Skip to main content
ಮನೆ ಬಾಗಿಲಿಗೆ ಬರಲು ಸಿದ್ದನಾಗಿರುವ “ಬೂತಯ್ಯನ ಮೂಮ್ಮಗ”.!

ಮನೆ ಬಾಗಿಲಿಗೆ ಬರಲು ಸಿದ್ದನಾಗಿರುವ “ಬೂತಯ್ಯನ ಮೂಮ್ಮಗ”.!

ಮನೆ ಬಾಗಿಲಿಗೆ ಬರಲು ಸಿದ್ದನಾಗಿರುವ “ ಬೂತಯ್ಯನ ಮೂಮ್ಮಗ”.!

ಮನೆ ಬಾಗಿಲಿಗೆ ಬರಲು ಸಿದ್ದನಾಗಿರುವ “ಬೂತಯ್ಯನ ಮೂಮ್ಮಗ”.!

ಪದೆ ಪದೆ,ನಮಕಾರಮ್ ಚಿತ್ರಗಳ ನಿರ್ದೇಶಕರಾದ ನಾಗರಾಜ್ ಪೀಣ್ಯರವರು ಈಗ ಒಂದು ವಿಭಿನ್ನ ಚಿತ್ರ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಮತ್ತೊಮ್ಮೆ ಭೂತಯ್ಯನ ಮೂಮ್ಮಗ ನನ್ನು ಕರೆತರಲು ಸಿದ್ದರಾಗಿದ್ದಾರೆ. ಮೇ 4ರಂದು ತೆರೆಕಾಣಲು ಸಿದ್ದವಿರುವ ಚಿತ್ರವೇ “ ಬೂತಯ್ಯನ ಮೂಮ್ಮಗ ಅಯ್ಯು” ಈ ಚಿತ್ರವು ಒಂದು ಅದ್ಬುತ ವಿಶೇಷತೆಯನ್ನು ಹೊಂದಿದ್ದು ಸಾವಿನ ಮನೆಯಲ್ಲಿ ಹಾಸ್ಯ ಸಾದ್ಯವೇ ಅನ್ನುವು ಕಾನ್ಸೆಪ್ಟ್ ಇಟ್ಟುಕೊಂಡು ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಹಾಸ್ಯವೇ ಪ್ರಧಾನ ಕಥಾ ಹಂದರವಾಗಿದೆ ಎನ್ನುತ್ತಾರೆ ನಿರ್ದೇಶಕರು.

ಸಾಮನ್ಯವಾಗಿ ಒಂದು ಸಾವಿನ ಮನೆಯಲ್ಲಿ ಎಲ್ಲರು ದುಃಖದ ಸನ್ನಿವೇಶದಲ್ಲಿ ಇರುವುದು ಸರ್ವೆ ಸಾಮಾನ್ಯ ಆದರೆ ಅಂತಹ ಸಂದರ್ಭದ, ಸಾವಿನ ಮನೆಯಲ್ಲಿ ಹುಟ್ಟುವಂತಹ ಕಥೆಯಾಗಿದೆ. ಸಹಜವಾಗಿ ದುಃಖದ ಸನ್ನಿವೇಶದಲ್ಲಿ ಯಾರು ಸಹ ನಗುವನ್ನು ಬಯಸುವುದಿಲ್ಲ ಅಂತಹ ಸಮಯದಲ್ಲಿ ನಡೆಯಬಹುದಾದಂತಹ ಹಾಸ್ಯಗಳ ಸನ್ನಿವೇಶಗಳನ್ನು ಚಿತ್ರದಲ್ಲಿ ಕಾಣಬಹುದಾಗಿದ್ದು, ಕುಟುಂಬ ಸಮೇತರಾಗಿ ಚಿತ್ರವನ್ನು ವೀಕ್ಷಿಸಬಹುದಂತಹ ಮನೋರಂಜನಾತ್ಮಕ ಚಿತ್ರವಾಗಿದೆ ಎನ್ನುತ್ತಾರೆ ನಿರ್ದೇಶಕ ನಾಗರಾಜ್ ಪೀಣ್ಯ.ಇನ್ನೂ ಈ ಚಿತ್ರದ ಸಾವಿನ ಸನ್ನಿವೇಶದ ದೃಶಗಳು ಯಾವುದೇ ಒಬ್ಬ ವ್ಯಕ್ತಿಯ ಮನಸ್ಸಿಗೆ ನೊವುಂಟು ಮಾಡದಂತಹ ಅಲ್ಲದೆ ಆ ಒಂದು ಸನ್ನಿವೇಶದಲ್ಲಿ ನಡೆಯುವ ಹಾಸ್ಯ ದೃಶಗಳು ಹೆಗಿರುತ್ತವೆ ಅನ್ನುವಂತಹದು ವಿಶೇಷವಾಗಿರುತ್ತದೆ ಅನ್ನುತ್ತಾರೆ ನಿರ್ದೇಶಕರು.

​   ​​   ​​   ​

ಚಿತ್ರಕ್ಕೆ ನಂದ ಕುಮಾರ್ ರವರ ಛಾಯಗ್ರಹಣವಿದ್ದು ಗ್ರಾಮಂತರ ಬಾಗಗಳಲ್ಲಿ ಬಹುತೇಹಕ ಚಿತ್ರೀಕರಣಗೊಂಡಿದ್ದು,ಹಳ್ಳಿಯ ನೈಜತೆಯನ್ನು ಅತ್ಯಂತ ಅದ್ಬುತವಾಗಿ ತೋರಿಸಿರುವುದು ವಿಶೇಷ. ಅಷ್ಟೇ ಅಲ್ಲದೆ ಚಿತ್ರಕ್ಕೆ ರವಿ ಬಸೂರ್ ರವರ ಸಂಗೀತವಿದ್ದು. ದಿ ವಿಲನ್ ಚಿತ್ರದ ಸಂಕಲನ ಕಾರರಾದ ಶ್ರೀನಿವಾಸ್ ಪಿ.ಬಾಬು ರವರೇ ಈ ಚಿತ್ರಕ್ಕೂ ಸಹ ಸಂಕಲನ ಕಾರ್ಯ ನಿರ್ವಹಿಸಿರುವುದು ಚಿತ್ರದ ವಿಶೇಷ. ಹಾಸ್ಯವೇ ಪ್ರದಾನ ಪಾತ್ರವಾಗಿರುವ ಚಿತ್ರದಲ್ಲಿ ಹಾಸ್ಯ ದಿಗ್ಗಜರ ದಂಡೆ ಚಿತ್ರದಲ್ಲಿ ಕಾಣಬಹುದಾಗಿದ್ದು,ಬೂತಯ್ಯನ ಮೂಮ್ಮಗನ ಪಾತ್ರದಲ್ಲಿ ಚಿಕ್ಕಣ್ಣ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದ್ದಾರೆ

ಹಿರಿಯ ಹಾಸ್ಯಕಲಾವಿದರಾದ ಹೂನ್ನವಳ್ಳಿ ಕೃಷ್ಣ,ಉಮೇಶ್, ತಬಲನಾಣಿ,ಬುಲೆಟ್ ಪ್ರಕಾಶ್,ಗಿರಿಜ ಲೋಕೆಶ್ ರವರು ಹಾಗು ನಾಯಕಿಯಾಗಿ ಶೃತಿ ಹರಿಹರನ್ ಸೇರಿದಂತೆ ಇತರರು ಸಿನಿರಸಿಕರನ್ನು ರಂಜಿಸಲ್ಲಿದ್ದಾರೆ. ಮೇ 4ರಂದು ರಾಜ್ಯದಾದ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲ್ಲಿದ್ದು ಬೂತಯ್ಯನ ಮೂಮ್ಮಗ ಅಯ್ಯು ಹೇಗಿರುತ್ತಾನೆಂಬುದನ್ನು ಚಿತ್ರಮಂದಿರಗಳಲ್ಲಿ ನೊಡಬಹುದಾಗಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.