Skip to main content
ಲೌಡ್ ಸ್ಪೀಕರ್ ಪ್ಲೀಸ್.

ಲೌಡ್ ಸ್ಪೀಕರ್ ಪ್ಲೀಸ್.

ಲೌಡ್ ಸ್ಪೀಕರ್ ಪ್ಲೀಸ್.

ಲೌಡ್ ಸ್ಪೀಕರ್ ಪ್ಲೀಸ್. ಚಿತ್ರ ತಂಡ

"ಬೇಜಾರಾದ್ರೆ ಚಡ್ಡಿ ಒಳಗೆ ಇರುವೆ ಬಿಟ್ ಕ್ಕೊಳ್ಳಿ" ಎಂಬ ಕ್ಯಾಚಿ ಹಾಡಿನೊಂದಿಗೆ ಪ್ರೇಕ್ಷಕರನ್ನ ರಂಜಿಸುವಲ್ಲಿ ಸಿದ್ದವಾಗಿರುವ ಚಿತ್ರ ತಂಡ ಬಹುತೇಕ ಚಿತ್ರೀಕರಣ ಮುಗಿಸಿದ್ದು ಸದ್ಯ ವಿಭಿನ್ನ ರೀತಿಯಾದ ಪ್ರಮೋಷನ್ ಹಾಡಿನ ಮೂಲಕ ಧ್ವನಿ ಸುರುಳಿ ಬಿಡುಗಡೆ ಗೊಳಿಸಿದೆ ಚಂದನ್ ಶೆಟ್ಟಿಯವರು ಹಾಡಿರುವಂತಹ ಪ್ರಮೋಷನ್ ಸಾಂಗ್ ದ್ವನಿ ಸುರುಳಿ ಬಿಡುಗಡೆ ಮುನ್ನವೇ ಚಿತ್ರದ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಹಾಡನ್ನು ಬಿಡುಗಡೆಗೊಳಿಸಿದ್ದು ವಿಶೇಷ. ಆನಂದ್ ಆಡಿಯೋ ಸಂಸ್ಥೆ ಮೂಲಕ ಹಾಡುಗಳು ಹೊರತಂದಿದ್ದು ಚಿತ್ರಕ್ಕೆ ಹರ್ಷವರ್ದನ್ ರಾಜ್ ಸಂಗೀತ ನಿರ್ದೇಶಕರಾಗಿದ್ದಾರೆ.

ಲೌಡ್ ಸ್ಪೀಕರ್ "world's most dangerous game" ಎಂಬ ಶೀರ್ಷಿಕೆ ಅಡಿಯಲ್ಲಿ ಮೂಡಿ ಬಂದಿರುವ ಚಿತ್ರ ಪ್ರಸ್ತುತ ಎಲ್ಲರ ಮನೆಗಳಲ್ಲಿ ನಡೆಯುವಂತಹ ಸನ್ನಿವೇಶಗಳೆ ಚಿತ್ರದ ಕಥಾ ಹಂದರವಾಗಿದ್ದು ಹಾಸ್ಯ ಪ್ರದಾನವಾಗಿರುವ ಈ ಚಿತ್ರದಲ್ಲಿ ತಾಂತ್ರಿಕ ಯುಗದಲ್ಲಿ ಎಲ್ಲರು ಸಹ ಮೊಬೈಲ್ ಗಳನ್ನು ಬಳಸುವುದು ಸಹಜ ಅದರೇ ಪ್ರತಿಯೊಬ್ಬರಿಗು ರಹಸ್ಯವೆಂಬುದು ಅದೇ ಮೂಬೈಲ್ ನಲ್ಲಿ ಅಡಗಿರತ್ತದೆ ಅದನ್ನು ಹೊರತೆಗೆದರೆ ಏನಾಗುತ್ತದೆ ಎಂಬುದನ್ನು ಚಿತ್ರ ಬಿಡುಗಡೆ ನಂತರ ಚಿತ್ರಮಂದಿರಗಳಲ್ಲಿ ವೀಕ್ಷಿಸಬೇಕೆಂಬ ಕೂತುಹಲ ಇರಲಿ ಎನ್ನುತ್ತಾರೆ ಚಿತ್ರತಂಡ.

ಚಿತ್ರ ತಂಡ

ನಿರ್ದೇಶಕರು ಹಾಗು ನಿರ್ಮಾಪಕರ ಹೊರತಾಗಿ ಬಹುತೇಕ ಹೊಸಬರೆ ಅಭಿನಯಿಸಿರುವ ಚಿತ್ರದ ತಾರಗಣದಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ರಂಗಯಣ ರಘು,ಅಬಿಷೇಕ್ ಜೈನ್,ಉದಯ ಕಾಮಿಡಿ ಹಾಸ್ಯ ಕಲಾವಿದ ವಿಜಯ್.ಕೃಷ್ಣಲೀಲಾ ಖ್ಯಾತಿಯ ಅನುಷ,ಮಂಗಳೂರು ಮೂಲದ ಡಾ|| ದಿಶಾ ದಿನಕರ್.ರೇಡಿಯೊ ಜಾಕಿಯಾಗಿ ಹತ್ತು ವರ್ಷಗಳ ಹಿಂದೆ ವೃತ್ತಿ ಅರಂಭಿಸಿ ಪ್ರಸ್ತುತ ವಾಯ್ಸ್ ಒವರ್ ಕಲಾವಿದರಾಗಿರುವ ಸುಮಂತ್ ಭಟ್, ಭಾಸ್ಕರ್ ನಿನಾಸಂ ಅಭಿನಯಿಸಿದ್ದು ದೈರ್ಯಂ ಖ್ಯಾತಿಯ ಡಾ|| ಕೆ.ರಾಜು ನಿರ್ಮಾಣದಲ್ಲಿ ರಾಜ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ 2ನೇ ಚಿತ್ರ ಲೌಡ್ ಸ್ಪೀಕರ್ ಚಿತ್ರದ ಕಥೆ ತುಂಬ ಅದ್ಬುತವಾಗಿದ್ದು ಪ್ರತಿಯೊಬ್ಬರು ಮೆಚ್ಚಿಕ್ಕೊಳ್ಳುವಂತಹ ರೀತಿಯಲ್ಲಿ ಚಿತ್ರ ಮೂಡಿಬಂದಿದ್ದು ಚಿತ್ರಕ್ಕೆ,

ಕಿರಣ್ ಹಂಪಾಪುರ್ ರವರ ಛಾಯಾಗ್ರಹಣವಿದ್ದು ಚಿತ್ರದಲ್ಲಿನ ಅವಕಾಶಕ್ಕಾಗಿ ಸಂತಸ ವ್ಯಕ್ತಪಡಿಸಿದರು ಅಲ್ಲದೆ ಚಿತ್ರದಲ್ಲಿ ಅಭಿನಯಿಸಿರುವ ಪ್ರತಿ ಯೊಬ್ಬರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬುವಲ್ಲಿ ಶ್ರಮ ವಹಿಸಿದ್ದಾರೆ ಅಲ್ಲದೆ ಚಿತ್ರದ ಕಥೆ ಅತ್ಯಂತ ಕುತೂಲಕಾರಿಯಾಗಿರುವುದೇ ಈ ಚಿತ್ರದ ನಿರ್ಮಾಣಕ್ಕೆ ಪ್ರೇರಕ ಎನ್ನುತ್ತಾರೆ ನಿರ್ಮಾಪಕರು ಇನ್ನೂ ಚಿತ್ರ ಜೂನ್ ನಲ್ಲಿ ತೆರೆ ಕಾಣಲಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.