Skip to main content
ಆಗಸ್ಟ್ 20ಕ್ಕೆ "ಶೋಕಿವಾಲ "ಚಿತ್ರದ ಮೊದಲ ಹಾಡು ಬಿಡುಗಡೆ.

ಆಗಸ್ಟ್ 20ಕ್ಕೆ "ಶೋಕಿವಾಲ "ಚಿತ್ರದ ಮೊದಲ ಹಾಡು ಬಿಡುಗಡೆ.

ಶೋಕಿವಾಲ ಕನ್ನಡ ಮತ್ತು ತೆಲುಗು ಸಾಂಗ್ ರೆಕಾರ್ಡಿಂಗ್ ಕೆಲಸ ಮುಕ್ತಾಯ ಅಗಸ್ಟ್ 20 ವರಮಹಾಲಕ್ಷೀ ಹಬ್ಬಕ್ಕೆ ಮೊದಲ ಹಾಡು ಬಿಡುಗಡೆ.

Kannada new film

ಮೊದಲ ಬಾರಿಗೆ ಕನ್ನಡದಲ್ಲಿ ಅನ್ವೇಷ ಹಾಡನ್ನು ಹಾಡಿರುವುದು ವಿಶೇಷವಾಗಿದ್ದು ಜಯಂತ್ ಕಾಯ್ಕಿಣಿ ರವರು ಬರೆದಿರುವ ಈ ಹಾಡನ್ನು ಹಿಂದಿ ಸಿನಿಮಾ "ಪ್ರೇಮ್ ರತನ್ ದನ್ ಪಾಯೋ" ಸಿನಿಮಾದ ಸಿಂಗರ್ "ಅನ್ವೇಷ" ಚಿತ್ರಕ್ಕೆ ಹಾಡಿರುವುದು ತುಂಬಾ ಖುಷಿಯಾಗಿದೆ,ಜೊತೆಗೆ ಹಾಡುಕೂಡ ಅದ್ಬುತವಾಗಿ ಮೂಡಿ ಬಂದಿದ್ದು ಎಲ್ಲರು ಮೆಚ್ಚುಗೆ ತಿಳಿಸಿದ್ದಾರೆ ಎನ್ನುತ್ತಾರೆ.

ಚಿತ್ರ ತಂಡ ಹಾಗೂ ಇದೆ ಹಾಡನ್ನು ತೆಲುಗಿಗೆ ಕನ್ನಡದ ಸಿಂಗರ್ ಆದ ಶ್ವೇತ ದೇವನಹಳ್ಳಿ ಯವರು ಹಾಡಿದ್ದಾರೆ. ಕನ್ನಡ ಮತ್ತು ತೆಲುಗು Male Version ಸಂತೋಷ್ ವೆಂಕಿ ಹಾಡಿದ್ದಾರೆ, ಕನ್ನಡದ ಪ್ರತಿಭೆಗಳಿಗೆ ಬೇರೆ ಭಾಷೆಯ ಹಾಡನ್ನು ಹಾಡಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಚಿತ್ರ ತಂಡ ತಿಳಿಸಿದೆ.

ಈ ತೆಲುಗಿನ ಹಾಡನ್ನು ಗೌಸ್ಪಿರ್ ರವರು ಬರೆದಿದ್ದು ತುಂಬಾ ಚೆನ್ನಾಗಿ ಬಂದಿದೆ ಎಂದು ತಿಳಿಸಿದ್ದಾರೆ... ಮುಂದಿನ ದಿನಗಳಲ್ಲಿ ಮುಂದಿನ ಹಾಡುಗಳ ಬಗ್ಗೆ ಮಾಹಿತಿ ನೀಡುತ್ತಾ ಬರುತ್ತೆವೆ.... ಎಂದು ನಿರ್ಮಾಪಕ ಡಾ" T.R.ಚಂದ್ರಶೇಖರ್ ಹಾಗೂ ನಿರ್ದೇಶಕ ಜಾಕಿ ತಿಳಿಸಿದ್ದಾರೆ.

ಆಗಷ್ಟ್ 20 ಕ್ಕೆ ಮೊದಲ ಹಾಡಿನ ಲೀರಿಕಲ್ ವೀಡಿಯೋ ಬಿಡುವುದಾಗಿ ತಿಳಿಸಿದ್ದಾರೆ... ಶ್ರೀಧರ್.ವಿ.ಸಂಭ್ರಮ್ ಸಂಗೀತ ಮೋಡಿ ಮಾಡಲಿರುವ ಮೇಲೋಡಿ ಸಾಂಗ್ ಇದಾಗಿದೆ.... ಈ ಹಾಡನ್ನು ಕ್ರಿಸ್ಟಲ್ ಮ್ಯೂಸಿಕ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಜಾಕಿ ಶೋಕಿವಾಲ ಚಿತ್ರದ ನಿರ್ದೇಶಕ, ಇವತ್ತಿಗೆ ನನ್ನ ಮೊದಲ ನಿರ್ದೇಶನದ ಶೋಕಿವಾಲ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ ಲಾಕ್ ಡೌನ್ ನಡುವೆ ಬೇರೆ ಕೆಲಸಗಳು ಮುಗಿದಿದ್ದು ತೆಲುಗುಗೆ ಡಬ್ ಮಾಡುವ ಅವಕಾಶ ಬಂದಿರುವುದು ತುಂಬಾ ಖುಷಿಯ ವಿಚಾರ ಈಗ ತೆಲುಗು ಹಾಡುಗಳ ರೆಕಾರ್ಡಿಂಗ್ ಮುಗಿದ್ದಿದ್ದು.

ತುಂಬ ಖುಷಿಯಾಗಿದ್ದೇನೆ ನನಗೆ ಅವಕಾಶ ಕೊಟ್ಟ ಡಾ"T.R. ಚಂದ್ರಶೇಖರ್, ಕಿಶೋರ್ ಸರ್ ಗೆ ತುಂಬಾ ಧನ್ಯವಾದಗಳು . ಸದಾ ಜೊತೆಗಿದ್ದು ಸಹಕರಿಸಿದ ಬಾಲಣ್ಣ, ಹೇಮಂತ್ ಅಣ್ಣ ಹಾಗೂ ನನ್ನ ಡೈರೆಕ್ಷನ್ ಟೀಮ್ ಹಾಗೂ ತಂಡಕ್ಕೆ ಧನ್ಯವಾದಗಳನ್ನು ತಳಿಸಿದರು ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರ . ಅಜಯ್ ರಾವ್, ಸಂಜನಾ ಆನಂದ್ ಗೆ ಈರೀತಿಯ ಸಿನಿಮಾ ಮೊದಲ ತರ ವಾಗಿದ್ದು ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ . ಇಬ್ಬರು ಖುಷಿಯಲ್ಲಿರುವುದೆ ನನಗೆ ಖುಷಿ ಇದೆ ಎನ್ನುತ್ತಾರೆ.ಚಿತ್ರದ ತಾರಾಗಣದಲ್ಲಿ lಶರತ್ ಲೋಹಿತಾಶ್ವ , ಗಿರಿ , ತಬಲಾ ನಾಣಿ , ಮುನಿರಾಜ್, ಅರುಣ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಇನ್ನೂ ತುಂಬಾ ಜನ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳುತ್ತಾರೆ.

Kannada new film

ಇದುವರೆಗೆ ಚನ್ನಪಟ್ಟಣ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು ,ಮಾಗಡಿ ತರ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಅಲ್ಲಿನ ಜನರೆಲ್ಲ ತುಂಬಾ ಸಹಕರಿಸಿದ್ದಾರೆ . ಕೊನೆಯ ಭಾಗದ ಚಿತ್ರೀಕರಣವನ್ನು ಮದ್ದೂರಿನ ಬಳಿ ತೈಲೂರಿನಲ್ಲಿ ಮುಗಿಸುತ್ತಾ ಅದೇ ಜಾಗದಲ್ಲಿ ಕುಂಬಳಕಾಯಿ ಹೊಡೆದಿದ್ದೇವೆ. ಶ್ರೀಧರ್. ವಿ. ಸಂಭ್ರಮ್ ರವರ ಸಂಗೀತವಿದ್ದು 4 ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ರವರ ಸಾಹಿತ್ಯ ಶೋಕಿವಾಲನಿಗಿದೆ. ನವೀನ್ ಕುಮಾರ್.ಎಸ್ ಕ್ಯಾಮೆರಾಮೆನ್, ಕೆ.ಎಂ. ಪ್ರಕಾಶ್ ಎಡಿಟರ್ , ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ... ಎಲ್ಲಾ ಅಂದುಕೊಂಡಂತೆ ಆದರೆ ದಸರಾಗೆ ಶೋಕಿವಾಲನ ದರ್ಶನವಾಗಲಿದೆ ಪ್ರತಿಯೊಂದು ಹಂತದಲ್ಲೂ ನಿಮ್ಮ ಪ್ರೀತಿ ಸಹಕಾರ ಮುಖ್ಯವಾಗಿದ್ದು ನನ್ನ ಮೊದಲ ಹೆಜ್ಜೆಗೆ ನಿಮ್ಮ ಸಹಕಾರವಿರಲಿ , ನಮ್ಮ ತಂಡದ ಮೇಲೆ ಪ್ರೀತಿ ಇರಲಿ ಎಂದು ಹೇಳುತ್ತಾರೆ ನಿರ್ದೇಶಕರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.