ಸುಗ್ಗಿ ಹಬ್ಬದಂದು 'ಲಂಕಾಸುರ' ಚಿತ್ರದ ಚಿತ್ರೀಕರಣ ಆರಂಭ
ಸುಗ್ಗಿ ಹಬ್ಬದಂದು 'ಲಂಕಾಸುರ' ಚಿತ್ರದ ಚಿತ್ರೀಕರಣ ಆರಂಭ.

ವಿನೋದ್ ಪ್ರಭಾಕರ್ ಹಾಗೂ ಲೂಸ್ ಮಾದ ಅಭಿನಯದ ಈ ಚಿತ್ರಕ್ಕೆ ಶ್ರೀ ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಚಾಲನೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ 'ಲಂಕಾಸುರ' ಚಿತ್ರದ ಮುಹೂರ್ತ ಸಮಾರಂಭ ದೊಡ್ಡಬಸ್ತಿಯ ಶ್ರೀ ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ನೆರವೇರಿತು. ನಿರ್ಮಾಪಕರ ಮಕ್ಕಳಾದ ಮಾಸ್ಟರ್ ಮಾನಸ್ ಪ್ರಜ್ವಲ್ ಹಾಗೂ ಶ್ರೇಯಸ್ ಪ್ರಜ್ವಲ್ ಕ್ಯಾಮೆರಾ ಚಾಲನೆ ಮಾಡಿದರು. ನಿರ್ದೇಶಕರ ಪುತ್ರ ಮಾಸ್ಟರ್ ಯೋಜಿತ್ ಆರಂಭ ಫಲಕ ತೋರಿದರು.
ಸಂಕ್ರಾಂತಿ ದಿನದಂದ ಚಿತ್ರೀಕರಣ ಆರಂಭವಾಗಿದ್ದು, ಫೆಬ್ರವರಿ ೧೫ ರವರೆಗೂ ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ವಿನೋದ್ ಪ್ರಭಾಕರ್, ಲೂಸ್ ಮಾದ ಯೋಗಿ, ನಾಯಕಿ ಪಾರ್ವತಿ ಅರುಣ್, ಸಹಾನಾ ಗೌಡ ಹಾಗೂ ಅನೇಕ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ದುನಿಯಾ ಚಿತ್ರದ ನಿರ್ಮಾಪಕರಾದ ಸಿದ್ದರಾಜು, ವಿನೋದ್ ಮಾಸ್ಟರ್ ಮುಂತಾದ ಗಣ್ಯರು ಆಗಮಿಸಿ ಶುಭ ಕೋರಿದರು. ಈ ಹಿಂದೆ ಮೂರ್ಕಲ್ ಎಸ್ಟೇಟ್ ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ್ ಕುಮಾರ್ ಲಂಕಾಸುರ ಚಿತ್ರದ ನಿರ್ದೇಶಕರು. ವಿಜೇಯತ್ ಕೃಷ್ಣ ಸಂಗೀತ ನೀಡಿರುವ ಈ ಚಿತ್ರಕ್ಕೆ ಸುಜ್ಞಾನ ಅವರ ಛಾಯಾಗ್ರಹಣವಿದೆ. ಚೇತನ್ ಡಿಸೋಜ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನ 'ಲಂಕಾಸುರ'ನಿಗಿದೆ.
Recent comments