Skip to main content
  ​​ಪೊಗರು ಬಳಿಕ ದುಬಾರಿ ಆಗೋಕೆ ಹೊರಟ್ರು ಧ್ರುವ.

​ಪೊಗರು ಬಳಿಕ ದುಬಾರಿ ಆಗೋಕೆ ಹೊರಟ್ರು ಧ್ರುವ.

ಪೊಗರು ಬಳಿಕ ದುಬಾರಿ ಆಗೋಕೆ ಹೊರಟ್ರು ಧ್ರುವ ಸರಳ ಮುಹೂರ್ತ, ನವೆಂಬರ್​ ಕೊನೇ ವಾರದಲ್ಲಿ ಶೂಟಿಂಗ್​ ಶುರು.

Kannada new film

ವಾಸವಿ ಎಂಟರ್​ಪ್ರೈಸಸ್​​ ಅಡಿಯಲ್ಲಿ ಉದಯ್ ಕೆ. ಮೆಹ್ತಾ ಪ್ರೊಡಕ್ಸನ್ಸ್ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ, ಧ್ರುವ ಸರ್ಜಾ ನಾಯಕತ್ವದ ನೂತನ ಸಿನಿಮಾದ ಮುಹೂರ್ತ ಮತ್ತು ಶೀರ್ಷಿಕೆ ಅನಾವರಣ ಕಾರ್ಯ ನೆರವೇರಿದೆ. ಶುಕ್ರವಾರ ಬೆಳಗ್ಗೆ 5 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ನವರಂಗ ಗಣೇಶ್ ದೇವಸ್ಥಾನದಲ್ಲಿ ನೆರವೇರಿದೆ. ಹಿರಿಯ ನಟ ದೊಡ್ಡಣ್ಣ ಮತ್ತು ನಟಿ ತಾರಾ ಆಗಮಿಸಿ ತಂಡದ ಮುಹೂರ್ತಕ್ಕೆ ಚಾಲನೆ ನೀಡಿ, ಕ್ಲಾಪ್​ ಮಾಡಿದರು.

Kannada new film

ಇನ್ನುಳಿದಂತೆ ಚಿತ್ರದ ಬಹುತೇಕ ಕಲಾವಿದರು ಮತ್ತು ತಾಂತ್ರಿಕ ವರ್ಗ ಇದೇ ವೇಳೆ ಹಾಜರಾಗಿತ್ತು. ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ,ನ ನವೆಂಬರ್​ ಕೊನೇ ವಾರದಲ್ಲಿ ಚಿತ್ರೀಕರಣಕ್ಕೆ ಯೋಜನೆ ಸಿದ್ಧಪಡಿಸಿಕೊಂಡಿದೆ. ಪೊಗರು ಸಿನಿಮಾ ನಿರ್ದೇಶನ ಮಾಡಿರುವ ನಂದಕಿಶೋರ್​, ದುಬಾರಿ ಚಿತ್ರಕ್ಕೂ ಆ್ಯಕ್ಷನ್​ ಕಟ್​ ಹೇಳಲಿದ್ದು, ಈಗಾಗಲೇ ಚಿತ್ರಕಥೆ ಎಲ್ಲವೂ ಅಂತಿಮವಾಗಿದೆ. ಈ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಉದಯ್​ ಮೆಹ್ತಾ, ‘ಪ್ರೀ ಪ್ರೊಡಕ್ಷನ್​ ಕೆಲಸಗಳು ಬಹುತೇಕ ಎಲ್ಲವೂ ಮುಗಿದಿವೆ. ಇನ್ನೇನಿದ್ದರೂ ಶೂಟಿಂಗ್​ ಶುರುಮಾಡುವುದಷ್ಟೇ ಕೆಲಸ.

Kannada new film

ಇದೇ ತಿಂಗಳ ಕೊನೆಯಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದೇವೆ. ಬೆಂಗಳೂರು, ಮಂಡ್ಯ ಮತ್ತು ವಿದೇಶದ ಹಲವೆಡೆ ಶೂಟಿಂಗ್ ನಡೆಯಲಿದೆ’ ಎನ್ನುತ್ತಾರೆ. ಈಗಾಗಲೇ 8 ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಉದಯ್ ಮೆಹ್ತಾ, ಇದೀಗ 9 ಚಿತ್ರದಲ್ಲಿ ಧ್ರುವ ಜತೆ ಕೈ ಜೋಡಿಸಿದ್ದಾರೆ. ಅದ್ದೂರಿ ವೆಚ್ಚದಲ್ಲಿ ಈ ಚಿತ್ರ ಸಿದ್ಧವಾಗಲಿದ್ದು, ಹಿಂದೆಂದೂ ಕಾಣಿಸದ ರೀತಿಯಲ್ಲಿ ಸ್ಟೈಲಿಶ್​ ಆಗಿ ಧ್ರುವ ಕಾಣಿಸಿಕೊಳ್ಳಲಿದ್ದಾರಂತೆ.

Kannada new film

ಇನ್ನುಳಿದ ಪಾತ್ರವರ್ಗವನ್ನು ಶೀಘ್ರದಲ್ಲಿಯೇ ಘೋಷಣೆ ಮಾಡಲಿದೆಯಂತೆ ಚಿತ್ರತಂಡ. ತಾಂತ್ರಿಕ ವರ್ಗದ ಆಯ್ಕೆಯೂ ಮುಗಿದಿದ್ದು, ಚಂದನ್ ಶೆಟ್ಟಿ ಸಂಗೀತ, ಶೇಖರ್ ಚಂದ್ರು ಛಾಯಾಗ್ರಹಣ, ಕೆ.ಎಂ ಪ್ರಕಾಶ್​ ಸಂಕಲನ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ, ಪ್ರಶಾಂತ್ ರಾಜಪ್ಪ ಸಂಭಾಷಣೆ, ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದು, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಶಿವಾರ್ಜುನ್ ಇರಲಿದ್ದಾರೆ. ಬೆಳಗಿನ ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ಮಾಪಕ ಉದಯ್ ಮೆಹ್ತಾ, ನಿರ್ದೇಶಕ ನಂದಕಿಶೋರ್, ಧ್ರುವ, ದೊಡ್ಡಣ್ಣ, ಧರ್ಮ, ಚಂದನ್​ ಶೆಟ್ಟಿ, ಭರ್ಜರೊ ಚೇತನ್, ಮಹೇಶ್ ಕುಮಾರ್, ಪ್ರಥಮ್​ ಸೇರಿ ಹಲವರು ಉಪಸ್ಥಿತರಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.