Skip to main content
5 ದಿನದ  ಕೈ ಮಗ್ಗ ಉತ್ಸವ.

5 ದಿನದ ವಿಮೋರ್ ಕೈಮಗ್ಗ ಉತ್ಸವ.

5 ದಿನದ ವಿಮೋರ್ "ಬೆಂಗಳೂರು ಕೈಮಗ್ಗ ಉತ್ಸವ"ಕ್ಕೆ ತೆರೆ.

ಕೈ ಮಗ್ಗ ಪ್ರದರ್ಶನ

ಬೆಂಗಳೂರು: ವಿಮೋರ್‌ ಹ್ಯಾಂಡ್‌ಲೂಮ್‌ ಫೌಂಡೇಷನ್‌ ತನ್ನ 45 ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ "ಹ್ಯಾಂಡ್‌ಲೂಮ್‌ ವಾಯೇಜ್" ಐದು ದಿನದ ಕೈಮಗ್ಗ ಉತ್ಸವಕ್ಕೆ ಅದ್ಧೂರಿಯಿಂದ ತೆರೆ ಬಿದ್ದಿದೆ. ಭಾರತದ ಶ್ರೀಮಂತ ಹಿನ್ನೆಲೆ ಇರುವ ಕೈಮಗ್ಗ ಉದ್ಯಮವನ್ನು ಪ್ರೋತ್ಸಾಹಿಸಲು ಐದು ದಿನಗಳ ಕಾಲ ವಿವಿಧ ಬಗೆಯ ಕಾರ್ಯಕ್ರಮವನ್ನೊಳಗೊಂಡ ಉತ್ಸವ ನಡೆಸಲಾಯಿತು.

ಕಂಬಳಿ ನೇಕಾರರ ಜೀವನ ಶೈಲಿ, ಕೈಮಗ್ಗ ಇತಿಹಾಸ ತಿಳಿಸುವ ಕಾರ್ಯಕ್ರಮ, ಫ್ಯಾಷನ್ ಶೋ, ಮಕ್ಕಳಿಂದ ಕೈಮಗ್ಗ ಕುರಿತ ಕತೆ ಹೇಳುವುದು, ಪ್ರಾಚೀನ ಕಾಲದ ಉಡುಗೆಗಳ ಪ್ರದರ್ಶನ, ವಿಚಾರ ಸಂಕಿರಣ ಸೇರಿದಂತೆ ಹತ್ತಾರು ಕಾರ್ಯಕ್ರಮ ಜರುಗಿದವು. ಈ ಕಾರ್ಯಕ್ರಮವು ಉದ್ಯಮದಲ್ಲಿ ಅಂತರವನ್ನು ನಿವಾರಿಸುವ ಪ್ರಯತ್ನದಲ್ಲಿ ನೇಕಾರರು, ವಿನ್ಯಾಸಕರು ಮತ್ತು ಸೀರೆ ಉತ್ಸಾಹಿಗಳನ್ನು ಒಟ್ಟುಗೂಡಿಸುವ ಯಶಸ್ವಿ ಪ್ರಯತ್ನವಾಗಿತ್ತು.

ಪ್ರದರ್ಶನ

ನೂರಾರು ತಜ್ಞರು, ವಿನ್ಯಾಸಕಾರರು, ನೇಕಾರರು, ಕೈಮಗ್ಗ ಫ್ಯಾನ್ಸ್‌ಗಳು ಭಾಗಿಯಾಗಿದ್ದರು. ಕೈಮಗ್ಗ ಶತಮಾನಗಳಿಂದ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಸಹಿಯಾಗಿ ನಿಂತು, ಅದರ ವೈವಿಧ್ಯತೆಯನ್ನು ಮತ್ತು ಆ ಮೂಲಕ ಅದರ ಶ್ರೀಮಂತಿಕೆಯನ್ನು ತೋರಿಸುತ್ತಿದೆ. ಐದು ದಿನಗಳ ಕಾರ್ಯಕ್ರಮದಲ್ಲಿ ಉದ್ಯಮದ ಪ್ರಮುಖರು ಮತ್ತು ಸಂರಕ್ಷಣಾವಾದಿಗಳೊಂದಿಗಿನ ಸಂವಾದಾತ್ಮಕ ಅಧಿವೇಶನಗಳು ಸಹ ನಡೆಯಿತು. ಅಷ್ಟೆ ಅಲ್ಲದೆ ಈ ಕಾರ್ಯಕ್ರಮ "ದಿ ಲೂಮ್ಸ್ ಆಫ್ ಮೆಮರಿ" ಎಂಬ ಗೌರವಕ್ಕೆ ಸಾಕ್ಷಿಯಾಯಿತು . ಶ್ರೀ ಪ್ರಸಾದ್ ಬಿದಪ್ಪ ಅವರು ನೃತ್ಯ ಸಂಯೋಜನೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಉತ್ಸವದ ಕೊನೆಯ ದಿನ ಫ್ಯಾಷನ್ ಶೋ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ವಿನ್ಯಾಸಕ ಮತ್ತು ಭಾರತೀಯ ಕೈಮಗ್ಗಗಳ ಉತ್ಸಾಹಿ ಶ್ರೀ ಪ್ರಸಾದ್ ಬಿದಪ್ಪ, “ಕೈಮಗ್ಗ ವಾಯೇಜ್” ನೊಂದಿಗೆ ಸಂಬಂಧ ಹೊಂದಿದ್ದಕ್ಕೆ ನನಗೆ ಹೆಮ್ಮೆ ಇದೆ. ವಿಮೋರ್‌ ತನ್ನ ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಪಡೆದುಕೊಳ್ಳಲಿ ಎಂದು ಹಾರೈಸಿದರು.

ಪ್ಯಾಸ್ಯಾನ್ ಶೋ

ಇಂದು ಪ್ರದರ್ಶಿಸಲಾದ ಕೈಮಗ್ಗದ ತುಣುಕುಗಳು ಭಾರತದ ಜವಳಿ ಪರಂಪರೆಯ ಸೌಂದರ್ಯ ಮತ್ತು ಶ್ರೀಮಂತಿಕೆಯನ್ನು ನಿಜವಾಗಿಯೂ ತೋರಿಸುತ್ತವೆ. ಖಾದಿಯಿಂದ ಹಿಡಿದು ರೇಷ್ಮೆ ಮತ್ತು ಭಾರವಾದ ವಧುವಿನ ಸೀರೆಗಳು, ಹಾಗೆಯೇ ಲುಂಗಿ ಎಲ್ಲವೂ ಕೈಮಗ್ಗಗಳಿಂದ ತಯಾರಾಗಿ ಸುಂದರಗೊಳಿಸಿವೆ ”ಎಂದು ಪ್ರಸಾದ್ ಹೇಳುತ್ತಾರೆ. ಒಟ್ಟಾರೆ ನಡೆದ ಈ ಐದು ದಿನದ ಕಾರ್ಯಕ್ರಮ ಕೈಮಗ್ಗ ನೇಕಾರರ ಜೀವನಕ್ಕೆ ಹೊಸ ಹುರುಪು ತಂದುಕೊಟ್ಟಿದ್ದಲ್ಲದೇ, ಕೈಮಗ್ಗ ಕಸುಬು ಉಳಿಸುವ ಪ್ರಯತ್ನ ನಡೆಸಿದೆ ಎಂದು ಹೇಳಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.