Skip to main content
ಸಿಂಹದ ಮರಿ ದತ್ತು ಪಡೆದ ನಟ ವಸಿಷ್ಠ ಸಿಂಹ

ಸಿಂಹದ ಮರಿ ದತ್ತು ಪಡೆದ ನಟ ವಸಿಷ್ಠ ಸಿಂಹ

ಸಿಂಹದ ಮರಿ ದತ್ತು ಪಡೆದ ನಟ ವಸಿಷ್ಠ ಸಿಂಹ.

Kannada new film

ಅಪ್ಪನ ಹೆಸರಾದ ವಿಜಯ ನರಸಿಂಹ ಎಂದು ನಾಮಕರಣ.

ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವ ಕೆಲಸ ನಡೆಯುತ್ತಿದೆ. ದರ್ಶನ್, ಶಿವಣ್ಣ, ಸೃಜನ್ ಲೋಕೇಶ್, ಚಿಕ್ಕಣ್ಣ ಸೇರಿ ಸಾಕಷ್ಟು ನಟರು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಇದೀಗ ಆ ಸಾಲಿಗೆ ನಟ ವಸಿಷ್ಠ ಸಿಂಹ ಸಹ ಸೇರ್ಪಡೆಗೊಂಡಿದ್ದಾರೆ. ಆದರೆ, ಇನ್ನುಳಿದ ಕಲಾವಿದರಿಗಿಂತ ವಸಿಷ್ಠ ಭಿನ್ನ ಎನಿಸಿಕೊಂಡಿದ್ದಾರೆ.

ಹೌದು, ವರ್ಷದ ಮೊದಲ ದಿನವೇ ಬನ್ನೇರುಘಟ್ಟ ರಾಷ್ಟ್ರೀಯ ಜೈವಿನ ಉದ್ಯಾನವನದಲ್ಲಿ ಎಂಟು ತಿಂಗಳ ಸಿಂಹದ ಮರಿಯನ್ನು ದತ್ತು ಪಡೆದಿದ್ದಾರೆ. ಆ ಪುಟಾಣಿ ಮರಿಗೆ ತಮ್ಮ ತಂದೆಯ ಹೆಸರಾದ ವಿಜಯ ನರಸಿಂಹ ಎಂದು ನಾಮಕರಣ ಮಾಡಿದ್ದಾರೆ. ಇದೆಲ್ಲದಕ್ಕಿಂತ ವಿಶೇಷ ಏನೆಂದರೆ, ವಸಿಷ್ಠ ದತ್ತು ಪಡದೆ ಸಿಂಹದ ಮರಿ ಹುಟ್ಟಿದ್ದು ವರನಟ. ಡಾ. ರಾಜಕುಮಾರ್ ಅವರು ಹುಟ್ಟಿದ ದಿನದಂದು! ಇದೆಲ್ಲದರ ಬಗ್ಗೆ ಮಾತನಾಡುವ ವಸಿಷ್ಠ, 2020 ವರ್ಷ ಯಾವಾಗ ಮುಗಿಯತ್ತದೋ ಎಂದುಕೊಂಡಿದ್ದೇ ಹೆಚ್ಚು.

Kannada new film

ಒಂದಷ್ಟು ಕಹಿ ಘಟನೆ, ಸಾಸು, ನೋವು ಆಗಿದ್ದೇ ಹೆಚ್ಚು. ಇದೀಗ ಅದೆಲ್ಲವನ್ನು ಮರೆತು ಹೊಸ ಭರವಸೆಯೊಂದಿಗೆ ಹೊಸ ಉತ್ಸಾಹದೊಂದಿಗೆ ದಿನ ಶುರುಮಾಡಬೇಕು ಎಂದುಕೊಂಡೇ ಈ ಕೆಲಸ ಶುರುಮಾಡಿದ್ದೇನೆ. ಪ್ರತಿ ವರ್ಷ ಏನಾದರೊಂದು ರೆಸಲ್ಯೂಷನ್ ಇದ್ದೇ ಇರುತ್ತದೆ. ಆ ಆರಂಭವನ್ನು ಸಿಂಹದ ಮರಿಯನ್ನು ದತ್ತು ಪಡೆದುಕೊಳ್ಳುವ ಮೂಲಕ ಆರಂಭಿಸಿದ್ದೇನೆ. ಅಪ್ಪನ ಹೆಸರಾದ ವಿಜಯ ನರಸಿಂಹ ಎಂದೇ ಸಿಂಹದ ಮರಿಗೆ ನಾಮಕರಣ ಮಾಡಿದ್ದೇನೆ ಎಂದರು. ಇಷ್ಟೇ ಅಲ್ಲ ಹೊಸ ಹೊಸ ವರ್ಷಕ್ಕೆ ಹೊಸ ಹೊಸ ಸಿನಿಮಾಗಳ ಬಗ್ಗೆಯೂ ವಸಿಷ್ಠ ಮಾಹಿತಿ ಹಂಚಿಕೊಂಡರು. ಕನ್ನಡದ ಜತೆಗೆ ಪರಭಾಷೆಯ ಪಯಣವೂ ಶುರುವಾಗಿದೆ.

2020ರಲ್ಲಿ ಕನ್ನಡದಲ್ಲಿ ನನ್ನ ಎರಡು ಸಿನಿಮಾಗಳು ಬಿಡುಗಡೆ ಆಗಿದ್ದವು. ಹಾನಿಗಳಾಗಿದ್ದರೂ, ನನಗೆ ಒಂದು ರೀತಿಯಲ್ಲಿ ಪಥ ಸಿಕ್ಕಿತು. ತೆಲುಗಿನಲ್ಲಿ ಎರಡು ಸಿನಿಮಾ ಮುಗಿಸಿದ್ದೇನೆ. ಮೂರನೇ ಸಿನಿಮಾ ಶೂಟಿಂಗ್ಗೆ ಹೊರಟಿದ್ದೇನೆ. ತಮಿಳಿನ ಸಾಕಷ್ಟು ಪ್ರಾಜೆಕ್ಟ್ಗಳು ಬರುತ್ತಿವೆ. ಮಲಯಾಳಂನಲ್ಲಿಯೂ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದೇನೆ. ಒಟ್ಟಿನಲ್ಲಿ ನಮ್ಮ ಕೆಲಸ ಗುರುತಿಸಿ ಬೇರೆ ಇಂಡಸ್ಟ್ರಿಯವರು ಕರೆ ಮಾಡುತ್ತಿದ್ದಾರೆ ಎಂಬುದು ವಸಿಷ್ಠ ಮಾತು. ಇದೇ ವೇಳೆ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದ ಉಸ್ತುವಾರಿ ಅಧಿಕಾರಿ ವನಶ್ರೀ ಅವರು ದತ್ತು ಪಡೆದ ಪ್ರಮಾಣ ಪತ್ರ ಸೇರಿ ಹಲವು ಉಡುಗೊರೆಗಳನ್ನು ವಸಿಷ್ಠ ಅವರಿಗೆ ಹಸ್ತಾಂತರಿಸಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.