Skip to main content
ಭಿಕರ ರಸ್ತೆ ಅಪಘಾತಕ್ಕಿಡಾದವರಿಗೆ ಜೀವ ರಕ್ಷಣೆಗೆ ನಿಂತ ಜೀವ ರಕ್ಷಕರು.

ಭಿಕರ ರಸ್ತೆ ಅಪಘಾತಕ್ಕಿಡಾದವರಿಗೆ ಜೀವ ರಕ್ಷಣೆಗೆ ನಿಂತ ಜೀವ ರಕ್ಷಕರು.

ಭಿಕರ ರಸ್ತೆ ಅಪಘಾತಕ್ಕಿಡಾದವರಿಗೆ ಜೀವ ರಕ್ಷಣೆಗೆ ನಿಂತ ಜೀವ ರಕ್ಷಕರು.

Raichur

ಸಿರವಾರ:ಬೆಳ್ಳಿಗೆ ಸಮಯ ಸರಿಯಾಗಿ ಹನ್ನೋಂದು ಮೂವತ್ತು ಆಗಿತ್ತು ಅನಿಸುತ್ತೆ, ಅಲ್ಲಿ ಆಗಾಗಲೇ ಅಂದರೇ ಸರಕಾರಿ ಅಸ್ಪತ್ರೆ ಸಿರವಾರದಲ್ಲಿ ಎಸ್ ಎಫ್ ಐ, & ಡಿ ವೈ ಎಫ್ ಐ ಸಂಘಟನೆಗಳು ಹಾಗೂ ಸಿರವಾರ ತಾಲುಕ ಸಮಿತಿ ವತಿಯಿಂದ ರಕ್ತದಾನ ಸಿಬಿರ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು. ಕಾರ್ಯಕ್ರಮವಂತ್ತು ಅಚ್ಚುಕಟ್ಟಾಗಿ ಮೂಡಿಬಂತ್ತು ಅಲ್ಲಿದ್ದ ವಿದ್ಯಾರ್ಥಿಗಳು ಮತ್ತು ಸ್ವಯಂಪ್ರೇರಿತ ರಕ್ತದಾನಿಗಳು ಬಂದು ರಕ್ತದಾನ ಮಾಡಿ ತಮ್ಮ ತಮ್ಮ ಅನುಭವನ್ನ ಅಂಚ್ಚಿಕೊಂಡರು.ಅಲ್ಲಿಗೆ ಕಾರ್ಯಕ್ರಮ ಮುಗಿಸಿ ಆರಾಮಾಗಿ ಕುಳಿತು ತಮ್ಮನ್ನು ತಾವು ವಿಚಾರ ವಿನಿಮಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಅಲ್ಲಿಗೆ ಬಂತು ನೋಡಿ ಒಂದು ಭಿಕರ ಬಿರುಗಾಳಿಯಂತ ಸುದ್ದಿ.!!!

Raichur

ಅದೇನ್ ಇವತ್ತು ಈ ಊರಿನ ಜನ ಯಾರ್ ಮುಖ ನೊಡಿ ಹೊರಟ್ರೋ ಏನೋ ವಿಧಿ ಇವರ ಜೊತೆಗೆ ಹೊಗಿತ್ತು ಅನಿಸುತ್ತೆ ಯಾಕ್ ಹೇಳ್ತಾಇದ್ದಿನಿ ಅಂದ್ರೆ ಗಣದಿನ್ನಿಯಲ್ಲಿ 30 ರಿಂದ 40 ಜನಕ್ಕೆ ಆಕ್ಸಿಡೆಂಟ್ ಆಗಿದೆಯಂತೆ ಅಂತ ಅನ್ನುವ ಸುದ್ದಿ ಎಲ್ಲರಿಗೂ ನೊವುಉಂಟುಮಾಡಿತ್ತು, ಮೊದಲಿಗೆ ಅಲ್ಲಿ ಕುಳಿತ್ತಿದ್ದ ಜನರು ಇದರ ಬಗ್ಗೆ ತಲೆ ಕೆಡ್ಸಿಕೊಳ್ಲ್ಲಿಲ್ಲ ಅನಿಸುತ್ತೆ ಯಾಕಂದರೆ ಮೊದಲನೇ ಟಂ ಟಂ ಗಾಡಿಯಲ್ಲಿ ಗಾಯಗೊಂಡು ಬಂದಿದ್ದ ವ್ಯಕ್ತಿಗಳು ಇಬ್ಬರು ಮೂರು ಜನ ಮಾತ್ರ.

raichur

ಆದರೆ ಇದ್ ಅದ್ಮೆಲೇ ನೊಡಿ ಗೊತ್ ಆಗಿದ್ದು ಅಲ್ಲಿವರೆಗೂ ಸುಮ್ನೆ ಕುತ್ತಿದ್ದ ಜನರೆಲ್ಲ ಕಕ್ಕಬಿಕ್ಕಿಯಾಗಿ ನೊಡ್ತಾಇದ್ರೆ ಗಾಡಿ ಮೇಲೆ ಗಾಡಿ ಗಾಡಿ ಮೇಲೆ ಗಾಡಿ ಒಂದ್ ಅದ್ಮೆಲೇ ಒಂದು ಟಂ ಟಂ ಗಾಡಿಯಲ್ಲಿ ತೀರ್ವವಾಗಿ ಗಾಯಗೊಂಡಿದ್ದ ಜನರನ್ನ ಹಾಕಿಕೊಂಡು ಬರೋದನ್ನ ನೋಡಿ ಒಂದು ಕ್ಷಣನೂ ಯೋಚ್ನೆ ಮಾಡ್ದೆ ಅಲ್ಲಿದ್ದ ತಾಲುಕಿನ ಜೀವರಕ್ಷಕರು ಅವರ ನೋವಿಗೆ ನೇರವಾಗಲು ಧಾವಿಸಿದರು. ನೊಡ್ತಾ ನೊಡ್ತಾಇದ್ದಂತೆ ಕಣ್ಣ ಮುಂದೆ ಬಂದ ಟಂ ಟಂ ಗಾಡಿಯಾಶಬ್ದದ ಜೊತೆಗೆ ಆಗಾಡಿಯಲ್ಲಿ ಗಾಯಗೊಂಡು ನರಳಾಡುತ್ತಿದ್ದಂತಹ ಆ ಜನರ ಆಕ್ರದಂನದ ಅಳು.!!! ಅಲ್ಲಿದ್ದವರ ಎದೆ ಒಂದು ಕ್ಷಣ ನಡುಗಿಸಿತು ಯಾಕಂದ್ರೇ ಒಬ್ರು ಈ ಲೋಕದಮೇಲೆ ಅರಿವೇ ಇಲ್ಲದಂತೆ ಬಿದ್ದರೆ, ಇನ್ನೋಬ್ರು ಮುಖ, ಕೈ, ಕಾಲು ಮುರಿದುಕೊಂಡು ನರಳಾಡುತ್ತಿದ್ದ ದೃಶ್ಯಮಾತ್ರ ಎಂತಹ ವ್ಯೆಕ್ತಿಗಾದ್ರು ಕರಳು ಕಿತ್ತಿಬರುತ್ತಿತ್ತು ಯಾಕಂದ್ರೆ ಪಾಪ ಅಲ್ಲಿದ್ದವರು ಎಲ್ಲ ಬಡವರು ಬಡ ಕೂಲಿ ಕಾರ್ಮಿಕರು ಅದರಲ್ಲಿ ಹೆಚ್ಚಾಗಿ ಮಹಿಳೆಯರೇ ಇದ್ದಿದ್ದು. ಇದ್ದನ್ನ ಕಂಡು ಅಲ್ಲಿನೇರೆದ್ದಿದ್ದ ತಾಲುಕಿನ ಜೀವ ರಕ್ಷಕರು ಅವರನ್ನೆಲ್ಲ ಹೊತ್ತುಕೊಂಡು ಆಸ್ಪತ್ರೆಯ ಒಳಗಡೆ ಕರೆದುಕೊಂಡು ಹೊಗುತ್ತಿದ್ದಿದ್ದು ಮಾತ್ರ ಶ್ಲಾಘನಿಯ.

ಸಿರವಾರ ತಾಲುಕಿನ ಜೀವ ರಕ್ಷಕರು.

raichur

ಇಂದು ನಡೆದ ಈ ಘಟನೆಯ ಜೀವರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದ ಜಿ ಲೋಕರೆಡ್ಡಿ ಇವರ ಬಗ್ಗೆ ಹೇಳ್ ಬೇಕು ಪ್ರತಿ ದಿನ ಸಮಾಜ ಮುಖಿ ಕಾರ್ಯ ಮತ್ತು ಕಾರ್ಯಕ್ರಮಗಳಲ್ಲಿ ತೊಡಗುವ ಇವರು ಈ ಘಟನೆಯ ಸ್ವಲ್ಪ ಹೊತ್ತು ಮುಂಚೆ ತಮ್ಮ ಜೀವನದಲ್ಲೇ ಪ್ರಥಮ ಭಾರಿಗೆ ರಕ್ತ ದಾನ ಮಾಡಿ ಮತ್ತು ತಮ್ಮ ಮಕ್ಕಳ್ಳಿಂದ ಕೂಡ ರಕ್ತದಾನ ಮಾಡಿಸಿದ್ದೆನೆ ಎಂದು ಹೇಳಿದರು. ಇನ್ನೇನೂ ಈ ಕಾರ್ಯಕ್ರಮ ಮುಗಿಸಿ ಹೊರಡಬೇಕು ಎನ್ನುವಸ್ಟರಲ್ಲಿ ಈ ಭರಸಿಡಿಲಿನ ವಿಷಯ ತಿಳಿದು ಅಪಘಾತದಲ್ಲಿ ಗಾಯಗೊಂಡಿದ್ದ ಜನರ ಕಷ್ಟದಲ್ಲಿ ಭಾಗಿಯಾಗಿ ಅವರಿಗಿ ಸಂತ್ವಾನ ಹೇಳಿ ಅವರಿಗೆ ಸೂಕ್ತವಾದ ಪ್ರಥಮ ಚಿಕಿತ್ಸೆ ಕೊಡಿಸುವ ಕಾರ್ಯದಲ್ಲಿ ತೊಡಗಿದ್ದು ಮಾತ್ರ ಮೆಚ್ಚುವಂತಹ ಕಾರ್ಯವಾಗಿದೆ.

Raichur

ಸಂಜೀವಿನಿ ಟ್ರಸ್ಟ್ ಸಿರವಾರ ಇನ್ನೂ ಈ ಸಂಸ್ಥೆಯ ಮತ್ತು ಸಂಸ್ಥೆಯ ಅಧ್ಯಕ್ಷರ ಕಾರ್ಯಗಳ ಬಗ್ಗೆ ತಿಳಿಸುವುದಕ್ಕಿಂತ ತಿಳಿದವರೇ ಹೆಚ್ಚು ಅನಿಸುತ್ತೇ.ಅಂದಹಾಗೇ ತಾಲುಕಿನಲ್ಲಿ ಎಲ್ಲಿ ಏನೇ ಆಗಾಲಿ ರಸ್ತೆ ಅಪಘಾತ,ಸಾವು,ನೋವು ರೋಗಿ,ಗಳಿಗೆ ಎಂತಹ ಸಮಯದಲ್ಲಿಯೂ ಕೂಡ ಅಂಬುಲೇನ್ಸ್ ಸೇವೆ ನಿಡುವ ಇವರ ಸೇವೆ ಎಂದಿನಂತೆ ಇಂದು ಕೂಡ ಅತೀವೇಗವಾಗಿ ತಮ್ಮ ಅಂಬುಲೆನ್ಸ್ ಮೂಲಕ ಗಾಯಗೊಂಡಿದ್ದ ಜನರನ್ನ ಹೆಚ್ಚಿನ ಚಿಕಿತ್ಸೆಗೆ ತಮ್ಮ ಅಂಬುಲೆನ್ಸ್ ನಲ್ಲಿ ಕರೆದು ಕೊಡು ಹೊಗಿದ್ದು ನಿಜಕ್ಕೂ ಮೆಚ್ಚುವಂತಹ ವಿಷಯವಾಗಿದೆ.

Raichur

ಅಲ್ಲದೇ ರಕ್ತದಾನ ಸಿಬಿರದಲ್ಲಿ ತೊಡಗಿದ್ದ ಎಸ್ ಎಪ್ ಐ ಮತ್ತು ಡಿ ವೈ ಎಪ್ ಐ ಸಂಘಟನೆಯ ಹೊರಟಗಾರರು ಜೀವ ಉಳಿಸುವ ಇಂತಹ ಮಹತ್ತರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾವು ನೋವುಗಳ ನಡುವೆ ಒದ್ದಾಡುತ್ತಿದ್ದ ಜನರ ಸಂಕಷ್ಟಕ್ಕೆ ದೈರ್ಯನೀಡಿ ಅವರನ್ನು ಒತ್ತುಕೊಂಡು ಹೊಗಿ ಪ್ರಥಮ ಚಿಕತ್ಸೆ ನಿಡಿಸುವ ಕಾರ್ಯದಲ್ಲಿ ತೊಡಗಿಕೊಂಡು ಯುವ ಶಕ್ತಿಯನ್ನು ತೊರಿಸಿದ್ದಾರೆ.

Raichur

ಇನ್ನೂ ವಿಶೇಷವಾಗಿ ಮತ್ತು ಪ್ರಮುಖವಾಗಿ ಇವರು ಇಲ್ದೆ ಇದ್ದಿದ್ರೇ ಆದ್ ಎಷ್ಟು ಸಾವು ನೋವುಗಳು ಉಂಟಾಗ್ತಿದವೋ ಗೊತ್ತಿಲ್ಲ ಯಾಕಂದ್ರೇ ಕೊನೆಗೆ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ಅವರನ್ನ ರಾಯಚೂರು ಅಸ್ಪತ್ರಗೆ ಕಳುಹಿಸುವ ಕಾರ್ಯಮಾಡಿದ್ದು ಮಾತ್ರ ನಮ್ಮ ತಾಲುಕಿನ ವೈದ್ಯಾಧಿಕಾರಿಗಳು ಮತ್ತು ವಿಶೇಷವಾಗಿ ಇಂದು ರಕ್ತದಾನ ಸಿಬಿರದಲ್ಲಿ ಪಾಲ್ಗೊಂಡಿದ್ದ ರಾಯಚೂರಿನ ವೈದ್ಯಾಧಿಕಾರಗಳ ತಂಡದಿಂದವರು ವೈದ್ಯವೃತ್ತಿಮಾಡಿ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಹೆಚ್ಚಿನ ಸಾವು ನೋವು ತಪ್ಪಿಸುವಲ್ಲಿ ಯಶ್ವಿಯಾಗಿದ್ದಾರೆ.

Raichur

ಅಲ್ಲದೇ ನಮ್ಮತಾಲುಕಿನ ವಿವಿಧ ಸಮಾಜಿಕ ಕಾರ್ಯಕರ್ತರು ಮತ್ತು ಸಂಘಟನಕಾರರು ಈ ಕಾರ್ಯದಲ್ಲಿ ಭಾಗಿಯಾಗಿ ಗಾಯಗೊಂಡವರ ಜೀವ ಉಳಿಸುವ ಜೀವ ರಕ್ಷರಾಗಿದ್ದಾರೆ.

RaichurRaichur

 

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.