ" ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅಂಗವಿಕಲರ ಪ್ರೇಮಕಥೆಯ ಈ ಚಿತ್ರದ ತುಣುಕುಗಳೇ ನೋಡುಗರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಚಿತ್ರ ಕೂಡ ಜನಮನಸೂರೆಗೊಳ್ಳಲಿದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ.
ಕಾಲು ಕಳೆದುಕೊಂಡಿರುವ ಹುಡುಗನ ಪಾತ್ರದಲ್ಲಿ ರಾಮ್ ಚೇತನ್ ಅಭಿನಯಿಸಿದ್ದಾರೆ. ಕಣ್ಣಿಲ್ಲದಿರುವ ಹುಡುಗಿಯ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ, ಗಿರೀಶ್ ಶಿವಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ತಂದೆ-ಮಗನ ಬಾಂಧವ್ಯದ ಸನ್ನಿವೇಶಗಳು ಕೂಡ ಈ ಚಿತ್ರದ ಪಮುಖಾಂಶಗಳಲ್ಲಿ ಒಂದು.
ಜಿ.ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಮೂಲಕ ಟಿ.ವೆಂಕಟಾಚಲಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾ||ವಿ.ನಾಗೇಂದ್ರ ಪ್ರಸಾದ್ ಹಾಗೂ ಜಯಂತ್ ಕಾಯ್ಕಿಣಿ ಅವರು ಬರೆದಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಸಂತೋಷ್ ಪಾಂಡಿ ಛಾಯಾಗ್ರಹಣ, ಕಿರಣ್ ಸಂಕಲನ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಕಂಬಿರಾಜು ನೃತ್ಯ ನಿರ್ದೇಶನ " ವ್ಹೀಲ್ ಚೇರ್ ರೋಮಿಯೋ" ಚಿತ್ರಕ್ಕಿದೆ.
Recent comments